ಅಮಿತಾ ಬಚ್ಚನ್ ಬಗ್ಗೆ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳು!
ಅಮಿತಾ ಬಚ್ಚನ್ ಯಾರಿಗ್ ತಾನೆ ಗೊತ್ತಿಲ್ಲ ಹೇಳಿ? 1960 ದಶಕದಲ್ಲಿ ತನ್ನ ಆಕ್ಟಿಂಗ್ ವೃತ್ತಿಯನ್ನು ಆರಂಭಿಸಿದವರು. ಕೇವಲ ನಟನೆಗೆ ಮಾತ್ರವಲ್ಲದೆ ನಿರ್ಮಾಪಕರು ಕೂಡ ಹೌದು ಮತ್ತು ಪ್ಲೇ ಬ್ಯಾಕ್ ಸಿಂಗರ್ ಕೂಡ. ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.
ಇವರ ಕುರಿತಾದಂತಹ ಇಂಟ್ರೆಸ್ಟಿಂಗ್ ಮಾಹಿತಿ ಹೇಳ್ತೀವಿ ಕೇಳಿ.
ಅಮಿತಾ ಬಚ್ಚನ್ ರವರ ನಿಜವಾದ ಹೆಸರು ಇಂನ್ಖಿಲಾಬ್ ಶ್ರೀವಾಸ್ತವ. ಎಲ್ಲರಿಗೂ ಅಮಿತಾ ಬಚ್ಚನ್ ,ಅಮಿತ್ ಜಿ ಈ ಹೆಸರುಗಳು ಮಾತ್ರ ತಿಳಿದಿವೆ. ಆದರೆ ಇವರ ನಿಜವಾದ ಹೆಸರು ಹೇಳಿದ್ರೆ ಬಹುಶಃ ಯಾರಿಗೂ ಗುರುತಿಸಲು ಆಗುವುದಿಲ್ಲ.
ಬಾಲಿವುಡ್ ನಲ್ಲಿ ಅತಿ ಹೆಚ್ಚು ಡಬಲ್ ರೋಲ್ ಗಳಲ್ಲಿ ಕಾಣಿಸಿಕೊಂಡವರು ಅಮಿತಾ ಬಚ್ಚನ್ ಅಂತನೇ ಹೇಳಬಹುದು. ಸೂರ್ಯವಂಶ, ಮಹಾನ್, ದೇಶ್ ಪ್ರೇಮಿ, ಅದಾಲತ್ ಹೀಗೆ ಹೇಳ್ತಾ ಹೋದ್ರೆ ಲೆಕ್ಕಕ್ಕೆ ಸಿಕ್ಕದು. ಅಷ್ಟು ಸಿನಿಮಾಗಳನ್ನು ಮಾಡಿದ ಕೀರ್ತಿ ಇವರದ್ದು.
ಲಂಡನ್ ನಲ್ಲಿ ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅಮಿತಾ ಬಚ್ಚನ್ ರವರ ಮೇಣದಬತ್ತಿಯ ಪ್ರತಿಮೆ ಇದೆ. ಇದರ ಜೊತೆಗೆ ಚಿತ್ರರಂಗಕ್ಕೆ ನೀಡಿರುವ ಅಪಾರ ಕೊಡುಗೆಗೆ ಫ್ರೆಂಚ್ ಸರ್ಕಾರ ಹಾಗೂ ಆಸ್ಟ್ರೇಲಿಯಾ ಸರ್ಕಾರ ಅಮಿತಾಬ್ ಬಚ್ಚನ್ ಅವರನ್ನು ಸನ್ಮಾನಿಸಿದೆ. ಇದು ಬಾಲಿವುಡ್ ಕ್ಷೇತ್ರಕ್ಕೆ ಮತ್ತು ನಮ್ಮ ದೇಶದ ಸಿನಿಮಾ ಕ್ಷೇತ್ರಗಳಿಗೂ ಹೆಮ್ಮೆ ತರುವಂತಹ ವಿಚಾರ ಅಂತಾನೆ ಹೇಳಬಹುದು.
ಹಿಂದಿಯಲ್ಲಿ ಅಮಿತಾ ಬಚ್ಚನ್ ಅವರ ಸಿನಿಮಾದಲ್ಲೂ ಕೂಡ ಅವರು ನಟಿಸಿರುವ 20 ಸಿನಿಮಾದಲ್ಲಿ ಅವರ ಹೆಸರು ವಿಜಯ್ ಅಂತಾನೇ ಇದೆ. ಮೋಸ್ಟ್ಲಿ ಇದು ಅವರ ಲಕ್ಕಿ ನೇಮ್ ಅಂತ ಅನ್ಸುತ್ತೆ.
ಕೆಲವೊಬ್ಬರಿಗೆ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸವಿರುತ್ತದೆ. ಅದೇ ರೀತಿ ಬಚ್ಚನ್ ಅವರಿಗೆ ಪೆನ್ ಕಲೆಕ್ಷನ್ ಮಾಡುವುದು ಹವ್ಯಾಸವಾಗಿದೆ. ಕೇವಲ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಮಲಯಾಳಂ ಮತ್ತು ಕನ್ನಡದಲ್ಲಿ ಕೂಡ ಬಚ್ಚನ್ ಅವರು ನಟಿಸಿದ್ದಾರೆ.