Indian Railway : ರೈಲ್ವೆ ಇಲಾಖೆಯಿಂದ ಬಂಪರ್ ಗಿಫ್ಟ್ | ಇನ್ನು ಮುಂದೆ ಈ ಮಾರ್ಗದಲ್ಲಿ ಸಂಚರಿಸಲಿದೆ ಸ್ಪೆಷಲ್ ಟ್ರೈನ್
ಇತ್ತೀಚಿಗೆ ರೈಲ್ವೇ ಸಂಚಾರಕ್ಕೆ ಹೆಚ್ಚಿನ ಆದ್ಯತೆ ಇದೆ. ವಾಹನಗಳಲ್ಲಿ ದೂರಸಂಚಾರಕ್ಕೆ ಸಮಯ ಮತ್ತು ಹಣ ದುಪ್ಪಟ್ಟು ಬೇಕಾಗುತ್ತದೆ. ಅದೇ ರೈಲು ಪ್ರಯಾಣದಲ್ಲಿ ವೇಗವಾದ ಮತ್ತು ಆರಾಮ ಪ್ರಯಾಣ ಮಾಡಬಹುದಾಗಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರೈಲುಗಳ ಓಡಾಟಕ್ಕೆ ಭಾರತೀಯ ರೈಲ್ವೇ ಇಲಾಖೆ (Indian Railways) ನಿರ್ಧರಿಸಿದೆ. ಹೀಗಾಗಿ ನಿಗದಿತ ದಿನಾಂಕಗಳವರೆಗೆ ಹಬ್ಬದ ಸಮಯದಲ್ಲಿ ಓಡಾಟ ನಡೆಸುವವರಿಗೆ ಹೆಚ್ಚುವರಿ ರೈಲುಗಳ ಪ್ರಯೋಜನ ಪಡೆಯಬಹುದು. ನೈಋತ್ಯ ರೈಲ್ವೇ ವಲಯದ ವ್ಯಾಪ್ತಿಯಲ್ಲಿ ಬರುವ ಹಲವು ರೈಲುಗಳ ಹೆಚ್ಚುವರಿ ಓಡಾಟ ನಡೆಸಲಿರುವುದು ಎಂದು ಇಲಾಖೆ ತಿಳಿಸಿದೆ.
ಯಶವಂತಪುರ – ಮುರುಡೇಶ್ವರ ಹೆಚ್ಚುವರಿ ವಿಶೇಷ ರೈಲು ಅಕ್ಟೋಬರ್ 8, ಅಕ್ಟೋಬರ್ 15, ಅಕ್ಟೋಬರ್ 22, ಅಕ್ಟೋಬರ್ 29 ಹಾಗೂ ನವೆಂಬರ್ 5 ರಂದು ಓಡಾಟ ನಡೆಸಲಿದೆ. ರೈಲು ಸಂಖ್ಯೆ 06563 ಯಶವಂತಪುರದಿಂದ ರಾತ್ರಿ 11.55 ಕ್ಕೆ ಮುರುಡೇಶ್ವರಕ್ಕೆ ಹೊರಟು ಮರುದಿನ ಮಧ್ಯಾಹ್ನ 12.55 ಕ್ಕೆ ತಲುಪಲಿದೆ.
ಮುರುಡೇಶ್ವರ – ಯಶವಂತಪುರವಿಶೇಷ ರೈಲು ಮುರ್ಡೇಶ್ವರದಿಂದ ಯಶವಂತಪುರಕ್ಕೆ ಅಕ್ಟೋಬರ್ 09, ಅಕ್ಟೋಬರ್ 16, ಅಕ್ಟೋಬರ್ 23, ಅಕ್ಟೋಬರ್ 30 ಹಾಗೂ ನವೆಂಬರ್ 06 ತಾರೀಕಿನಂದು ಓಡಾಟ ನಡೆಸಲಿದೆ.ಈ ರೈಲು ಮಧ್ಯಾಹ್ನ 1.30 ಕ್ಕೆ ಮುರುಡೇಶ್ವರದಿಂದ ಹೊರಟು ಮರುದಿನ ಮುಂಜಾವ 4 ಗಂಟೆಗೆ ಬೆಂಗಳೂರಿನ ಯಶವಂತಪುರ ತಲುಪುವುದು.
ಯಶವಂತಪುರ- ಮುರುಡೇಶ್ವರ- ಯಶವಂತಪುರ ದಿಂದ ಓಡಾಟ ನಡೆಸುವ ರೈಲು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಹಾಗೂ ಭಟ್ಕಳದಲ್ಲಿ ನಿಲ್ದಾಣಗಳನ್ನು ಹೊಂದಿರುತ್ತದೆ.
ಯಶವಂತಪುರ – ಕಣ್ಣೂರು – ಯಶವಂತಪುರ ಎಕ್ಸ್ ಪ್ರೆಸ್ಈ ಮಾರ್ಗಗಳ ಮಧ್ಯೆ ವಿಶೇಷ ನಾಲ್ಕು ಹೆಚ್ಚವರಿ ರೈಲುಗಳು ಓಡಾಟ ನಡೆಸಲಿದೆ. ಅಕ್ಟೋಬರ್ 12, ಅಕ್ಟೋಬರ್ 19, ಅಕ್ಟೋಬರ್ 19 ಹಾಗೂ ನವೆಂಬರ್ 02 ರಂದು ಓಡಾಟ ನಡೆಸಲಿದೆ. ಈ ದಿನಾಂಕಗಳಲ್ಲಿ ಯಶವಂತಪುರದಿಂದ ಬೆಳಿಗ್ಗೆ 7 ಗಂಟೆಗೆ ಹೊರಡುವ ರೈಲು ಅದೇ ದಿನ ರಾತ್ರಿ 8.30ಕ್ಕೆ ಕಣ್ಣೂರು ತಲುಪಲಿದೆ.
ಕಣ್ಣೂರು – ಯಶವಂತಪುರ ಎಕ್ಸ್ ಪ್ರೆಸ್ಕಣ್ಣೂರಿನಿಂದ ಯಶವಂತಪುರಕ್ಕೆ ಅಕ್ಟೋಬರ್ 12, ಅಕ್ಟೋಬರ್ 19, ಅಕ್ಟೋಬರ್ 26 ಹಾಗೂ ನವೆಂಬರ್ 2 ರಂದು ಆಗಮಿಸಲಿದೆ. ಈ ರೈಲು ಕಣ್ಣೂರಿನಿಂದ ರಾತ್ರಿ 11 ಗಂಟೆಯಿಂದ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ಯಶವಂತಪುರ ತಲುಪಲಿದೆ.
ಕಣ್ಣೂರು – ಯಶವಂತಪುರ – ಕಣ್ಣೂರು ನಿಲ್ದಾಣಗಳುಬಾಣಸವಾಡಿ, ಕೃಷ್ಣರಾಜಪುರಂ, ತಿರುಪತ್ತೂರ್, ಸೇಲಂ, ಈರೋಡ್, ತಿರುಪ್ಪೂರ್, ಕೊಯಂಬತ್ತೂರು, ಪಾಲಕ್ಕಾಡ್, ಒಟ್ಟಾಪಾಲಂ, ಶೋರಾನೂರ್, ತಿರೂರ್, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಯಶವಂತಪುರ – ತಿರುನಲ್ವೇಲಿ – ಯಶವಂತಪುರ ಎಕ್ಸ್ ಪ್ರೆಸ್ ಯಶವಂತಪುರ – ತಿರುನಲ್ವೇಲಿ – ಯಶವಂತಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಅಕ್ಟೋಬರ್ 18 ಹಾಗೂ 25 ತಾರೀಕಿನಂದು ಓಡಾಟ ನಡೆಸಲಿದೆ. ಈ ದಿನಗಳಲ್ಲಿ ಯಶವಂತಪುರದಿಂದ ಮಧ್ಯಾಹ್ನ 12.45 ಕ್ಕೆ ಹೊರಡುವ ರೈಲು ಮರುದಿನ 4.30 ಗೆ ತಿರುನಲ್ವೇಲಿ ತಲುಪಲಿದೆ.ಬಳಿಕ ತಿರುನಲ್ವೇಲಿಯಿಂದ ಯಶವಂತಪುರಕ್ಕೆ ಅಕ್ಟೋಬರ್ 19 ಹಾಗೂ ಅಕ್ಟೋಬರ್ 26 ರಂದು ಸಂಚರಿಸಲಿದೆ. ಆ ದಿನ ಬೆಳಿಗ್ಗೆ 10.40 ಕ್ಕೆ ತಿರುನಲ್ವೇಲಿಯಿಂದ ಹೊರಡುವ ರೈಲು ರಾತ್ರಿ 11.30 ಕ್ಕೆ ಯಶವಂತಪುರ ತಲುಪಲಿದೆ.
ಓಡಾಟ ಮಾರ್ಗ ನಿಲ್ದಾಣ ಗಳು : ಯಶವಂತಪುರ – ತಿರುನಲ್ವೇಲಿ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಬಾಣಸವಾಡಿ, ಕಾರ್ಮೆಲರಂ, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್, ಕರೂರ್, ತಿರುಚಿರಾಪಳ್ಳಿ, ದಿಂಡುಗಲ್, ಮಧುರೈ, ವಿರುಧುನಗರ ಹಾಗೂ ಕೊವಿಲ್ ಪಟ್ಟಿ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.ಮೈಸೂರು – ಟುಟಿಕೋರಿನ್ – ಮೈಸೂರು ಎಕ್ಸ್ ಪ್ರೆಸ್ ರೈಲುಮೈಸೂರು – ಟುಟಿಕೋರಿನ್ ನಡುವೆ ಏಕಮಾತ್ರ ಹೆಚ್ಚುವರಿ ವಿಶೇಷ ರೈಲು ಓಡಾಟ ನಡೆಸಲಿದೆ. ಅಕ್ಟೋಬರ್ 21 ರಂದು ಮಧ್ಯಾಹ್ನ 12.05 ಕ್ಕೆ ಮೈಸೂರಿನಿಂದ ಹೊರಡುವ ಈ ರೈಲು ಮರುದಿನ ಮುಂಜಾವ 5 ಗಂಟೆಗೆ ಟುಟಿಕೋರಿನ್ ತಲುಪಲಿದೆ. ಟುಟಿಕೋರಿನ್ ನಿಂದ ಮೈಸೂರಿಗೆ ಅಕ್ಟೋಬರ್ 22 ರ ಮಧ್ಯಾಹ್ನ 3 ಗಂಟೆಗೆ ಹೊರಟು ಮರುದಿನ ಬೆಳಿಗ್ಗೆ 8.30 ಕ್ಕೆ ತಲುಪಲಿದೆ.ಕೊವಿಲ್ ಪಟ್ಟಿ, ವಿರುಧುನಗರ, ಮಧುರೈ, ದಿಂಡುಗಲ್, ಕರೂರು, ನಮಕ್ಕಲ್, ಸೇಲಂ, ಧರ್ಮಪುರಿ, ಹೊಸೂರು, ಬೆಂಗಳೂರು ಕಂಟೋನ್ಮೆಂಟ್, KSR, ಕೆಂಗೇರಿ, ಮಂಡ್ಯ, ಎಲಿಯೂರು ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.
ರೈಲ್ವೇ ಮಂಡಳಿ ರಾಜ್ಯದಲ್ಲಿ ಹಲವು ಮಾರ್ಗಗಳಲ್ಲಿ ಹೆಚ್ಚುವರಿ ವಿಶೇಷ ರೈಲು ಸಂಚಾರ ಆಗಲಿದೆ.