ಈ ದೇಶದ ಜೊತೆ ಸಂಪರ್ಕ ಹೊಂದಿದ್ದ PFI ಗೆ ಹರಿದು ಬಂತು ಹಣದ ಹೊಳೆ!!!
ಟರ್ಕಿ ದೇಶದ ಜೊತೆ ಸಂಪರ್ಕ ಹೊಂದಿದ್ದ ಪಿಎಫ್ಐಗೆ ಹರಿದುಬಂದ ಹಣದ ಹೊಳೆ ಪಿಎಫ್ಐ ಮುಖಂಡರನ್ನು ತೀವ್ರ ವಿಚಾರಣೆ ನಡೆಸುತ್ತಿರುವ ಎನ್ಐಎ, ಆರೋಪಿಗಳಿಂದ ಒಂದೊಂದೇ ಮಾಹಿತಿಯನ್ನು ಹೊರಹಾಕಿಸುತ್ತಿದೆ. ಟರ್ಕಿ ದೇಶದ ಜತೆ ಸಂಪರ್ಕ ಹೊಂದಿರುವ ವಿಚಾರ ಕೂಡ ಬೆಳಕಿಗೆ ಬಂದಿದೆ.
ಇತ್ತೀಚೆಗಷ್ಟೇ ಪಿಎಫ್ ಐ ಯನ್ನು 5 ವರ್ಷಗಳ ಕಾಲ ಕೇಂದ್ರ ಸರಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. ಹಾಗೂ ಈಗ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡರನ್ನು ಎನ್ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ಆರೋಪಿಗಳು ಸಾಕಷ್ಟು ಮಾಹಿತಿಯನ್ನು ಹೇಳಿದ್ದಾರೆ. ಇದೀಗ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಪಿಎಫ್ಐಗೆ ಟರ್ಕಿ ದೇಶದ ಜತೆ ಸಂಪರ್ಕ ಹೊಂದಿದ್ದ ಬಗ್ಗೆ ತಿಳಿದುಬಂದಿದ್ದು, ಟರ್ಕಿ, ಕತಾರ್ ದೇಶಗಳಿಂದ ಹಣದ ಹೊಳೆಯೇ ಹರಿದುಬಂದಿದೆ ಎಂಬ ಮಾಹಿತಿ ಹೊರಬಿದ್ದಿದೆ ಎಂದು ವರದಿಯಾಗಿದೆ.
ಪಿಎಫ್ ಐ ಗೆ ಟರ್ಕಿ, ಕತಾರ್ ದೇಶಗಳಿಂದ ಕೇರಳ ಮೂಲಕ ಹವಲಾ ಹಣ ರವಾನೆಯಾಗುತ್ತಿತ್ತು. ಅನಂತರ ದೇಶದ ವಿವಿಧ ಕಡೆಗಳಲ್ಲಿರುವ ಪಿಎಫ್ಐ ಖಾತೆಗಳಿಗೆ ವರ್ಗಾವಣೆಯಾಗುತ್ತಿತ್ತು ಎನ್ನಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಹೀಗೆ ಸಾರಾಸಗಟಾಗಿ ಬಂದ ಹಣವು ದೇಶ ವಿರೋಧಿ ಕೃತ್ಯಕ್ಕೆ ಬಳಸಲು ಹಾಗೂ ಸರ್ಕಾರದ ವಿರುದ್ಧದ ಪ್ರತಿಭಟನೆ ಮತ್ತು ಅಪರಾಧಿ ಕೃತ್ಯಗಳಲ್ಲಿ ಬಂಧಿತ PFI ಸದಸ್ಯರ ಕುಟುಂಬಗಳಿಗೆ ನೆರವು ಮತ್ತು ತರಬೇತಿ ಶಿಬಿರಗಳಿಗೆ ಬಳಕೆ ಮಾಡಲು ಉಪಯೋಗವಾಗುತ್ತಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ.
ಪಿಎಫ್ಐನ ಒಂದು ತಂಡ ಕತಾರ್ನಲ್ಲಿನ ದೋಹ ಎಂಬ ಪ್ರದೇಶಕ್ಕೆ ಭಾರತದ ಬೇಟಿ ನೀಡಿದ್ದು, ಟರ್ಕಿಯಿಂದ ಸಹ ಒಂದು ತಂಡ ಕತಾರ್ನ ದೋಹಕ್ಕೆ ಬಂದಿದೆ. ಹಾಗೂ ಎರಡು ದಿನಗಳ ಕಾಲ ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ. ದೇಶದಲ್ಲಿ ನಡೆದ ಸಿಎಎ ಪ್ರತಿಭಟನೆ ಸೇರಿ ಬೇರೆ ಬೇರೆ ಹಂತದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಎಲ್ಲಾ ಈ ಟರ್ಕಿಯಿಂದ ಹಣ ರವಾನೆ ಅಗಿದೆ. ಈ ಹಣವು ಟರ್ಕಿ ಮೀಟಿಂಗ್ ಬಳಿಕ ವರ್ಗಾವಣೆಯಾಗಿದೆ. ಇದಾದ ಬಳಿಕ ಪಿಎಫ್ಐನಿಂದ ತೀವ್ರ ಚಟುವಟಿಕೆಗಳು ಆರಂಭವಾಗಿದ್ದವು ಎಂದು ವರದಿಯಾಗಿದೆ. ಸದ್ಯ ಟರ್ಕಿಗೆ ಹೋಗಿದ್ದು, ಅಲ್ಲಿಂದ ಭಾರತಕ್ಕೆ ಹಣ ಬಂದಿದ್ದು ಎಲ್ಲವನ್ನು ಟೈಮ್ ಮ್ಯಾಪಿಂಗ್ ಮಾಡಿರುವ ಎನ್ಐಎ ಟರ್ಕಿ ತೆರಳಿದ್ದ ಸಂಪೂರ್ಣ ಸಾಕ್ಷಿಗಳನ್ನು ಕಲೆಗಾಕಿಕೊಂಡಿದೆ. ಇದನ್ನು ಮುಂದಿಟ್ಟುಕೊಂಡು ಪಿಎಫ್ಐ ಮುಖಂಡರನ್ನು ವಿಚಾರಣೆ ಮಾಡಲಾಗುತ್ತಿದೆ.