Maruti Suzuki : ಹಿಂದೆ ಕೇಳಿಲ್ಲ ಮುಂದೆ ಸಿಗಲ್ಲ | ಮಾರುತಿ ಸುಜುಕಿ ಈ ಕಾರಿನ ಮೇಲೆ ನೀಡಿದೆ ಬಂಪರ್ ಆಫರ್ !!!
ಭಾರತದಲ್ಲಿ ಹಬ್ಬದ ಸಮಯದಲ್ಲಿ ಹಲವಾರು ಕಂಪನಿಗಳು ಆಫರ್ ಮೂಲಕ ತಮ್ಮ ಬ್ರಾಂಡನ್ನು ಪರಿಚಯಿಸುತ್ತೆ. ಸುಖಕರ ಆರಾಮದಾಯಕ ಪ್ರಯಾಣಕ್ಕಾಗಿ ಜನರು ವಾಹನಗಳನ್ನು ಕೊಂಡು ಕೊಳ್ಳುವುದು ಇದ್ದೇ ಇದೆ. ಆದರೆ ಇದೀಗ ಹಬ್ಬದ ಸೀಸನ್ (Festival Season) ನಡೆಯುತ್ತಿದೆ. ದಸರಾ ಮತ್ತು ದೀಪಾವಳಿ ಯಂತಹ ಪ್ರಮುಖ ಹಬ್ಬಗಳಲ್ಲಿ ಹೊಸ ಕಾರು (New Car) ಗಳನ್ನು. ವಾಹನಗಳನ್ನು, ಮನೆಗೆ ಉಪಯುಕ್ತವಾದ ಇಲೆಕ್ಟ್ರಿಕ್ ವಸ್ತು ಮುಂತಾದವುಗಳನ್ನು ಮನೆಗೆ ತರಲು ಖರೀದಿದಾರರು ಉತ್ಸುಕರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸೆಳೆಯಲು ಕಾರು ತಯಾರಿಕಾ ಕಂಪನಿಗಳು ಬಂಪರ್ ಆಫರ್ ಗಳನ್ನು ನೀಡುತ್ತಿದೆ.
ಅಕ್ಟೋಬರ್ (October) ತಿಂಗಳಿನಲ್ಲಿ ಕಂಪನಿಗಳು ಅದ್ಭುತ ಕೊಡುಗೆಗಳನ್ನು ಘೋಷಿಸಿವೆ. ಇತ್ತೀಚಿನ ಕಾರು ತಯಾರಿಕಾ ದೈತ್ಯ ಮಾರುತಿ ಸುಜುಕಿ ಇಂಡಿಯಾ (Maruti Suzuki India) ತನ್ನ ಹೊಸ ಆಲ್ಟೊ ಕೆ10 (Alto K10) ಕಾರಿನ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಿದೆ. ವಾಸ್ತವವಾಗಿ ಈ ಆಫರ್ ಅನ್ನು ಆಗಸ್ಟ್ ತಿಂಗಳಿನಲ್ಲಿಯೇ ಪ್ರಾರಂಭಿಸಲಾಯಿತು. ಹಬ್ಬದ ಋತುವಿನಲ್ಲಿ ಕಾರು ತಯಾರಿಕಾ ಕಂಪನಿಗಳು ಕಾರುಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ಆದರೆ ಅದನ್ನು ಖರೀದಿಸಲು ಬಯಸುವವರಿಗೆ ಈ ಹಬ್ಬದ ಸೀಸನ್‌ಗಿಂತ ಉತ್ತಮ ಸಮಯವಿಲ್ಲ.
ಆಲ್ಟೊ ಕೆ10 ಅನ್ನು ಭಾರತದಲ್ಲಿ ಎಂಟ್ರಿ ಲೆವೆಲ್ ಕಾರ್ ಆಗಿ ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಆಲ್ಟೊ 800 ಮತ್ತು ಆಲ್ಟೊ ಕೆ10 ಒಟ್ಟಿಗೆ 24,844 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಆ ತಿಂಗಳು ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಬ್ರ್ಯಾಂಡ್ ಆಯಿತು.
ಅಲ್ಲದೆ ಆಲ್ಟೊ ಕಾರಿನಲಿ ಹಲವಾರು ವೈಶಿಷ್ಟತೆಗಳಿವೆ.
1.ಆಲ್ಟೊ K10 MT ರೂಪಾಂತರಕ್ಕೆ 24.39kmpl ಮತ್ತು AMT ರೂಪಾಂತರಕ್ಕೆ 24.90kmpl ಮೈಲೇಜ್ ನೀಡುತ್ತದೆ.
2. ಕಾರು 7-ಇಂಚಿನ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.
