ನಿಮಗೆ ಗೊತ್ತೇ ? ಸಂಭೋಗದ ಸಮಯದಲ್ಲಿ ಕಾಂಡೋಂ ಒಡೆಯಲು ಕಾರಣವೇನೆಂದು?
ಕಾಂಡೋಂ ಅಥವಾ ಜನಪ್ರಿಯ ‘ ನಿರೋಧ್ ‘ ಅನ್ನು ಲೈಂಗಿಕತೆಯ ಸಮಯದಲ್ಲಿ ಲೈಂಗಿಕ ಸಂಬಂಧಿ ರೋಗಗಳನ್ನು ತಡೆಯಲು ಉಪಯೋಗಿಸುತ್ತಾರೆ. ಹಾಗೆನೇ ಮಕ್ಕಳು ಬೇಡವೆಂದು ಇರುವವರು ಕೂಡಾ ಇದನ್ನು ಬಳಸುತ್ತಾರೆ. ಆದರೆ ಈ ಕಾಂಡೋಮ್ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎನ್ನುವುದು ನಿಮಗೆ ಗೊತ್ತಾ? ಲೈಂಗಿಕ ಕ್ರಿಯೆ ನಡೆಸುವ ಮಧ್ಯದಲ್ಲಿ ಕಾಂಡೋಮ್ ಹರಿಯುವ ಕೆಲವೊಂದು ಸಂದರ್ಭಗಳು ಕೆಲವರಿಗೆ ಅನುಭವ ಆಗಿರಬಹುದು. ಇದು ನಿಜಕ್ಕೂ ಮಕ್ಕಳು ಈಗ ಬೇಡ ಎನ್ನುವವರಿಗೆ ಭಯ ಹುಟ್ಟಿಸುವಂತಹ ವಿಚಾರ. ಜೊತೆಗೆ ಯಾವುದೇ ಕಾಯಿಲೆಗೆ ತುತ್ತಾಗುವ ಅಪಾಯ ಕೂಡಾ ಹೆಚ್ಚಿರುತ್ತದೆ. ಕಾಂಡೋಮ್ ಒಡೆಯಲು ಕೆಲವು ಕಾರಣಗಳನ್ನು ಇಲ್ಲಿ ನೀಡಲಾಗಿದೆ.
ಕಾಂಡೋಮ್ ನ ಅವಧಿ : ನಾವು ಯಾವುದೇ ಮಾತ್ರೆ ಅಥವಾ ಯಾವುದೇ ಆಹಾರ ವಸ್ತುಗಳನ್ನು ಖರೀದಿ ಮಾಡಿದಾಗ, ತಯಾರಿಸಿದ ದಿನಾಂಕ ಹಾಗೂ ಅವಧಿ ಮೀರುವ ದಿನಾಂಕವನ್ನು ನೋಡಿ ತೆಗೆದುಕೊಳ್ಳುತ್ತೇವೆ. ಹಾಗೆಯೇ ಕಾಂಡೋಮ್ ಗೂ ಅವಧಿ ಮೀರಿದ ದಿನಾಂಕಗಳಿರುತ್ತವೆ. ಕಾಂಡೋಮ್ ತಯಾರಿಸಿದ ದಿನಾಂಕದಿಂದ ಎರಡು ಮೂರು ವರ್ಷಗಳವರೆಗೆ ಚೆನ್ನಾಗಿಯೇ ಇರುತ್ತದೆ. ಅವಧಿ ಮೀರಿದ ನಂತರ ಅದರ ಕ್ಷಮತೆ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಹಾಗಾಗಿ ಕಾಂಡೋಮ್ ಹರಿಯುವ ಸಾಧ್ಯತೆಯನ್ನು ಹೆಚ್ವಿಸುತ್ತದೆ. ನಿಮ್ಮ ಕಾಂಡೋಮ್ ಒಣಗಿದ್ದರೆ, ಗಟ್ಟಿಯಾಗಿದ್ದರೆ ಅಥವಾ ಜಿಗುಟಾಗಿದ್ದರೆ ಅದನ್ನು ಬಳಸದೆ ಎಸೆಯವುದು ಒಳ್ಳೆಯದು.
ಪ್ಯಾಕೆಟ್ ಓಪನ್ ಮಾಡುವಾಗ ಜಾಗೃತೆ : ಸೆಕ್ಸ್ ನಡೆಸುವ ಸಂಭ್ರಮದಲ್ಲಿ ನೀವಿರುವಾಗ ನೀವು ಅವಸರ ಮಾಡುವುದು ಸಹಜ. ಆದರೆ ಅವಸರವೇ ಅಪಘಾತಕ್ಕೆ ಕಾರಣವಾದೀತು. ಕೆಲವರಿಗೆ ಯಾವುದೇ ಪ್ಯಾಕೇಟ್‌ನ್ನು ತೆರೆಯುವಾಗ ಹಲ್ಲಿನಲ್ಲಿ ಕಚ್ಚಿ ಓಪನ್ ಮಾಡುವ ಒಂದು ಅಭ್ಯಾಸ ಇರುತ್ತದೆ. ಅಂತವರು ಕಾಂಡೋಮ್‌ನ್ನು ತೆರೆಯುವಾಗ ಹಲ್ಲಿನಿಂದ ಕಚ್ಚಬಾರದು. ಅಥವಾ ಕತ್ತರಿಯನ್ನು ಬಳಸಿ ತೆರೆಯಬಾರದು. ಇದರಿಂದ ಕಾಂಡೋಮ್ ತೂತಾಗುವ ಸಾಧ್ಯತೆ ತುಂಬಾ ಹೆಚ್ಚು. ಹಾಗಾಗಿ ಕಾಂಡೋಮ್ ಪ್ಯಾಕೆಟ್ ತೆರೆಯುವಾಗ, ಸಾವಧಾನದಿಂದ ಅದನ್ನು ಪ್ಯಾಕಿಂಗ್‌ನ ಒಳಗೆ ತಳ್ಳಿರಿ ಮತ್ತು ಹೆಚ್ಚು ಸ್ಥಳಾವಕಾಶವಿರುವಲ್ಲಿ ಹರಿದು ಹಾಕಿ, ನಂತರ ಉಪಯೋಗಿಸಿ. ತರಾತುರಿಯಲ್ಲಿ ಪ್ಯಾಕೆಟ್ ಹರಿಯಲು ಹೋದರೆ, ಕಾಂಡೊಮ್ ಗಾಯಗೊಂಡು ಇಲ್ಲದ ರೋಗಗಳು ಅಂಟಿಕೊಂಡು ಬದುಕೇ ತುರಿದು ಹೋದೀತು ಎಚ್ಚರ!
ಕಾಂಡೋಮ್ ಸೈಜ್ : ಪ್ರತಿಯೊಬ್ಬರ ಬಟ್ಟೆಯ ಸೈಜು ಹೇಗೆ ಬೇರೆಬೇರೆ ಇದೆಯೋ, ಹಾಗೆಯೇ ನಿಮ್ಮ ಶಿಶ್ನದ ಸೈಜು. ನಿಮ್ಮ ಈ ಲೈಂಗಿಕ ಆಟಿಕೆ ಮತ್ತು ನೀವು ಬಳಸುವ ಕಾಂಡೊಮ್ನ ಸೈಜ್ ಸರಿಯಾಗಿ ಹೊಂದಿಕೆಯಾಗದಿದ್ದಾಗ ಸಮಸ್ಯೆ ತಪ್ಪಿದ್ದಲ್ಲ. ಹಾಗಾಗಿ ಯಾವಾಗಲೂ ಕಾಂಡೋಮ್ ಆಯ್ಕೆ ಮಾಡುವಾಗ ನಿಮ್ಮ ಶಿಶ್ನದ ಗಾತ್ರಕ್ಕೆ ಸರಿಹೊಂದುವಂತಹದ್ದನ್ನೇ ಆಯ್ಕೆ ಮಾಡಿ.
