HEALTH TIPS : Menstruation Time ; ಸ್ಯಾನಿಟರಿ ಪ್ಯಾಡ್ ಬದಲಿಗೆ ಮಹಿಳೆಯರು ಈ ಎಲ್ಲಾ ವಸ್ತುಗಳನ್ನು ಬಳಸಬಹುದು | ಯಾವುದು? ಇಲ್ಲಿದೆ ಕಂಪ್ಲೀಟ್ ವಿವರ!

ಮಹಿಳೆಯರಲ್ಲಿ ಮುಟ್ಟು ನೈಸರ್ಗಿಕ ಕ್ರಿಯೆಯಾಗಿದ್ದು, ಕೆಲವರಿಗಂತೂ ಅತಿ ತ್ರಾಸದಾಯಕ ನೋವು ಉಂಟಾಗುತ್ತದೆ. ಈ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದ್ದು, ಇಲ್ಲದಿದ್ದರೆ ತುರಿಕೆ, ಸೋಂಕಿನ ಸಮಸ್ಯೆ ಉಂಟಾಗುವುದು. ಮುಟ್ಟಿನ ನೋವಿಗಿಂತಲೂ ಆ ಸಮಯವನ್ನು ನಿಭಾಯಿಸುವುದು ಬಹುತೇಕ ಮಹಿಳೆಯರಿಗೆ ಸವಾಲಿನ ಸಂಗತಿಯಾಗಿದೆ. ರಕ್ತಸ್ರಾವದ ಜೊತೆಗೆ ಕಿರಿಕಿರಿಯ ಅನುಭವದಿಂದ ಬಹುತೇಕ ಮಹಿಳೆಯರು ಎಲ್ಲರೊಂದಿಗೆ ಗುಂಪಿನಲ್ಲಿ ಗುರುತಿಸಿಕೊಳ್ಳಲು ಹಿಂದೇಟು ಹಾಕುವಂತಾಗುತ್ತದೆ.

ಮಹಿಳೆಯರಲ್ಲಿ ಸಂಭವಿಸುವ ನೈಸರ್ಗಿಕ ಪ್ರಕ್ರಿಯೆಯಾದ ಮುಟ್ಟಿನ ಸಮಯದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗಿದೆ. ಶುಚಿತ್ವದ ದೃಷ್ಠಿಯಿಂದ ಬಟ್ಟೆಗಳಲ್ಲಿ ಕಲೆಗಳಾಗದಂತೆ ಮಹಿಳೆಯರು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವುದು ಸಾಮಾನ್ಯ.

ಕೆಲವರಲ್ಲಿ ಋತುಚಕ್ರದ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯೂ ಕಂಡು ಬರುತ್ತದೆ. ಹೀಗಿದ್ದಾಗ ಮುಟ್ಟಿನ ದಿನಗಳಲ್ಲಿ ಸಂಪೂರ್ಣ ಸ್ವಚ್ಛವಾಗಿರಲು ಸರಿಯಾದ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ.

ಹಲವು ದಶಕಗಳ ಕೆಳಗೆ ಋತುಸ್ರಾವದ ಸಮಯದಲ್ಲಿ, ರಕ್ತವನ್ನು ಹೀರಿಕೊಳ್ಳಲು ಹಳೆಯ ಬಟ್ಟೆಯನ್ನು ಬಳಸುತ್ತಿದ್ದುದು ಎಲ್ಲರಿಗೂ ತಿಳಿದಿದೆ. ಆದರೆ, ಈಗಲೂ ಮುಟ್ಟಿನ ಅವಧಿಯಲ್ಲಿ, ಬಟ್ಟೆಯನ್ನು ಬಳಸುವವರಿದ್ದಾರೆ. ಆದರೆ, ಹೀಗೆ ಬಳಸಿದ ಬಟ್ಟೆಯನ್ನು ಶುಭ್ರವಾದ ನೀರಿನಲ್ಲಿ ಒಗೆದು ಬಿಸಿಲಿನಲ್ಲಿ ಒಣಗಿಸಿ ಇಟ್ಟುಕೊಳ್ಳುವುದು ಮುಖ್ಯ, ಇಲ್ಲದೇ ಹೋದರೆ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ದಟ್ಟವಾಗಿದೆ.

