ಕಣ್ಣು ತುರಿಕೆಯಿಂದ ಬಳಲುತಿದ್ದೀರ? ಆಯುರ್ವೇದ ಮದ್ದು ಮಾಡಿ
ಇಂದಿನ ಟ್ರಾಫಿಕ್ ನ ಹೊಗೆ, ಧೂಳು ಗಳಿಂದಾಗಿ ಅಥವಾ ಮಕ್ಕಳಿಗೆ ಶಾಲೆಯ ಚಾಕ್ ಪೀಸ್ ಪುಡಿ ಕಣ್ಣಿಗೆ ಹೋಗಿ ಅಲರ್ಜಿಗಳಾಗಿರಬಹುದು. ಆದಾಗ ಕಣ್ಣು ತುರಿಕೆ, ಕೆಂಪು ಆಗುವುದು ಸಾಮಾನ್ಯ. ಇದಕ್ಕಾಗಿ ಒಂದಷ್ಟು ಮನೆಮದ್ದುಗಳನ್ನು ಮಾಡಿ.
ತೀರಾ ಜಾಸ್ತಿ ಆದಾಗ ಮೆಡಿಕಲ್ ಡ್ರಾಪ್ ಗಳನ್ನು ಬಿಡಿ. ಮೊದಲಿಗೆ ತಂಪಾದ ಐಸ್ ಅಥವಾ ನೀರಿನ ಬ್ಯಾಗನ್ನು ಕಣ್ಣಿನ ಮೇಲೆ ಇಡಿ. ಒಂದಷ್ಟುಗಳ ಕಾಲ ಮಸಾಜ್ ಮಾಡಿಕೊಳ್ಳಿ. ನಿಧಾನವಾಗಿ ನಿಮ್ಗೆ ಗೊತ್ತಾಗುತ್ತೆ ಇದರ ಫಲಿತಾಂಶ.
ಕೊತ್ತಂಬರಿ ಬೀಜದ ನೀರು : ಒಂದಷ್ಟು ಹೊತ್ತು ಕಾಲ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನೆಸಿಡಿ. ಇದಾದ ನಂತರ ಒಂದೊಂದು ಡ್ರಾಪ್ ಗಳನ್ನು ಕಣ್ಣಿಗೆ ಬಿಟ್ಟು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮಲಗಿ. ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ನೀಡೇ ನೀಡುತ್ತದೆ.
ರಾತ್ರಿ ಮಲಗುವಾಗ ಕಣ್ಣಿಗೆ ಒಂದು ಡ್ರಾಪ್ ಹಾಲನ್ನು ಬಿಡಿ. ಬಿಟ್ಟಾಗ ಉರಿಯುತ್ತದೆ ಆದರೆ ಇದು ಕೂಡ ಕಣ್ಣು ಉರಿತಕ್ಕೆ ತುಂಬಾ ಒಳ್ಳೆಯದು. ಕಣ್ಣಿನಲ್ಲಿರುವ ಕಲ್ಮಶವನ್ನೆಲ್ಲ ಹಾಲು ಹೋಗಲಾಡಿಸುತ್ತದೆ.
ಸೌತೆಕಾಯಿಯನ್ನು ಸ್ಲೈಸ್ ಮಾಡಿ ಅದನ್ನು ಕಣ್ಣಿಗೆ ಇಟ್ಟುಕೊಳ್ಳಿ. ಬಾಡಿದ ಸೌತೆಕಾಯಿಯನ್ನು ಹೆಚ್ಚಿ ಕಣ್ಣಿಗೆ ಇಟ್ಟುಕೊಂಡರೆ ಪಲಿತಾಂಶವನ್ನು ನೀಡುವುದಿಲ್ಲ. ಹಾಗಾಗಿ ರಸಭರಿತ ಗುಣಮಟ್ಟದ ಸೌತೆಕಾಯಿಯನ್ನು ಕಟ್ ಮಾಡಿ ಅರ್ಧ ಗಂಟೆಗಳ ಕಾಲ ಕಣ್ಣಿಗೆ ಇಟ್ಟುಕೊಂಡು ಮಲಗಿ.
ತುಳಸಿ ನೀರನ್ನು ಕೂಡ ಹಾಕಿದರೆ ಕಣ್ಣಿಗೆ ತುಂಬಾ ಒಳ್ಳೆಯದು. ಸಾಕಷ್ಟು ಗುಣಮಟ್ಟದ ಅಂಶಗಳು ಇದರಲ್ಲಿ ಇರುವುದರಿಂದ ತ್ವಚೆಗೆ ತುಂಬಾ ಒಳಿತು.
ಆದಷ್ಟು ಲ್ಯಾಪ್ಟಾಪ್ ನೋಡುವಾಗ ಗುಣಮಟ್ಟದ ಕನ್ನಡಕವನ್ನು ಬಳಸಿ. ಧೂಳಿನಿಂದ ಆದಷ್ಟು ದೂರವಿರಿ.