ನಿಶ್ಚಿತಾರ್ಥ ಸಂಬಂಧ ಬೆಳೆಸಲು ದಾರಿ | ಅತ್ಯಾಚಾರ ಮಾಡಲು ಲೈಸೆನ್ಸ್ ಅಲ್ಲ – ಹೈಕೋರ್ಟ್ ಮಹತ್ವದ ತೀರ್ಪು
ಒಂದು ಮದುವೆ ನಡೆಯಲು ಅದರದ್ದೇ ಆದ ಶಾಸ್ತ್ರ ಸಂಪ್ರದಾಯಗಳು ಇರುತ್ತದೆ. ಹಾಗೆಯೇ ಎರಡು ಕುಟುಂಬಗಳು ಒಟ್ಟಾಗಿ ಗಂಡು ಹೆಣ್ಣು ಇಬ್ಬರನ್ನು ಕೂಡಿಸಿ ಅವರ ಒಪ್ಪಿಗೆಯ ಮೇರೆಗೆ ನಿರ್ಧರಿಸುವುದೇ ನಿಶ್ಚಿತಾರ್ಥ ಆಗಿದೆ. ಹಿರಿಯರ ಪ್ರಕಾರ ನಿಶ್ಚಿತಾರ್ಥ ಒಂದು ಹೆಣ್ಣಿಗೆ ರಕ್ಷಣೆ ನೀಡುವ ಮೂಲ ಎಂಬುದಾಗಿದೆ. ಪರ ಪುರುಷರ ಕೆಟ್ಟ ದೃಷ್ಟಿಗಳು ಬೀಳದಿರಲಿ ಎಂದು ನಿಶ್ಚಿತಾರ್ಥ ಎಂಬ ಶಾಸ್ತ್ರವನ್ನು ಮಾಡುತ್ತಿದ್ದರು ಮತ್ತು ಇದರ ಸಾಕ್ಷಿಯಾಗಿ ಉಂಗುರವನ್ನು ತೊಡಿಸುತ್ತಿದ್ದರು . ಆದರೆ ಈಗಿನ ಕಾಲದಲ್ಲಿ ಶಾಸ್ತ್ರ ಸಂಪ್ರದಾಯ ಎಲ್ಲವೂ ಆಡಂಬರದ ತೊರ್ಪಡಿಕೆಗಳಾಗಿದೆ. ಸಂಪ್ರದಾಯದ ಮೂಲ ಏನು ಎಂಬುದು ಅರಿತುಕೊಳ್ಳುವ ಮನೋಜ್ಞಾನ ಇಲ್ಲದಾಗಿದೆ. ಈಗಿನ ಕಾಲದವರಿಗಂತೂ ಮದುವೆ ಎಂಬ ಸಂಬಂಧದ ಬಗ್ಗೆ ಗೌರವವು ಇಲ್ಲದೆ ಮಹತ್ವ ಕೂಡ ಇಲ್ಲದಾಗಿದೆ. 4ದಿನಗಳ ಅದ್ದೂರಿ ಮದುವೆಯಲ್ಲಿ ಲಕ್ಷಗಳ ಖರ್ಚು ಮಾಡಿ ಕೆಲವೇ ತಿಂಗಳಿನಲ್ಲಿ ಸಂಬಂಧ ಮುರಿದು ಬಿಡುವುದು ಸರ್ವೇ ಸಾಮಾನ್ಯ ಆಗಿ ಹೋಗಿದೆ. ಅಲ್ಲದೆ ಮನುಷ್ಯರ ಲೈಂಗಿಕಕತೆಯಲ್ಲಿ ಪ್ರಾಣಿಗಳನ್ನು ಮೀರಿಸುವ ಹಂತಕ್ಕೆ ಮುಟ್ಟಿದೆ ಅಂದರೆ ತಪ್ಪಾಗಲಾರದು.
