ಮತ್ತೆ ಪ್ರೀತಿಯಲ್ಲಿ ಬಿದ್ದ ನಟಿ ಸಮಂತಾ | ಯಾರು ಆತ ಗೊತ್ತೇ?

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಏನು ಮಾಡಿದರೂ ಸುದ್ದಿಯಾಗುತ್ತಾ ಇರುತ್ತದೆ. ನಟ ನಾಗಚೈತನ್ಯ( ಈಗ ಎಕ್ಸ್ ಗಂಡ)ನಿಂದ ದೂರ ಆದ ನಂತರ ಆಕೆಯ ಅಭಿಮಾನಿಗಳು ಸಮಂತಾ ಮೇಲೆ ಒಂದು ಕಣ್ಣಿಟ್ಟಿದ್ದಾರೆ ಎಂದರೆ ತಪ್ಪಾಗಲಾರದು. ನಟಿಯ ಆರೋಗ್ಯದ ಬಗ್ಗೆ ಹತ್ತಾರು ಅಂತೆ-ಕಂತೆಗಳ ಸುದ್ದಿ ಬಂದಿತ್ತು. ಇವುಗಳಿಗೆ ಸಮಂತಾ (Samantha) ನೇರವಾಗಿ ಉತ್ತರ ನೀಡಿಲ್ಲ. ಆದರೆ ಸಮಂತಾ ಅವರಿಗೆ ಮತ್ತೆ ಪ್ರೇಮಾಂಕುರ (Love) ಆಗಿದೆಯೇ ಎಂದು ಜನ ಊಹೆ ಮಾಡೋಕೆ ಶುರು ಮಾಡಿದ್ದಾರೆ. ಅದಕ್ಕೆ ಕಾರಣ ಆಗಿರುವುದು ಒಂದು ಹೊಸ ಪೋಸ್ಟ್​. ಈ ಬಗ್ಗೆ ಫ್ಯಾನ್ಸ್​ ವಲಯದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ.

https://www.instagram.com/p/CjjsMzPL03F/?utm_source=ig_web_copy_link

ಸಮಂತಾ ಹಂಚಿಕೊಂಡ ಒಂದು ಫೋಟೋ ಹೆಚ್ಚು ಗಮನ ಸೆಳೆಯುತ್ತಿದೆ. ‘ನೀವು ಎಂದಿಗೂ ಒಂಟಿಯಾಗಿ ನಡೆಯುವುದಿಲ್ಲ’ ಎಂಬ ಬರಹ ಇರುವ ಟಿ-ಶರ್ಟ್​ ಧರಿಸಿ ಸಮಂತಾ ಪೋಸ್​ ನೀಡಿದ್ದಾರೆ. ಅಂದರೆ, ಅವರ ಬದುಕಿನಲ್ಲಿ ಮತ್ತೆ ಯಾರೋ ಪಾರ್ಟ್ನರ್​ ಬಂದಿರಬಹುದೇ ಎಂದು ಫ್ಯಾನ್ಸ್​ ಊಹಿಸುತ್ತಿದ್ದಾರೆ.

ಜುಲೈ ನಂತರ ಸಮಂತಾ ಅವರು ಸೋಶಿಯಲ್​ ಮೀಡಿಯಾ ಬಳಸುವುದು ಕಡಿಮೆ ಮಾಡಿದ್ದಾರೆ. ತೀರಾ ಅನಿವಾರ್ಯ ಎನಿಸಿದ ಸಿನಿಮಾ ಅಪ್​ಡೇಟ್​ಗಳನ್ನು ನೀಡಲು ಮಾತ್ರ ಅವರು ಇನ್​ಸ್ಟಾಗ್ರಾಮ್​ ಬಳಸಿದ್ದಾರೆ. ಅನಾರೋಗ್ಯದಿಂದಲೇ ಅವರು ಈ ರೀತಿ ಸೈಲೆಂಟ್​ ಆಗಿದ್ದಾರೆ ಎಂಬುದು ಅನೇಕ ಮಂದಿ ವಾದ ಮಾಡುತ್ತಿದ್ದಾರೆ. ಆದರೆ ಬಹುದಿನಗಳ ಬಳಿಕ ಸಮಂತಾ ಅವರು ಈ ಪೋಸ್ಟ್​ಗಳನ್ನು ಮಾಡಿ ಗಮನ ಸೆಳೆದಿದ್ದಾರೆ.

ನಟ ಅಕ್ಕಿನೇನಿ ನಾಗಚೈತನ್ಯ ಅವರಿಗೆ ವಿಚ್ಛೇದನ ನೀಡಿದ ನಂತರ ಸಿನಿಮಾ ಆಯ್ಕೆಗಳಲ್ಲೂ ನಟಿ ಬೋಲ್ಡ್​ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಅವರ ಕೈಯಲ್ಲಿ ಹಲವು ಆಫರ್​ಗಳಿವೆ. ಪ್ರತಿ ಸಿನಿಮಾದಲ್ಲಿ ಅವರು ಡಿಫರೆಂಟ್​ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಆ ಚಿತ್ರಗಳಿಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ.

Leave A Reply

Your email address will not be published.