Good News : ಕನ್ನಡ ಸೇರಿ 22 ಭಾಷೆಗಳಲ್ಲಿ ಪಹಣಿ ಲಭ್ಯ | ಭೂವ್ಯವಹಾರ ಇನ್ನು ಸುಲಭ
ಭಾಷೆ ಎಂಬ ವಿಷಯಕ್ಕೆ ಬಹಳ ಮಹತ್ವವಿದ್ದು, ಸಂವಹನ ಕೌಶಲ್ಯದ ಜೊತೆಗೆ ಬೇರೆಯವರೊಂದಿಗೆ ವಿಚಾರವನ್ನು ಪ್ರಸ್ತಾಪಿಸಿ ಅರ್ಥೈಸಲು ಭಾಷೆ ಪ್ರಮುಖ ಪಾತ್ರ ವಹಿಸುತ್ತದೆ. ಆಯಾ ಪ್ರದೇಶಗಳಿಗೆ ಅನುಸಾರವಾಗಿ ಮಾತನಾಡುವ ವೈಖರಿಯಲ್ಲಿ ಬದಲಾವಣೆಗಳಿವೆ.
ಯಾವುದೇ ಬ್ಯಾಂಕ್, ಖಾಸಗಿ ಕೆಲಸ ಪೂರ್ಣಗೊಳಿಸಲು ಆ ಪ್ರದೇಶದಲ್ಲಿ ಬಳಕೆಯಾಗುವ ಮಾತೃ ಭಾಷೆ ಮೂಲಕ ವಿಷಯಗಳ ವಿನಿಮಯ ನಡೆಯುತ್ತದೆ. ಕರ್ನಾಟಕದಲ್ಲಿ ಹೆಚ್ಚಿನ ಕೆಲಸ ಕಾರ್ಯಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ವ್ಯವಹರಿಸಲ್ಪಡುತ್ತಿದೆ. ಇದಲ್ಲದೇ, ರಾಷ್ಟ್ರೀಯ ಭಾಷೆಯಗಿರುವ ಹಿಂದಿ ತನ್ನದೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಸ್ಥಳೀಯ ಭಾಷೆಗಳಲ್ಲಿ ಮಾತ್ರ ಇರುವ ಪಹಣಿ ಭೂ ದಾಖಲೆಗಳನ್ನು ಇಂಗ್ಲಿಷ್, ಹಿಂದಿ ಸೇರಿದಂತೆ 22 ಅಧಿಕೃತ ಭಾಷೆಗಳಲ್ಲಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದ್ದು, ಅದಕ್ಕೆ ಪೂರಕ ವ್ಯವಸ್ಥೆಗಳು ನಡೆಯುತ್ತಿದ್ದು, ಇದಕ್ಕಾಗಿ ಸಾಫ್ಟ್ವೇರ್ ಬಿಡುಗಡೆ ಮಾಡುವ ಯೋಜನೆ ಕಾರ್ಯರೂಪಕ್ಕೆ ತರುವ ನಿರ್ಧಾರ ಕೈಗೊಳ್ಳಲಿದೆ.
ಮೊದಲಿಗೆ ಸ್ಥಳೀಯ ಭಾಷೆಗಳಾದ ಹಿಂದಿ, ಇಂಗ್ಲಿಷ್ ನಲ್ಲಿ ಪಹಣಿ ಲಭ್ಯವಾಗಲಿದ್ದು, ಬಳಿಕ ಇನ್ನು ಮೂರು ಭಾಷೆಗಳಿಗೆ ಪಹಣಿ ದಾಖಲೆಗಳನ್ನು ತರ್ಜುಮೆ ಮಾಡಲಾಗುತ್ತದೆ. ಮುಂದುವರಿದ ಭಾಗವಾಗಿ ಬಳಿಕ,22 ಭಾಷೆಗಳಲ್ಲಿ ಪಹಣಿ ದಾಖಲೆ ಲಭ್ಯವಾಗುತ್ತದೆ.
ದೇಶಗಳಲ್ಲಿ ಒಂದೇ ಊರಿನವರಲ್ಲದೆ, ಬೇರೆ ಊರುಗಳಿಂದ ಕೆಲಸ, ಇಲ್ಲವೇ ಮತ್ತಿತ್ತರ ಕಾರಣಗಳಿಂದ ನೆಲೆ ನಿಲ್ಲುವಾಗ ಭಾಷೆ ತೊಡಕಾಗಿ ವ್ಯವಹಾರ ನಡೆಸಲು ತೊಂದರೆಯಾಗುವುದು ತಪ್ಪುತ್ತದೆ.
ಇದರ ಜೊತೆಗೆ ಬೇರೆ ರಾಜ್ಯದವರು ಭೂ ವ್ಯವಹಾರ ಮಾಡುವಾಗ ಉಂಟಾಗುವ ಭಾಷೆಯ ಗೊಂದಲ ನಿವಾರಿಸಲು ಈ ಕ್ರಮ ಜಾರಿಗೆ ತರಲು ಸರಕಾರ ತೀರ್ಮಾನಿಸಿದೆ.
ರೆಕಾರ್ಡ್ ಆಫ್ ರೈಟ್ಸ್ ಅಥವಾ ಜಮಾ ಬಂದಿ ದಾಖಲೆಗೆ ಬೇರೆ ಬೇರೆ ರಾಜ್ಯಗಳಲ್ಲಿ ವಿಭಿನ್ನ ಹೆಸರಿದ್ದು, ಕರ್ನಾಟಕದಲ್ಲಿ ಭೂಮಿ ವೆಬ್ಸೈಟ್ ನಲ್ಲಿ ಪಹಣಿ ಕನ್ನಡ ಭಾಷೆಯಲ್ಲಿ ಲಭ್ಯವಿದ್ದರೆ,, ಬೇರೆ ರಾಜ್ಯಗಳಲ್ಲಿ ಅಲ್ಲಿ ಬಳಕೆಯಾಗುವ ಭಾಷೆಗಳಲ್ಲಿ ಲಭ್ಯವಿರುತ್ತದೆ.
ಹಾಗಾಗಿ, ದೇಶದ ಎಲ್ಲ 22 ಅಧಿಕೃತ ಭಾಷೆಗಳಿಗೂ ಈ ದಾಖಲೆ ಭಾಷಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ ಮಾಹಿತಿ ನೀಡಿದೆ.ಇದರಿಂದ ಸಂವಹನ ಮಾಡಲು ತೊಡಕಾಗುವುದು ತಪ್ಪುವುದಲ್ಲದೆ, ಸರ್ಕಾರದ ಈ ನಡೆಯಿಂದ ಜನರಿಗೆ ನೆರವಾಗಲಿದೆ.