Online Shopping : ಆನ್ಲೈನ್ ಮೂಲಕ ಪಾರ್ಸೆಲ್ ತೆಗೆದುಕೊಳ್ಳುವ ಮೊದಲು ಹೀಗೆ ಮಾಡಿದರೆ ಮೋಸ ಹೋಗುವ ಪ್ರಮೇಯ ಬರಲ್ಲ!

ಇತ್ತೀಚಿನ ದಿನಗಳಲ್ಲಿ ಮನೆಯಲ್ಲೆ ಕುಳಿತು ಆರ್ಡರ್ ಮಾಡಿದರೆ ವಸ್ತುಗಳು ಸಲೀಸಾಗಿ ಮನೆಗೆ ತಲುಪುತ್ತವೆ. ಮನೆಗೆ ಬೇಕಾಗುವ ದಿನಸಿ ವಸ್ತುವಿನಿಂದ ಹಿಡಿದು ಮಕ್ಕಳ ಆಟಿಕೆ, ಟಿ.ವಿ, ಲ್ಯಾಪ್ ಟಾಪ್, ರೆಫ್ರಿಜರೇಟರ್ ಹೀಗೆ ನಾನಾ ವಸ್ತುಗಳನ್ನು ಆನ್ಲೈನ್ ನಲ್ಲಿ ಕ್ಷಣ ಮಾತ್ರದಲ್ಲಿ ಹಣ ಪಾವತಿ ಮಾಡಿ ಮನೆ ಬಾಗಿಲಿಗೆ ತರಿಸಿಕೊಳ್ಳುವ ಸೌಲಭ್ಯದಿಂದ ದಿನವಿಡೀ ಕೆಲಸದಲ್ಲಿ ತೊಡಗಿರುವ ಮಹಿಳೆಯರಿಗೆ, ಆಫೀಸ್ಗೆ ತೆರಳುವ ಗಂಡಸರಿಗೆ, ಪ್ರತಿಯೊಬ್ಬರಿಗೂ ನೆರವಾಗುತ್ತದೆ. ಹಾಗಾಗಿ, ಅಂಗಡಿಗಳಿಗೆ ಓಡಾಡುವ ತಾಪತ್ರಯ ಎದುರಾಗುವುದಿಲ್ಲ.

ಹೀಗೆ ಆರ್ಡರ್ ಮಾಡಿ ಪಡೆದುಕೊಳ್ಳುವ ಸಂದರ್ಭದಲ್ಲಿ ಗ್ರಾಹಕ ಮೋಸ ಹೋಗುವ ಸಾಧ್ಯತೆ ದಟ್ಟವಾಗಿದೆ. ಕೆಲವೊಮ್ಮೆ ಲ್ಯಾಪ್ ಟಾಪ್ ಆರ್ಡರ್ ಮಾಡಿ ಕಲ್ಲು ದೊರೆಯುವ, ಇಲ್ಲವೇ ಬೇರೆ ವಸ್ತುಗಳು ಸಿಗುವ ಸಾಧ್ಯತೆ ಕೂಡ ಇದೆ. ಗ್ರಾಹಕರು OTP ನೀಡುವ ಮೊದಲು ಡೆಲಿವರಿ ಏಜೆಂಟ್‌ನೊಂದಿಗೆ ಪಾರ್ಸೆಲ್ ಅನ್ನು ತೆರದು, ಆರ್ಡರ್ ಮಾಡಿದ ಉತ್ಪನ್ನವನ್ನು ಪಾರ್ಸೆಲ್ ಹೊಂದಿದೆಯೇ ಎಂದು ಪರಿಶೀಲಿಸಬೇಕು. ಜೊತೆಗೆ ಮೊಬೈಲ್ ಇಲ್ಲವೇ ಇತರ ಉತ್ಪನ್ನ ಆರ್ಡರ್ ಮಾಡಿದಾಗ ಅದು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು.
ಆನ್ಲೈನ್ ವೆಬ್ ಸೈಟ್ ಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್‌ನಂತಹ ಉತ್ಪನ್ನಗಳನ್ನು ಆರ್ಡರ್ ಮಾಡಿ, ಪಾರ್ಸೆಲ್ ಬಂದಾಗ OTP ಹೇಳುವ ಮೂಲಕ ಉತ್ಪನ್ನವನ್ನು ತೆಗೆದುಕೊಳ್ಳುವುದು ಸಾಮಾನ್ಯ.
ಇತ್ತೀಚೆಗೆ ದೆಹಲಿ ಮೂಲದ ಐಐಎಂ ಪದವೀಧರ ಯಶಸ್ವಿ ಶರ್ಮಾ ಅವರ ಅನುಭವ ವೈರಲ್ ಆಗಿದ್ದು, ಗ್ರಾಹಕರು ಎಷ್ಟು ಜಾಗರೂಕರಾಗಿರಬೇಕು ಎಂಬುದನ್ನು ತೋರಿಸುವ ಘಟನೆ ಇದಾಗಿದೆ.