ಆದರೆ ಕಾನೂನಿನ ಪ್ರಕಾರ ನಿಶ್ಚಿತಾರ್ಥ ಮಾಡಿಕೊಂಡಾಕ್ಷಣ ಭಾವಿ ಪತ್ನಿಯೊಂದಿಗೆ ಭಾವಿ ಪತಿ ಲೈಂಗಿಕ ಸಂಬಂಧ ಬೆಳಸಲು ಅನುಮತಿ ಎಂದು ಭಾವಿಸಕೂಡದು. ಹಾಗೊಂದು ವೇಳೆ ವಧುವಿಗೆ ಇಷ್ಟ ಇಲ್ಲದೇ ಸಂಬಂಧ ಬೆಳೆಸಿದರೆ ಅದು ಅತ್ಯಾಚಾರವಾಗಲಿದೆ ಎಂದು ದೆಹಲಿ ಹೈಕೋರ್ಟ್ ಅದೇಶಿಸಿದೆ. ಈ ರೀತಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದರೆ ಭಾವಿ ಪತಿಯು ಭಾವಿ ಪತ್ನಿ ಜೊತೆಗೆ ಲೈಂಗಿಕ ಸಂಪರ್ಕ ಮಾಡಿ ಜಾಮೀನು ಅರ್ಜಿ ವಿಚಾರಣೆ ವೇಳೆ ದೆಹಲಿ ಹೈಕೋರ್ಟ್ ಇಂತಹ ಹೇಳಿಕೆ ನೀಡಿದೆ. ಅಷ್ಟೇ ಅಲ್ಲ ಜಾಮೀನು ಅರ್ಜಿ ಸಲ್ಲಿಸಿದ ಯುವಕನ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ನಿಶ್ಚಿತಾರ್ಥದ ನಂತರ ಯುವಕನೊಬ್ಬ ಭಾವಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಯುವಕನ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಈ ಸಂಬಂಧದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಿಶ್ಚಿತಾರ್ಥವಾದ ಮಾತ್ರಕ್ಕೆ ಭಾವಿ ಪತ್ನಿ ಅಥವಾ ಮದುವೆಯಾಗಲಿರುವ ಯುವತಿಯೊಂದಿಗೆ ಸಂಬಂಧ ಹೊಂದಲು ಅಥವಾ ಹಲ್ಲೆ ಮಾಡಲು ಅನುಮತಿ ಇದೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಆದೇಶ ನೀಡಿದೆ.
ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವರ್ಣಾ ಕಾಂತ್ ಶರ್ಮಾ ಅವರು ಮದುವೆಯನ್ನು ನಿಶ್ಚಯಿಸಿರುವುದರಿಂದ ಎರಡೂ ಕಡೆಯವರು ಒಪ್ಪಿಗೆ ನೀಡುವ ಸಾಧ್ಯತೆ ಇರುತ್ತದೆ ಎಂದೇ ಭಾವಿಸಲಾಗುತ್ತದೆ. ಆದರೆ ನಿಶ್ಚಿತಾರ್ಥದ ನಂತರ ಲೈಂಗಿಕವಾಗಿ ಬಳಸಿಕೊಳ್ಳುವ ಹಾಗೂ ಆಕೆಯ ಮೇಲೆ ಹಕ್ಕು ಸಾಧಿಸುವ ಯಾವುದೇ ಹಕ್ಕನ್ನು ವರನಿಗೆ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಮದುವೆ ನಿಶ್ಚಯ ಆದ ನಂತರ ಭಾವಿ ಪತಿ ವಧುವನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿಯಾದ ಬಳಿಕ ಗರ್ಭಪಾತವನ್ನು ಮಾಡಿಸಿ ಮದುವೆ ನಿರಾಕರಣೆ ಮಾಡಿರುವುದು ಪ್ರಕರಣ ಒಂದು ದಾಖಲಾಗಿರುತ್ತದೆ.ಹುಡುಗ – ಹುಡುಗಿ ಒಂದು ವರ್ಷ ಸಂಬಂಧ ಹೊಂದಿದ್ದರು. ಅಕ್ಟೋಬರ್ ತಿಂಗಳಿನಲ್ಲಿ ಪರಸ್ಪರ ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ನಾಲ್ಕು ದಿನಗಳ ಬಳಿಕ ಯುವಕ, ಯುವತಿಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕ ಕೂಡಾ ಮಾಡಿದ್ದ. ಈ ಸಂದರ್ಭದಲ್ಲಿ ಯುವಕ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದರಿಂದ ಶೀಘ್ರವೇ ಮದುವೆ ಮಾಡಿಕೊಳ್ಳುತ್ತಿದ್ದೇವೆ ಏನೂ ತೊಂದರೆ ಆಗುವುದಿಲ್ಲ ಎಂದು ವಧುವನ್ನು ಒಪ್ಪಿಸಿದ್ದ. ಇದಾದ ಬಳಿಕ ಯುವಕ ಯುವತಿಯೊಂದಿಗೆ ಹಲವು ಬಾರಿ ಮಿಲನ ಕ್ರಿಯೆ ನಡೆಸಿದ್ದ. ಈ ಕಾರಣ ಯುವತಿ ಗರ್ಭಿಣಿಯಾಗಿದ್ದಳು. ಈ ವಿಚಾರ ಗೊತ್ತಾಗಿ ಯುವಕ ಗರ್ಭಪಾತಕ್ಕೆ ಮಾತ್ರೆಗಳನ್ನೂ ನೀಡಿದ್ದಾನೆ. ಇದಾದ ಬಳಿಕ 9 ಜುಲೈ 2022 ರಂದು ಯುವತಿ ಯುವಕನ ಮನೆಗೆ ಹೋದಾಗ ಈ ಎಲ್ಲ ವಿಚಾರ ಮನೆಯವರಿಗೆ ಗೊತ್ತಾಗಿ, ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಅನಿವಾರ್ಯವಾಗಿ ಜುಲೈ 16 ರಂದು ದಕ್ಷಿಣ ದೆಹಲಿಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಜುಲೈ 22ರಂದು ಯುವಕನನ್ನು ಬಂಧಿಸಿದ್ದರು.
ಯುವಕನು ಜಾಮೀನು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ನಂತರ ಯುವಕನ ಜಾಮೀನು ಅರ್ಜಿ ತಿರಸ್ಕರಿಸಿದೆ. ಈ ಸಂಬಂಧ ಪ್ರಕರಣದಲ್ಲಿ ಜುಲೈ 16 ರಂದು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸೆಪ್ಟೆಂಬರ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಅದಾದ ಬಳಿಕ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆ ಯಾವುದೇ ಸಾಕ್ಷ್ಯ ಪ್ರಸ್ತುತಪಡಿಸಿಲ್ಲ ಎಂದು ಪ್ರತಿವಾದಿ ವಕೀಲರು ಆರೋಪಿಸಿದ್ದರು.ಈ ನಡುವೆ ಪ್ರಕರಣದ ವಿಚಾರಣೆ ನಡೆಸಿರುವ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆದರೆ ಆರೋಪಗಳನ್ನು ನ್ಯಾಯಾಲಯವು ಇನ್ನೂ ನಿರ್ಧರಿಸಿಲ್ಲ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಬಾರದು ಎಂದು ಕೋರ್ಟ್ ಗೆ ಮನವಿ ಮಾಡಲಾಗಿದೆ. ಪ್ರಾಸಿಕ್ಯೂಷನ್‌ನ ಈ ಮನವಿಯನ್ನು ಒಪ್ಪಿಕೊಂಡ ನ್ಯಾಯಾಲಯ, ಯುವಕನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಮೊದಲು ಸೆಷನ್ಸ್ ಕೋರ್ಟ್ ಯುವಕ ಸಲ್ಲಿಸಿದ್ದ ಎರಡು ಪ್ರತ್ಯೇಕ ಜಾಮೀನು ಅರ್ಜಿಗಳನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಯುವಕ ಜಾಮೀನಿಗಾಗಿ ಹೈಕೋರ್ಟ್ಗೆ ಮನವಿ ಮಾಡಿರುವುದಾಗಿದೆ. ಇದೀಗ ಹೈಕೋರ್ಟ್‌ನಲ್ಲೂ ಜಾಮೀನು ಅರ್ಜಿ ವಜಾಗೊಂಡಿದೆ.
ಯುವಕನಿಗೆ ಕೊನೆಗೂ ಜಾಮೀನು ದೊರಕಲಿಲ್ಲ. ಆದ್ದರಿಂದ ನಿಶ್ಚಿತಾರ್ಥ ಎಂದಿಗೂ ಲೈಂಗಿಕ ಸಂಬಂಧ ಬೆಳೆಸಲು ಒಪ್ಪಿಗೆ ಎಂದು ತಿಳಿಯಬಾರದೆಂದು ಆದೇಶ ನೀಡಿದ್ದಲ್ಲದೆ. ಯುವಕನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗಿದೆ.