Fiber Rich Foods : ನಿರ್ವಿಷ ಮುಕ್ತ ಶರೀರ ನಿಮ್ಮದಾಗಬೇಕೆ? ಈ ಆಹಾರ ನಿಮ್ಮ ಲಿಸ್ಟ್ ನಲ್ಲಿರಲಿ

ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಬಹುತೇಕರಿಗೆ ತಿಳಿದಿದೆ. ಇನ್ನೊಂದೆಡೆ ಆಹಾರದಲ್ಲಿ ಫೈಬರ್ ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಉಳಿಯುತ್ತದೆ.

ಫೈಬರ್ ಸಸ್ಯ ಆಧಾರಿತ ಆಹಾರದ ಒಂದು ಭಾಗವಾಗಿದ್ದು, ಮಾನವ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕಿಣ್ವಗಳಿಂದ ಸುಲಭವಾಗಿ ವಿಭಜನೆ ಆಗುವುದಿಲ್ಲ. ಅದು ದೇಹದಲ್ಲಿ ಅನಗತ್ಯ ಆಹಾರ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಫೈಬರ್‌ಯುಕ್ತ ಆಹಾರಗಳು ಮಲಬದ್ಧತೆಯಂತಹ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುವುದಲ್ಲದೇ, ಫೈಬರ್ ಭರಿತ ಆಹಾರಗಳನ್ನು ಸೇರಿಸುವ ಮೂಲಕ ದೇಹದಲ್ಲಿರುವ ವಿಷಕಾರಿ ಪದಾರ್ಥಗಳನ್ನು ಹೊರಹಾಕಲಾಗುತ್ತದೆ.

ದೇಹದ ಆರೋಗ್ಯದ ಮೇಲೆ ನಾವು ಸೇವಿಸುವ ನಾರಿನ ಅಂಶ ಎರಡು ರೀತಿಯಲ್ಲಿ ಕಂಡು ಬರುತ್ತದೆ. ಕರಗುವ ನಾರಿನ ಅಂಶ ಮತ್ತು ಕರಗದಿರುವ ನಾರಿನ ಅಂಶ. ಕರಗುವ ನಾರಿನ ಅಂಶ , ನೀರನ್ನು ಹೆಚ್ಚಾಗಿ ಹೀರಿಕೊಂಡು ನಮ್ಮ ಜೀರ್ಣಾಂಗದಲ್ಲಿ ಲೋಳೆಯ ರೀತಿಯ ಮಲವನ್ನು ಕರುಳಿನ ಭಾಗಕ್ಕೆ ಚಲಿಸುವಂತೆ ಮಾಡುತ್ತದೆ. ಇದು ನಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುತ್ತದೆ.

ಕರಗದಿರುವ ನಾರಿನ ಅಂಶ ಇದು ಯಾವುದೇ ಕಾರಣಕ್ಕೂ ನಾವು ಆಹಾರ ಸೇವನೆ ಮಾಡುವಾಗ ಕುಡಿಯುವ ನೀರಿನಲ್ಲಿ ಕರಗದೆ ನಮ್ಮ ಮಲ ವಿಸರ್ಜನೆಯ ಸಂದರ್ಭದಲ್ಲಿ ಹೊರ ಬರುವ ಮಲವನ್ನು ಗಟ್ಟಿಯಾಗಿಸಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಫೈಬರ್‌ಯುಕ್ತ ಆಹಾರದ ಸೇವನೆ ತೂಕ ಇಳಿಕೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಅನೇಕ ತರಕಾರಿಗಳು, ಹಣ್ಣುಗಳು, ದ್ವಿದಳ ಧಾನ್ಯಗಳು ನಾರಿನಂಶದ ಉತ್ತಮ ಮೂಲವಾಗಿದೆ.

ನಾರಿನಂಶ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದು ಜೊತೆಗೆ ಕೆಲವು ಬಗೆಯ ಕ್ಯಾನ್ಸರ್ ಸಮಸ್ಯೆಗಳನ್ನು ಕೂಡ ತಡೆಯಬಹುದಾಗಿದೆ.

ಆಹಾರದಲ್ಲಿ ಫೈಬರ್ ಸಮೃದ್ಧವಾಗಿರುವ ತರಕಾರಿಗಳೆಂದರೆ ಪಾಲಕ್, ಕ್ಯಾರೆಟ್, ಬೆಂಡೆಕಾಯಿ, ಬೀಟ್ರೂಟ್, ಅಣಬೆ, ಕುಂಬಳಕಾಯಿ, ಟರ್ನಿಪ್, ಇತ್ಯಾದಿ. ಇವುಗಳಲ್ಲದೆ, ಕೋಸುಗೆಡ್ಡೆ, ಆಲೂಗಡ್ಡೆ, ಪಲ್ಲೆಹೂವು ಮತ್ತು ಸ್ಕ್ವಾಷ್ ಗಳು ಸಹ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ.

ಹಣ್ಣುಗಳಲ್ಲಿ ಉತ್ತಮ ಗುಣಮಟ್ಟದ ನಾರಿನಂಶವಿರುತ್ತದೆ. ಸೇಬು, ಪೇರಲೆ, ಪೀಚ್, ಒಣದ್ರಾಕ್ಷಿ, ಬಾಳೆಹಣ್ಣು, ಕಿತ್ತಳೆ, ಅವಕಾಡೋ ಮತ್ತು ಅಂಜೂರದ ಹಣ್ಣುಗಳು, ಇವುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೈಬರ್ ಇರುತ್ತವೆ . ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಆಹಾರದಲ್ಲಿ ಸೇರಿಸಿದರೆ, ಇದರಿಂದ ದೇಹವನ್ನು ನಿರ್ವಿಷಗೊಳಿಸಲು ಸಹಕಾರಿಯಾಗುತ್ತದೆ.

ಅಜೀರ್ಣತೆ, ಮಲಬದ್ಧತೆ ಎದುರಾದ ಕ್ಷಣದಲ್ಲಿ ದೇಹದಲ್ಲಿ ಅವಶ್ಯಕವಾಗಿ ನಾರಿನ ಅಂಶ ಅಥವಾ ಫೈಬರ್ ಬೇಕಾಗಿದ್ದು, ಫೈಬರ್ ಒಂದು ಕಾರ್ಬೋಹೈಡ್ರೇಟ್ ಅಂಶದ ಪ್ರಕಾರವಾಗಿದ್ದು, ನೈಸರ್ಗಿಕವಾಗಿ ಗಿಡಗಳಿಂದ ಸಿಗುವ ಎಲ್ಲಾ ಬಗೆಯ ಆಹಾರ ಪದಾರ್ಥಗಳಲ್ಲಿ ಯಥೇಚ್ಛವಾಗಿ ಸಿಗುತ್ತದೆ.

ದೇಹದಿಂದ ವಿಷವನ್ನು ಹೊರಹಾಕಲು ನೀರು ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ. ದಿನವಿಡೀ 3-4 ಲೀಟರ್ ನೀರನ್ನು ಕುಡಿಯುವುದರಿಂದ ಅದು ದೇಹವನ್ನು ತೇವಾಂಶದಿಂದ ಇರಿಸುತ್ತದೆ. ದ್ವಿದಳ ಧಾನ್ಯಗಳು ಮತ್ತು ಬೀಜಗಳು ಫೈಬರ್ ನ ಸಮೃದ್ಧಧ ಮೂಲಗಳಾಗಿವೆ.

ಬೀನ್ಸ್, ಕಿಡ್ನಿ ಬೀನ್ಸ್, ಕಡಲೆ,ಲಿಮಾ ಬೀನ್ಸ್ ಮತ್ತು ಸ್ವೀಟ್ ಬಟಾಣಿ ಸೇರಿದಂತೆ ದ್ವಿದಳಧಾನ್ಯಗಳು ಆಹಾರದಲ್ಲಿ ಫೈಬರ್ ಸಮೃದ್ಧವಾಗಿವೆ. ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದು ಆರೋಗ್ಯವನ್ನು ಹದಗೆಡಿಸುತ್ತದೆ ಮತ್ತು ಈ ಸಮಯದಲ್ಲಿ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಫೈಬರ್ ಸಮೃದ್ಧವಾಗಿರುವ ಆಹಾರಗಳು ಈ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಧಾನ್ಯಗಳಲ್ಲಿ ನಾರಿನಂಶವು ಉತ್ತಮವಾದ ಮಟ್ಟದಲ್ಲಿರುತ್ತದೆ. ಬ್ರೌನ್ ರೈಸ್, ಪಾಪ್ಕಾರ್ನ್, ಓಟ್ ಮೀಲ್, ಧಾನ್ಯಗಳಿಂದ ತಯಾರಿಸಿದ ಬ್ರೆಡ್, ಸಂಪೂರ್ಣ ಗೋಧಿ ಪಾಸ್ತಾ, ಚೂರು ಮಾಡಿದ ಗೋಧಿ, ದ್ರಾರ್ಕ್ಷಿ ಬೀಜಗಳು, ಸಿರಿಧಾನ್ಯಗಳು ಮುಂತಾದವುಗಳಲ್ಲಿ ಫೈಬರ್ ಸಮೃದ್ಧವಾಗಿವೆ.

ಮಲಬದ್ಧತೆಯ ನಿಯಮಿತ ಸಮಸ್ಯೆಯು ಪೈಲ್ಸ್‌ನಂತಹ ಗಂಭೀರ ಕಾಯಿಲೆಗೆ ಕಾರಣವಾಗಬಹುದು, ಹೀಗಾಗಿ, ಮಲಬದ್ಧತೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು.

ದೇಹದಲ್ಲಿ ಫೈಬರ್ ಕೊರತೆಯು ಮಲಬದ್ಧತೆಗೆ ಪ್ರಮುಖ ಕಾರಣವಾಗಿದೆ. ಫೈಬರ್ ಭರಿತ ಆಹಾರವು ದೇಹದ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವ ಜೊತೆಗೆ , ವ್ಯಾಯಾಮವು ಸಹ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

Leave A Reply

Your email address will not be published.