ಯಶಸ್ವಿ ಶರ್ಮಾ ಅವರು ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಲ್ಯಾಪ್‌ಟಾಪ್ ಅನ್ನು ಆರ್ಡರ್ ಮಾಡಿದ್ದು, ಪಾರ್ಸೆಲ್ ತೆರೆದು ನೋಡಿದಾಗ ಅದರಲ್ಲಿ ಗಾಡಿ ಡಿಟರ್ಜೆಂಟ್ ಇರುವುದು ಕಂಡು ಅಚ್ಚರಿಗೊಂಡಿದ್ದಾರೆ. ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ ಅವರು ತಮ್ಮ ತಂದೆಗಾಗಿ ಲ್ಯಾಪ್‌ಟಾಪ್ ಖರೀದಿಸಿದ್ದು, ಆದರೆ ಲ್ಯಾಪ್ ಟಾಪ್ ನ ಬದಲಿಗೆ ಡಿಟರ್ಜೆಂಟ್ ಬಾರ್‌ಗಳೊಂದಿಗೆ ಬಂದಿದೆ.
ಈ ಬಗ್ಗೆ ಫ್ಲಿಪ್‌ಕಾರ್ಟ್‌ಗೆ ದೂರು ನೀಡಿದಾಗ ಆರಂಭದಲ್ಲಿ ಫ್ಲಿಪ್ ಕಾರ್ಟ್ ಮರುಪಾವತಿಯನ್ನು ನೀಡಲು ನಿರಾಕರಿಸಿದೆ. ಯಶಸ್ವಿ ಶರ್ಮಾ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಫ್ಲಿಪ್‌ಕಾರ್ಟ್ ಮರುಪಾವತಿಯನ್ನು ಮಾಡಲು ಒಪ್ಪಿಕೊಂಡಿದೆ.
ಇಲ್ಲಿ ತಪ್ಪು ದೆಹಲಿಯ ಯಶಸ್ವಿ ಶರ್ಮಾ ವಿಷಯದಲ್ಲಿ ನಡೆದಿದ್ದು, ಓಪನ್ ಬಾಕ್ಸ್ ಡೆಲಿವರಿ ಸಿಸ್ಟಂ ತಿಳಿಯದ ತಂದೆ ಸುಮ್ಮನೆ ಒಟಿಪಿ ಹೇಳಿ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಪಾರ್ಸೆಲ್ ಪಡೆಯಲು ಒಟಿಪಿ ಹೇಳಬಹುದು ಎಂದು ಯೋಚಿಸಿ ಒಟಿಪಿ ಹೇಳಿದ್ದಾರೆ.
ಗ್ರಾಹಕ ವಸ್ತುಗಳನ್ನು ಪಡೆದ ಬಳಿಕ, ಈ-ಕಾಮರ್ಸ್ ಕಂಪನಿಗಳು ತಮ್ಮ ನಿಯಮಾವಳಿಗಳಲ್ಲಿ ಬೇರೆ ಉತ್ಪನ್ನ ಬಂದರೂ ಅಥವಾ ಉತ್ಪನ್ನ ಕೆಲಸ ಮಾಡದಿದ್ದರೂ ತಾವೇ ಜವಾಬ್ದಾರರು ಎಂದು ಹೇಳುತ್ತದೆ.
ಆದರೆ ಪಾರ್ಸೆಲ್ ತೆರೆದಾಗ ಅದರಲ್ಲಿ ಗಾಡಿ ಡಿಟರ್ಜೆಂಟ್ ಸೋಪುಗಳು ಸಿಕ್ಕಿವೆ.ಆದರೆ ಡೆಲಿವರಿ ಬಾಯ್ ಬಂದು ಪಾರ್ಸೆಲ್ ಕೊಡುವ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದರಿಂದ ಯಶಸ್ವಿ ಶರ್ಮಾ ಆ ಸಾಕ್ಷಿ ಸಮೇತ ಫ್ಲಿಪ್ ಕಾರ್ಟ್ ಗೆ ದೂರು ನೀಡಿದ್ದಾರೆ. ಮೊದಲಿಗೆ ಫ್ಲಿಪ್‌ಕಾರ್ಟ್ ದೂರನ್ನು ಸ್ವೀಕರಿಸದೇ ಇದ್ದಾಗ ಪೊಲೀಸ್ ದೂರು ದಾಖಲಿಸಿ, ಫ್ಲಿಪ್‌ಕಾರ್ಟ್ ಮೊತ್ತವನ್ನು ಮರುಪಾವತಿಸಲು ಒಪ್ಪಿಕೊಂಡಿದೆ
ಈ ಓಪನ್ ಬಾಕ್ಸ್ ಡೆಲಿವರಿ ಸಿಸ್ಟಮ್ ಬಗ್ಗೆ ತಿಳಿದುಕೊಂಡು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿದೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಗ್ರಾಹಕರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ವಿಷಯವಿದ್ದು, ಈ ಎರಡೂ ಕಂಪನಿಗಳು ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ದುಬಾರಿ ಉತ್ಪನ್ನಗಳಿಗೆ ಓಪನ್ ಬಾಕ್ಸ್ ಡೆಲಿವರಿ ವ್ಯವಸ್ಥೆಯನ್ನು ನಡೆಸುತ್ತವೆ.