ಮುಟ್ಟಿನ ಸಮಯದಲ್ಲಿ ಬಟ್ಟೆಯನ್ನು ಹೊರತು ಪಡಿಸಿ ಬಳಸಬಹುದಾದ ಸಾಧನಗಳ ಬಗ್ಗೆ ಮಾಹಿತಿ:


ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪೀರಿಯಡ್ಸ್ ನ ಸಮಸ್ಯೆ ಇರುವುದು ಸಹಜವಾಗಿದ್ದು, ಈ ನೋವು ಯಾತನೆ ಅಸಹನೀಯವಾಗಿರುತ್ತದೆ. ಹೆಚ್ಚಿನ ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್‌ ಬಳಸುವುದು ಸಾಮಾನ್ಯವಾಗಿದೆ. ಆದರೂ, ಸ್ಯಾನಿಟರಿ ಪ್ಯಾಡ್‌ ನಿಂದ ಆಗುವ ಸೌಕರ್ಯ ಮತ್ತು ಅದರ ಪರ್ಯಾಯವಾಗಿ ಬಳಕೆ ಮಾಡುವ ಸಾಧನಗಳ ಬಗ್ಗೆ ಅರಿತಿರಬೇಕಾದ ಅವಶ್ಯಕತೆ ಇದೆ.

ದೀರ್ಘ ಕಾಲದವರೆಗೆ ಸ್ಯಾನಿಟರಿ ಪ್ಯಾಡ್‌ ಗಳ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಸ್ಯಾನಿಟರಿ ಪ್ಯಾಡ್‌ಗಳನ್ನು ಪ್ಲಾಸ್ಟಿಕ್‌ನಿಂದ ತಯಾರಿಸಲಾಗುವುದರ ಜೊತೆಗೆ ಪ್ಲಾಸ್ಟಿಕ್ ಕೊಳೆಯಲು ದೀರ್ಘ ಕಾಲ ಬೇಕಾಗಿರುವುದರಿಂದ ಪರಿಸರಕ್ಕೆ ಹಾನಿಯಾಗುತ್ತದೆ.

ಇಷ್ಟೆ ಅಲ್ಲದೆ, ಸ್ಯಾನಿಟರಿ ಪ್ಯಾಡ್‌ ಅನ್ನು ದೀರ್ಘ ಕಾಲದವರೆಗೆ ಬಳಸುವುದರಿಂದ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾಗಿದ್ದು, ಇದರ ಜೊತೆಗೆ ಮೂತ್ರನಾಳದ ಸೋಂಕು, ಚರ್ಮದ ದದ್ದುಗಳು, ಜನನಾಂಗದ ಸೋಂಕು ಉಂಟಾಗುವ ಸಾಧ್ಯತೆಯಿದೆ. ,

ಬಟ್ಟೆಯ ಪ್ಯಾಡ್‌ಗಳು ಸ್ಯಾನಿಟರಿ ಪ್ಯಾಡ್‌ಗಳಂತೆಯೇ ಕಾಣುತ್ತವೆ. ಇದನ್ನು ಬಟ್ಟೆ ಮತ್ತು ಹತ್ತಿಯಿಂದ ಮಾಡಲಾಗಿದ್ದು, ಸ್ಯಾನಿಟರಿ ಪ್ಯಾಡ್‌ಗಳಂತೆ, ಇತರ ವಿಷಕಾರಿ ವಸ್ತುಗಳನ್ನು ಅದರ ತಯಾರಿಕೆಯಲ್ಲಿ ಬಳಸದೇ ಇರುವುದರಿಂದ ಬಳಕೆ ಮಾಡಬಹುದಾಗಿದ್ದು, ಆರೋಗ್ಯ ಮತ್ತು ಚರ್ಮದ ಸಮಸ್ಯೆಯು ಕಾಣಿಸಿಕೊಳ್ಳುವುದಿಲ್ಲ.

ಸ್ಯಾನಿಟರಿ ಪ್ಯಾಡ್‌ಗಳ ನಂತರ, ಸಾಮಾನ್ಯವಾಗಿ ಬಳಸುವ ವಸ್ತುವೆಂದರೆ ಟ್ಯಾಂಪೂನ್, ಇದು ಋತುಚಕ್ರದ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಳಸಲು ಸರಳ ಹಾಗೂ ಸುಲಭವಾಗಿರುವ ಟ್ಯಾಂಪೂನ್ ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.


ಮುಟ್ಟಿನ ಕಪ್‌ಗಳು, ಬೆಲ್‌ ಶೇಪಿನಲ್ಲಿರುವ ಸಿಲಿಕಾನ್‌ ಕಂಟೈನರ್‌ ಆಗಿದ್ದು, ಮುಟ್ಟಿನ ಸಂದರ್ಭದಲ್ಲಿ ವಜೈನಾದೊಳಗೆ ಸೇರಿಸುವಂಥ ವಸ್ತು ಇದಾಗಿದೆ. ಪುಟ್ಟದೊಂದು ಕಪ್‌ ಮೂಲಕ ಮುಟ್ಟಿನ ದಿನಗಳ ಕಿರಿಕಿರಿಯನ್ನು ಸುಲಭವಾಗಿ ನಿಭಾಯಿಸಬಹುದಾಗಿದೆ. ಇದರಲ್ಲಿ ಹಲವು ವಿಧದ ಜೊತೆಗೆ ಬಣ್ಣಗಳಲ್ಲಿಯು ಲಭ್ಯವಿದೆ.