- ಜೊತೆಗೆ ಆಪಲ್ ಕಾರ್ಪ್ಲೇ,ಆಂಡ್ರಾಯ್ಡ್ ಆಟೋ, ಯುಎಸ್‌ಬಿ, ಬ್ಲೂಟೂತ್, ಆಕ್ಸ್ ಕೇಬಲ್ ಸಪೋರ್ಟ್, ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಎಸ್), ರಿವರ್ಸ್ ಪಾರ್ಕಿಂಗ್ ಸೆನ್ಸರ್, ಪ್ರಿ-ಟೆನ್ಷನರ್, ಫೋರ್ಸ್ ಲಿಮಿಟ್ ಫ್ರಂಟ್ ಸೀಟ್ ಬೆಲ್ಟ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಆಯಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಹೈ ಸ್ಪೀಡ್‌ನೊಂದಿಗೆ ಎಚ್ಚರಿಕೆ ಉಪಯುಕ್ತ ಉಪಕರಣವಿದೆ. ಮಾರುತಿ ಕಾರಿನ ಮೇಲೆ ಬಂಪರ್ ಆಫರ್ ಇಲ್ಲಿದೆ. ಕಂಪನಿಯು ಹಬ್ಬದ ಸಮಯದಲ್ಲಿ ಆಲ್ಟೊ ಕೆ 10 ನಲ್ಲಿ ರೂ.40,100 ವರೆಗಿನ ಕೊಡುಗೆಗಳನ್ನು ತಂದಿದೆ. ಕಂಪನಿಯು ಆಲ್ಟೊ ಕೆ10 ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಂಟಿ) ಮತ್ತು ಆಟೊಮ್ಯಾಟೆಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಎರಡರಲ್ಲೂ ರೂ.40,100 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಇದರಲ್ಲಿ ರೂ.20,000 ಮುಂಗಡ ರಿಯಾಯಿತಿ, ರೂ.15,000 ವಿನಿಮಯ ರಿಯಾಯಿತಿ, ರೂ.5,100 ಕಾರ್ಪೊರೇಟ್ ಅಥವಾ ಗ್ರಾಮೀಣ ರಿಯಾಯಿತಿಗಳು ಸೇರಿವೆ
ಹೊಸ ಮಾರುತಿ ಸುಜುಕಿ ಆಲ್ಟೊ ಕೆ10 1.0-ಲೀಟರ್, ಡ್ಯುಯಲ್ ಜೆಟ್, ಡ್ಯುಯಲ್ ವಿವಿಟಿ, ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 66.62 ಪಿಎಸ್ ಪವರ್ ಮತ್ತು 89 ಎನ್‌ಎಂ ಟಾರ್ಕ್ ನೀಡುತ್ತದೆ. ಕಂಪನಿಯು ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ 5-ಸ್ಪೀಡ್ ಎಎಮ್‌ಟಿಯೊಂದಿಗೆ ಲಭ್ಯಗೊಳಿಸಿದೆ. Alto K10 Std, Lxi, Vxi, Vxi+ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ .
ದೀಪಾವಳಿ ಹಬ್ಬಕ್ಕೂ ಆಫರ್ ನ್ನು ಕಂಪನಿಗಳು ನೀಡುತ್ತಿದೆ. ಅಂದರೆ Std MT ಬೆಲೆ ರೂ.3.99 ಲಕ್ಷಗಳು. Lxi MT ಬೆಲೆ ರೂ.4.82 ಲಕ್ಷಗಳು. Vxi MT ಬೆಲೆ ರೂ.4.99 ಲಕ್ಷಗಳು. Vxi AMT ಬೆಲೆ ರೂ. 5.49 ಲಕ್ಷಗಳು. Vxi+ MT ಬೆಲೆ ರೂ.5.33 ಲಕ್ಷಗಳು. Vxi+ AMT ಬೆಲೆ ರೂ.5.83 ಲಕ್ಷಗಳು. ಇವೆಲ್ಲವೂ ಬೆಂಗಳೂರಿನ ಎಕ್ಸ್ ಶೋ ರೂಂ ಬೆಲೆಗಳಾಗಿವೆ. ಸೆಪ್ಟೆಂಬರ್‌ಗೆ ಹೋಲಿಸಿದರೆ, ಅಕ್ಟೋಬರ್‌ನಲ್ಲಿ ಆಲ್ಟೊ ಕೆ10 ಮೇಲಿನ ರಿಯಾಯಿತಿ ಹೆಚ್ಚಾಗಿದೆ. ಕಳೆದ ತಿಂಗಳು, MT ರೂಪಾಂತರದ ಮೇಲೆ ಒಟ್ಟು 25,000 ರೂ.ವರೆಗೆ ರಿಯಾಯಿತಿ ಇತ್ತು. ಅದೇ AMT ರೂಪಾಂತರದಲ್ಲಿ 15,000 ರಿಯಾಯಿತಿ ಇತ್ತು ಎಂಬ ಮಾಹಿತಿ ನಿಮಗೆ ತಿಳಿದಿರಬಹುದು.
ಹೀಗೆ ಹಲವಾರು ರೀತಿಯ ಬೆನಿಫಿಟ್ಗಳ ಜೊತೆಗೆ ಕಡಿಮೆ ದರದಲ್ಲಿ ವಾಹನಗಳನ್ನು ಕೊಂಡುಕೊಳ್ಳಬಹುದಾಗಿದೆ.