ಅದು ಬಹಳ ದೊಡ್ಡದಾಗಿರಲೂ ಬಾರದು, ಸಣ್ಣದಾಗಿರಲೂ ಬಾರದು. ನೀವು ದೊಡ್ಡ ಕಾಂಡೋಮ್ ಆಯ್ಕೆ ಮಾಡಿದರೆ ಅದು ಲೂಸಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಸಣ್ಣದನ್ನು ತೆಗೆದುಕೊಂಡರೆ ಫಿಟ್ ಆಗಿ ಹರಿಯುವ ಸಾಧ್ಯತೆ ಇರುತ್ತದೆ. ಆಫ್ರಿಕನ್ ಮೈಕಟ್ಟಿನ ಯುವಕರದು ಬೆಚ್ಚಿ ಬೀಳಿಸುವ ಮಟ್ಟಿಗೆ ಉದ್ದ ಗಾತ್ರ ಇದ್ದರೆ, ಚೈನೀಸ್ ಮತ್ತು ನಾರ್ತ್ ಈಸ್ಟ್ ಭಾರತೀಯರ ಶಿಶ್ನ ಬಲು ಸಣ್ಣ ಇರ್ತದೆ. ಮನುಷ್ಯನ ಬಾಡಿ ಗಾತ್ರದ ಮೇಲೂ ಅದರ ಗಾತ್ರ ಅವಲಂಬಿತವಾಗಿರುತ್ತದೆ. ಆದುದರಿಂದ ಗಾತ್ರಕ್ಕೆ ತಕ್ಕ ‘ ಸೂತ್ರ ‘ ಆಯ್ಕೆಮಾಡಿ !
ಕಾಂಡೋಮ್ ಹರಿದು ಹೋಗಲು ಘರ್ಷಣೆ ಕೂಡಾ ಒಂದು ಪ್ರಮುಖ ಕಾರಣ. ಸಾಕಷ್ಟು ಘರ್ಷಣೆಯಾದರೆ ಕಾಂಡೋಮ್ ಒಡೆಯಲು ಒಂದು ಕಾರಣ ಎಂದು ತೆಗೆದುಕೊಳ್ಳಬಹುದು. ಕೆಲವರು ತುಂಬಾ ಸಮಯ ಆಟ ಆಡಬಲ್ಲರು. ಹೀಗೆ ದೀರ್ಘ ಸ್ಕಲನದ ಪುರುಷರು ಸುದೀರ್ಘ ಸುಖಿಸಿದಾಗ ಕಾಂಡೊಮ್ ರಪ್ಚರ್ ಆಗಬಹುದು. ಕೆಲವರಿಗೆ ರಫ್ ಆಗಿ ಬಳಸುವ ಅಭ್ಯಾಸ. ಆಗ ಕೂಡಾ ಕಾಂಡೊಮ್ ಪಟ್ ಅನ್ನಬಹುದು. ಇಲ್ಲಿ ಇನ್ನೊಂದು ಕಾರಣ ಏನೆಂದರೆ, ಆ ಸಂದರ್ಭಗಳಲ್ಲಿ ಸಂಗಾತಿಯ ಯೋನಿಯಿಂದ ಜಿನುಗುವ ಲ್ಯೂಬ್ರಿಕೆಂಟ್ ಕಮ್ಮಿ ಆಗಿ ಟೈಟ್ ಆಗಬಹುದು. ಹಾಗಾಗಿ ಕಾಂಡೋಮ್ ಬಳಸಿದ ನಂತರ ಹೆಚ್ಚು ಘರ್ಷಣೆಯನ್ನು ಕಡಿಮೆಮಾಡಲು ಲ್ಯೂಬ್ರಿಕೆಂಟ್‌ಗಳನ್ನು ಬಳಸುವುದು ಉತ್ತಮ.
ಕಾಂಡೋಂ ಇಡುವ ಸ್ಥಳ: ತಪ್ಪಾದ ಜಾಗದಲ್ಲಿ ಕಾಂಡೋಂ ಇಡುವುದರಿಂದ ಕೂಡಾ ಕಾಂಡೋಮ್ ಒಡೆಯುವ ಸಾಧ್ಯತೆ ಹೆಚ್ಚು. ಇದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಕಾಂಡೊಮ್ ಒಂದು ರಬ್ಬರ್ ರೀತಿಯ ಸಿಂಥೆಟಿಕ್ ವಸ್ತು. ಹೆಚ್ಚು ಶಾಖ ಅಥವಾ ತೀವ್ರ ಶೀತ ಸ್ಥಳದಲ್ಲಿ ಕಾಂಡೋಂ ಇಟ್ಟರೆ ಲ್ಯಾಟೆಕ್ಸ್ ದುರ್ಬಲಗೊಳ್ಳುತ್ತದೆ. ಕೆಲವರಿಗೆ ಇದನ್ನು ಫ್ರಿಜ್ಜಿನಲ್ಲಿ ಇಟ್ಟು ಬಳಸುವ ಅಭ್ಯಾಸ ಇರುತ್ತದೆ.
ಕಾಂಡೋಮ್‌ಗಳನ್ನು ವಾಲೆಟ್ ಅಥವಾ ನೇರ ಶಾಖವನ್ನು ಪಡೆಯುವ ಕೆಲವು ಸ್ಥಳ, ಬಿಸಿಯಾದ ಸ್ಥಳಗಳಲ್ಲಿ ಇದನ್ನು ಸಂಗ್ರಹಿಸಬಾರದು. ನಿಮ್ಮ ಕಾಂಡೋಮ್‌ಗಳನ್ನು ಒಣ ಮತ್ತು ಮಧ್ಯಮ ತಂಪಾದ ಸ್ಥಳದಲ್ಲಿ ಇಡುವುದು ಉತ್ತಮ. ಅಲ್ಲಿ ಅವು ಒಡೆದುಹೋಗುವುದಿಲ್ಲ. ಬಾಳಿಕೆ ಬಂದು ನಿಮ್ಮ ಸುರಕ್ಷಾ ಬಳಕೆಗೆ ಸದಾ ಸಿದ್ದವಾಗಿ ನಿಲ್ಲುತ್ತವೆ !
ತಪ್ಪಾದ ಲ್ಯೂಬ್ರಿಕೆಂಟ್ಸ್ : ನೀವು ಲ್ಯಾಟೆಕ್ಸ್ ಕಾಂಡೋಮ್‌ಗಳು, ತೈಲ ಆಧಾರಿತ ಲೂಬ್ರಿಕಂಟ್‌ಗಳಂತಹ ತಪ್ಪು ಲೂಬ್ರಿಕಂಟ್ ಅನ್ನು ಬಳಸಬಾರದು. ತೆಂಗಿನ ಎಣ್ಣೆ ಅಥವಾ ಮಸಾಜ್ ಎಣ್ಣೆ ಅಥವಾ ಯಾವುದೇ ಎಣ್ಣೆಯನ್ನು ಬಳಸಬೇಡಿ. ಗೊತ್ತಿಲ್ಲದ ವಸ್ತುಗಳು ಮೃದುವಾದ ಕಾಂಡಮ್ ಅನ್ನು ಕರಗಿಸಬಲ್ಲವು.
ಇವು ಕಾಂಡೊಮ್ ಅನ್ನು ಕೆಡಿಸಬಲ್ಲವು. ನೀವು ಸಿಲಿಕೋನ್, ನೀರು ಆಧಾರಿತ ಅಥವಾ ಹೈಬ್ರಿಡ್ ಲ್ಯೂಬ್‌ಗಳನ್ನು ಸಹ ಬಳಸಬಹುದು. ಒಟ್ಟಾರೆಯಾಗಿ ಲ್ಯೂಬ್ರಿಕೆಂಟ್ ಬಳಸುವಾಗ ಉತ್ತಮವಾಗಿರುವುದನ್ನೇ ಬಳಸಿ. ಯಾಕೆಂದರೆ ಇದು ಅದರ ಮತ್ತು ನಿಮ್ಮ ಸುರಕ್ಷತೆಯ ಪ್ರಶ್ನೆ.