ತೆರೆದ ಬಾಕ್ಸ್ ವಿತರಣಾ ವ್ಯವಸ್ಥೆಯು ತೊಡಕುಗಳನ್ನು ಉಂಟುಮಾಡುತ್ತವೆ. ಮೊಬೈಲ್, ಲ್ಯಾಪ್‌ಟಾಪ್ ಅಥವಾ ಇನ್ನಾವುದೇ ದುಬಾರಿ ವಸ್ತುವನ್ನು ಆರ್ಡರ್ ಮಾಡಿದರೆ, ತೆರೆದ ಬಾಕ್ಸ್ ಡೆಲಿವರಿ ವ್ಯವಸ್ಥೆಯು ಅನ್ವಯಿಸುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು.
ಪಾವತಿ ಆಯ್ಕೆಯನ್ನು ಮಾಡುವ ಮೊದಲು ಇದರ ಬಗ್ಗೆ ಮಾಹಿತಿಯು ಪರದೆಯ ಮೇಲ್ಭಾಗದಲ್ಲಿ ಕಾಣಿಸುತ್ತದೆ. ಓಪನ್ ಬಾಕ್ಸ್ ಡೆಲಿವರಿ ವ್ಯವಸ್ಥೆ ಇದ್ದರೆ, ಪಾರ್ಸೆಲ್ ತಂದ ನಂತರ ಡೆಲಿವರಿ ಏಜೆಂಟ್ ಒಟಿಪಿ ಹೇಳಿ ಪಾರ್ಸೆಲ್ ತೆಗೆದುಕೊಳ್ಳಬಾರದು.
ಗ್ರಾಹಕರು OTP ನೀಡುವ ಮೊದಲು ಡೆಲಿವರಿ ಏಜೆಂಟ್‌ನೊಂದಿಗೆ ಪಾರ್ಸೆಲ್ ಅನ್ನು ತೆರೆಯಬೇಕು. ಗ್ರಾಹಕ ಆರ್ಡರ್ ಮಾಡಿದ ಉತ್ಪನ್ನವನ್ನು ಪಾರ್ಸೆಲ್ ಹೊಂದಿದೆಯೇ ಎಂದು ಖಾತರಿ ಪಡಿಸಿಕೊಳ್ಳಬೇಕು. ಉತ್ಪನ್ನವು ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಕೂಡ ಪರಿಶೀಲಿಸಬೇಕು.
ಎಲ್ಲವೂ ಸರಿಯಾಗಿದ್ದರೆ OTP ಹೇಳಿ ಮತ್ತು ಉತ್ಪನ್ನವನ್ನು ತೆಗೆದುಕೊಳ್ಳಬೇಕು. ಅದರ ಹೊರತಾಗಿ, ಓಪನ್ ಬಾಕ್ಸ್ ಡೆಲಿವರಿ ಸಿಸ್ಟಮ್ ಅನ್ನು ಅನ್ವಯಿಸುವ ಉತ್ಪನ್ನಗಳಿಗೆ, ಕೇವಲ ಪಾರ್ಸೆಲ್ ಅನ್ನು ತೆರೆಯದೆ OTP ಹೇಳಿ ಉತ್ಪನ್ನವನ್ನು ತೆಗೆದುಕೊಳ್ಳಬಾರದು.
ನೀವು OTP ಯನ್ನು ತಿಳಿಸಿ ಮತ್ತು ಡೆಲಿವರಿ ಏಜೆಂಟ್‌ನೊಂದಿಗೆ ಪಾರ್ಸೆಲ್ ಅನ್ನು ತೆರೆಯದೆ ಉತ್ಪನ್ನವನ್ನು ತೆಗೆದುಕೊಂಡರೆ, ನಂತರ ಇ-ಕಾಮರ್ಸ್ ಕಂಪನಿಯು ಪಾರ್ಸೆಲ್‌ನಲ್ಲಿರುವ ವಸ್ತುಗಳಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ.
ಆದ್ದರಿಂದ, ಅಂತಹ ತೊಡಕುಗಳಿಗೆ ಸಿಲುಕುವುದನ್ನು ತಪ್ಪಿಸಲು, ಓಪನ್ ಬಾಕ್ಸ್ ವಿತರಣಾ ವ್ಯವಸ್ಥೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಎಲ್ಲಾ ನಿಯಮಗಳನ್ನು ಓದಿ , ಪಾರ್ಸೆಲ್ ತೆಗೆದುಕೊಳ್ಳುವಾಗ ಮೇಲೆ ತಿಳಿಸಿದ ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಸ್ಮಾರ್ಟ್‌ಫೋನ್‌ನಲ್ಲಿ ಪಾರ್ಸೆಲ್ ತೆರೆಯುವುದನ್ನು ರೆಕಾರ್ಡ್ ಮಾಡುವುದು ಇನ್ನೂ ಉತ್ತಮವಾಗಿದೆ.