ಮಲಗಿಕೊಂಡು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುವ ಅಭ್ಯಾಸ ಇದೆಯಾ? ಈ ಸಮಸ್ಯೆಗಳು ಕಾಡುವುದು ಖಂಡಿತ!!!
ಈಗಿನ ಆಧುನಿಕ ಕಾಲದಲ್ಲಿ ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಕಚೇರಿಗೆ ಹೋಗುವವರವರೆಗೆ ಪ್ರತಿಯೊಬ್ಬರ ಬಳಿಯೂ ಲ್ಯಾಪ್‌ಟಾಪ್ ಇರುವುದು ಸಾಮಾನ್ಯ ಆಗಿದೆ. ಲ್ಯಾಪ್‌ಟಾಪ್ ನಿಂದ ಹಲವಾರು ಕೆಲಸಗಳು ಮಾಡುವುದು ಅನಿವಾರ್ಯ ಹಾಗಾಗಿ ಲ್ಯಾಪ್ ಟಾಪ್ ಅಂದಮೇಲೆ ನಾವು ಮನೆಯಲ್ಲಿ ಸಾಮಾನ್ಯವಾಗಿ ಮೊಬೈಲ್ ನಂತೆ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.
ಲ್ಯಾಪ್‌ಟಾಪ್ ಅನ್ನು ನಮಗೆ ಅನುಕೂಲವಾಗುವಂತೆ ಸರಿಯಾದ ಎತ್ತರದಲ್ಲಿ ಮೇಜಿನ ಮೇಲೆ ಇಟ್ಟುಕೊಳ್ಳುವುದು ಅಥವಾ ಕುರ್ಚಿಯ ಮೇಲೆ ಸರಿಯಾದ ಸ್ಥಾನದಲ್ಲಿ ಕುಳಿತುಕೊಳ್ಳುವುದು ನಮ್ಮ ಅರೋಗ್ಯ ದೃಷ್ಟಿಯಲ್ಲಿ ಉತ್ತಮವಾಗಿದೆ. ಕೆಲವು ವರ್ಷಗಳಿಂದ ಅಂದರೆ ಕೊರೊನಾ ಬಂದ ನಂತರ ಮನೆಯಲ್ಲಿ ಆನ್ಲೈನ್ ಕೆಲಸ ಮಾಡುವುದು ಹೆಚ್ಚಾಗಿದೆ. ಮನೆಯಲ್ಲಿ ಕೆಲಸ ಮಾಡುವ ಸೌಕರ್ಯದ ವಲಯವೂ ಹೆಚ್ಚಾಗಿದೆ ಅಂದರೆ ಏನಾದರೂ ತಿಂದುಕೊಂಡು, ಮಲಗಿಕೊಂಡು, ಆಕಡೆ ಈಕಡೆ ನಡೆದಾಡಿಕೊಂಡು ನಮಗೆ ಹೇಗೆ ಬೇಕು ಹಾಗೆ ಲ್ಯಾಪ್ ಟ್ಯಾಪ್ ಬಳಸುತ್ತೇವೆ. ಅದರಲ್ಲೂ ಹೆಚ್ಚಾಗಿ ಮಲಗಿಕೊಂಡು ಕೆಲಸ ಮಾಡಲು ಬಯಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಅನೇಕ ಅಡ್ಡ ಪರಿಣಾಮಗಳು ಅಂದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ಕುತ್ತಿಗೆ ನೋವು:
ನಾವು ತುಂಬಾ ಸಮಯ ನೋಡಿದಲ್ಲಿ ನೋಡುತ್ತಿದ್ದಾಗ ಕುತ್ತಿಗೆ ನೋಯುತ್ತದೆ. ಹೊಟ್ಟೆಯ ಮೇಲೆ ಮಲಗಿ ಲ್ಯಾಪ್ ಟಾಪ್ ಬಳಸಿದರೆ ನೆಕ್ ಪೊಸಿಷನ್ ಸರಿಯಿಲ್ಲದಿದ್ದರೆ ಕುತ್ತಿಗೆ ನೋವು ಇನ್ನೂ ಕೂಡ ಹೆಚ್ಚಾಗುತ್ತದೆ. ಈ ಭಂಗಿಯಲ್ಲಿ ಗಂಟೆಗಟ್ಟಲೆ ಇರುವುದು ಕೂಡ ಬೆನ್ನುಹುರಿಯ ಮೇಲೆ ಒತ್ತಡ ಹೆಚ್ಚಿ ತೀವ್ರ ಬೆನ್ನುನೋವಿಗೆ ಕಾರಣವಾಗಬಹುದು. ಹಲವು ವರ್ಷಗಳಿಂದ ಇದೇ ರೀತಿ ಕೆಲಸ ಮಾಡುತ್ತಿದ್ದರೆ ನೀವು ಗರ್ಭಕಂಠದ ನೋವಿನಿಂದ ಬಳಲುತ್ತಿರುವ ಸಾಧ್ಯತೆಯಿದೆ. ಆದ್ದರಿಂದ, ಕುತ್ತಿಗೆ ಮತ್ತು ಬೆನ್ನುಮೂಳೆಯ ಮೇಲೆ ಒತ್ತಡ ಹೇರುವುದು ಉತ್ತಮವಲ್ಲ.
ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ: ಮುಖ್ಯವಾಗಿ ಮಲಗಿರುವಾಗ ಲ್ಯಾಪ್‌ಟಾಪ್ ಬಳಸುವುದರಿಂದ ನಮ್ಮ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ, ಕಣ್ಣುಗಳು ಮತ್ತು ಈ ಎಲೆಕ್ಟ್ರಾನಿಕ್ ಗ್ಯಾಜೆಟ್ ನಡುವೆ ಸರಿಯಾದ ಅಂತರವನ್ನು ನಿರ್ವಹಿಸಲಾಗುವುದಿಲ್ಲ. ಪರದೆಯ ಬೆಳಕು ನಮ್ಮ ಕಣ್ಣುಗಳ ಮೇಲೆ ಪರಿಣಾಮ ಬೀರಲು ಪ್ರಾರಂಭಿಸುತ್ತದೆ. ದೀರ್ಘಾವಧಿಯಲ್ಲಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ.
ಬೆನ್ನುಹುರಿಯ ಸಮಸ್ಯೆ: ನಾವು ಸುಖಾಸುಮ್ಮನೆ ತುಂಬಾ ಸಮಯ ಕೂತರು ಬೆನ್ನು ನೋವು ಬರುವುದು ಸಹಜ. ಹಾಗಿರುವಾಗ ನಿಮ್ಮ ಹೊಟ್ಟೆಯ ಮೇಲೆ ಮಲಗಿ ಲ್ಯಾಪ್‌ಟಾಪ್‌ನಲ್ಲಿ ಗಂಟೆಗಟ್ಟಲೆ ಕೆಲಸ ಮಾಡುವುದು ಬೆನ್ನುಹುರಿಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಅಲ್ಲದೆ ಈ ಕಾರಣದಿಂದಾಗಿ, ಬೆನ್ನಿನ ಸ್ನಾಯುಗಳು ಹಿಗ್ಗಲು ಪ್ರಾರಂಭಿಸುತ್ತವೆ. ಮೂಳೆ ಮತ್ತು ಸ್ನಾಯುಗಳ ನೋವು ಹೆಚ್ಚಾಗುತ್ತದೆ. ಬೆನ್ನುಮೂಳೆಗೆ ಏನಾದರೂ ಸಂಭವಿಸಿದರೆ ಪಾರ್ಶ್ವವಾಯು ಬರುವ ಸಾಧ್ಯತೆಯಿದೆ. ಆದ್ದರಿಂದ ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಆಗಿದೆ.
ಜೀರ್ಣಕಾರಿ ಸಮಸ್ಯೆ: ಕೂತಲ್ಲಿ ಕೂತಾಗ ಜೀರ್ಣ ಕ್ರಿಯೆಗೆ ಅಡೆತಡೆ ಉಂಟು ಮಾಡುತ್ತದೆ. ದೀರ್ಘಕಾಲ ಮಲಗಿ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುವುದರಿಂದ ಜೀರ್ಣ ಕ್ರಿಯೆ ನಿಧಾನ ಆಗಬಹುದು ಜೀರ್ಣ ಆಗದೆ ಇರಬಹುದು. ಇದರಿಂದಾಗಿ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಉಂಟುಮಾಡುತ್ತದೆ. ಮತ್ತು ಹಸಿವು ಕಡಿಮೆಯಾಗಿ ಇಡೀ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಸ್ನಾಯುಗಳ ಕ್ಷೀಣತೆ:ಮಲಗಿ ಲ್ಯಾಪ್ ಟಾಪ್ ಉಪಯೋಗಿಸುವಾಗ ಕೈಗಳಿಗೆ ಹೆಚ್ಚಿನ ಭಾರ ಬಿದ್ದಾಗ ನಮ್ಮ ದೇಹವನ್ನು ಕೈಗಳಿಂದ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಕ್ರಮೇಣ ಇದರಿಂದಾಗಿ ಕೈಗಳ ಹಿಡಿತವನ್ನು ನಾವು ಕಳೆದು ಕೊಳ್ಳಬಹುದು. ಸ್ನಾಯುಗಳ ಬಲ ಕ್ಷೀಣಿಸಬಹುದು.
ಹೀಗೆ ಲ್ಯಾಪ್ ಟಾಪ್ ನ್ನು ದೀರ್ಘವಾಗಿ ಉಪಯೋಗಿಸುವ ಪ್ರತಿಯೊಬ್ಬರೂ ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಿಕೊಳ್ಳುವುದು ಉತ್ತಮ. ಇದರಿಂದಾಗಿ ದೇಹಕ್ಕೆ ಆಗುವ ಅಡ್ಡ ಪರಿಣಾಮವನ್ನು ತಪ್ಪಿಸಿಕೊಳ್ಳಬಹುದು.
Wow, wonderful blog layout! How long have you ever
been running a blog for? you made running a blog
look easy. The full glance of your website is great,
let alone the content material! You can see similar here dobry sklep
Hi there! Do you know if they make any plugins to assist with SEO?
I’m trying to get my site to rank for some targeted keywords but I’m not seeing very good gains.
If you know of any please share. Cheers! I saw similar text here:
List of Backlinks
Hey! Do you know if they make any plugins to help with Search Engine Optimization? I’m trying to
get my site to rank for some targeted keywords but I’m not seeing very good results.
If you know of any please share. Thank you! I saw similar
text here: Escape rooms review