ಪರಿಸರ ಸ್ನೇಹಿ ವಸ್ತುಗಳಿಂದ ಇದನ್ನು ನಿರ್ಮಿಸಲಾಗಿದೆ. 12 ಗಂಟೆಗಳ ರಕ್ತಸ್ರಾವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೊಂದಿದ್ದು, ಸ್ವಚ್ಛತೆಯನ್ನು ಕಾಪಾಡುವ ಜೊತೆಗೆ ಸ್ಯಾನಿಟರಿ ಪ್ಯಾಡ್ ಬಳಸುವಾಗ ಕಂಡು ಬರುವ ಅಲರ್ಜಿ ಸಮಸ್ಯೆ ಕೂಡ ಕಾಣಿಸಿಕೊಳ್ಳುವುದಿಲ್ಲ. ದೀರ್ಘ ಕಾಲದವರೆಗೆ ಕೂಡ ಬಳಕೆ ಮಾಡಬಹುದಾಗಿದೆ.

ಮುಟ್ಟಿನ ಸ್ಪಾಂಜ್ ಸಂಪೂರ್ಣವಾಗಿ ನೈಸರ್ಗಿಕವಾಗಿದ್ದು, ಮತ್ತು 6 ತಿಂಗಳವರೆಗೆ ಮರುಬಳಕೆ ಮಾಡಬಹುದಾಗಿದೆ. ಟ್ಯಾಂಪೂನ್‌ಗಳಂತೆ, ಮುಟ್ಟಿನ ಸ್ಪಂಜುಗಳನ್ನು ಯೋನಿಯೊಳಗೆ ಸೇರಿಸಲಾಗುತ್ತದೆ. ಇವು ಉತ್ತಮವಾಗಿ ರಕ್ತವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ರಾಸಾಯನಿಕ ಅಥವಾ ಸಿಂಥೆಟಿಕ್ ವಸ್ತುಗಳನ್ನು ಬಳಸದಿರುವುದರಿಂದ ಚರ್ಮಕ್ಕೆ ಯಾವುದೇ ರೀತಿಯ ತೊಂದರೆ ಯಾಗದು.

ಮುಟ್ಟಿನ ಸಮಯದಲ್ಲಿ ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳ ಬದಲಿಗೆ ಮುಟ್ಟಿನ ಡಿಸ್ಕ್‌ಗಳನ್ನು ಸಹ ಬಳಸಬಹುದಾಗಿದೆ. ಇದನ್ನು ಮುಟ್ಟಿನ ಕಪ್‌ನಂತೆ ಸೇರಿಸಲಾಗುತ್ತದೆ. ಆದರೆ ಇದರ ನಿಯೋಜನೆಯು ಮುಟ್ಟಿನ ಕಪ್‌ಗಿಂತ ಸ್ವಲ್ಪಮಟ್ಟಿಗೆ ಯೋನಿಯೊಳಗೆ ಇರುತ್ತದೆ.
ಮುಟ್ಟಿನ ಕಪ್ ಅನ್ನು ಗರ್ಭಕಂಠದ ಕೆಳಗೆ ಇರಿಸಲಾಗುವುದಲ್ಲದೇ, ಮುಟ್ಟಿನ ಡಿಸ್ಕ್ ಅನ್ನು ಯೋನಿ ಫೋರ್ನಿಕ್ಸ್ ಮೇಲೆ ಇರಿಸಲಾಗುತ್ತದೆ.

ಯೋನಿಯು ಕಾಲುವೆ ಮತ್ತು ಗರ್ಭಕಂಠವನ್ನು ಸಂಧಿಸುವ ಸ್ಥಳವಾಗಿದ್ದು, ಇದನ್ನು 12 ಗಂಟೆಗಳವರೆಗೆ ಬಳಸಬಹುದು. ಮಹಿಳೆಯರು ಋತುಚಕ್ರದ ಸಮಯದಲ್ಲಿ ಅತೀವ ರಕ್ತ ಸ್ರಾವವಾಗುವಾಗ ಆಗಾಗ ಸ್ಯಾನಿಟರಿ ಪ್ಯಾಡ್ ಬದಲಿಸುವ ಬದಲು, ಬದಲಿ ವಸ್ತುಗಳನ್ನು ಬಳಸಿ, ಶುಚಿತ್ವ ಕಾಪಾಡುವ ಮೂಲಕ ಋತು ಚಕ್ರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.