Bidar Madrasa : ದಸರಾ ಮೆರವಣಿಗೆ ಸಂದರ್ಭ ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು

ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗುಂಪೊಂದು ಪಾರಂಪರಿಕ ಮದರಸಾಗೆ ನುಗ್ಗಿ, ಅದೇ ಕಟ್ಟಡದಲ್ಲಿ ಘೋಷಣೆಗಳನ್ನು ಕೂಗಿ, ಪೂಜೆ ನೆರವೇರಿಸಿದ ಘಟನೆಯೊಂದು ನಡೆದಿದೆ ಎಂದು ದೂರಲಾಗಿದೆ. ಈ ಘಟನೆಯ ಸಂಬಂಧ 9 ಮಂದಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಮುಸ್ಲಿಮ್ ಸಂಘಟನೆಗಳು ಎಚ್ಚರಿಸಿವೆ.


Ad Widget

Ad Widget

Ad Widget

Ad Widget
Ad Widget

Ad Widget

ಕ್ರಿಶ 1460ರಲ್ಲಿ ನಿರ್ಮಿಸಿರುವ ಮೊಹಮದ್ ಗವಾನ್ (Mahmud Gawan Madrasa) ಮದರಸಾ ಇದಾಗಿದೆ. ಪ್ರಸ್ತುತ ಭಾರತೀಯ ಪುರಾತತ್ವ ಇಲಾಖೆಯ
(Archeological Survey of India) ಸಂರಕ್ಷಣೆಯಲ್ಲಿ ಇದಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಕಟ್ಟಡಗಳ ಪಟ್ಟಿಯಲ್ಲಿಯೂ ಈ ಮದರಸಾದ ಹೆಸರು ಸ್ಥಾನ ಪಡೆದಿದೆ.


Ad Widget

ಬುಧವಾರ ಸಂಜೆ ಈ ಘಟನೆ ನಡೆದಿದೆ. ಕೆಲವು ಗುಂಪು ಮದರಸಾದ ಗೇಟ್‌ಗಳ ಬೀಗ ಮುರಿದು ಒಳಗೆ ಹೋಗಿದ್ದಾರೆ. ನಂತರ ಮದರಸಾ ಆವರಣದಲ್ಲಿ ‘ಜೈ ಶ್ರೀ ರಾಮ್’ ಮತ್ತು ‘ಹಿಂದೂ ಧರ್ಮ ಜೈ’ ಘೋಷಣೆಗಳನ್ನು ಕೂಗಿದೆ. ನಂತರ ಕಟ್ಟಡದ ಒಂದು ಮೂಲೆಗೆ ಹೋಗಿ ಪೂಜೆಯನ್ನು ಮಾಡಿದ್ದಾರೆ. ಈ ಘಟನಾ ಸ್ಥಳದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಕಟ್ಟಡದ ಒಳಗೆ ಪ್ರವೇಶಿಸಲೆಂದು ಮೆಟ್ಟಿಲ ಮೇಲೆ ದೊಡ್ಡ ಗುಂಪು ನಿಂತಿರುವುದು ಕಾಣಿಸುತ್ತದೆ.

ಘಟನೆಗೆ ಸಂಬಂಧಿಸಿದಂತೆ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಆದರೆ ಯಾರನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ. ಬೀದರ್‌ನ ಹಲವು ಮುಸ್ಲಿಂ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ. ಮದರಸಾಗೆ ನುಗ್ಗಿದವರನ್ನು ಬಂಧಿಸಲು ಒತ್ತಾಯ ಹೆಚ್ಚಾಗಿದೆ.

error: Content is protected !!
Scroll to Top
%d bloggers like this: