ದಾಳಿಂಬೆಯಿಂದ ಇಷ್ಟೆಲ್ಲಾ ಪ್ರಯೋಜನಗಳು ಇದ್ಯಾ? ಕೇಳಿದ್ರೆ ಪಕ್ಕಾ ನೀವು ತಿಂತೀರಾ
ಮಧುಮೇಹ ದೇಹದಲ್ಲಿ ಗ್ಲೂಕೋಸ್ ಪದಾರ್ಥದ ನಿಯಂತ್ರಣ ವ್ಯವಸ್ಥೆಯ ದೋಷಗಳಿಂದ ಉಂಟಾಗುವ ಒಂದು ಕಾಯಿಲೆ. ವಂಶಪಾರಂಪರ್ಯದಿಂದ ಬರಬಹುದಾದ ಕಾಯಿಲೆಯಿದು. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ. ಪ್ರಸ್ತುತ ಮಧುಮೇಹಕ್ಕೆ ಒಳಗಾದವರ ಸಂಖ್ಯೆ ಅತೀ ಹೆಚ್ಚು ಎನ್ನಬಹುದು. ಹೀಗಾಗಿ ಇದಕ್ಕೆ ಹಲವಾರು ಆಹಾರ ಪದ್ಧತಿಗಳನ್ನು ಇವರು ಪಾಲಿಸುತ್ತಾರೆ. ಆಹಾರದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರುಪೇರು ಕಂಡು ಬರುತ್ತದೆ. ಹೀಗಾದಾಗ ಮೂತ್ರಪಿಂಡ ಮತ್ತು ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ. ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿರುವ ಈ ಹಣ್ಣನ್ನು ತಿನ್ನುವ ಸಲಹೆ ನೀಡಲಾಗುತ್ತದೆ. ನಿತ್ಯ ಈ ಹಣ್ಣಿನ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ದಾಳಿಂಬೆ ಈ ಹಣ್ಣಿಗೆ ನೂರು ರೀತಿಯ ಕಾಯಿಲೆಗಳನ್ನು ನಾಶ ಪಡಿಸುವ ಅಂಶವಿದೆ. ರಕ್ತವನ್ನು ಶುದ್ಧೀಕರಿಸುತ್ತದೆ. ದಾಳಿಂಬೆ ತಿನ್ನುವ ಪ್ರಯೋಜನಗಳು 1. ಮಧುಮೇಹದಲ್ಲಿ ಪರಿಣಾಮಕಾರಿ : ದಾಳಿಂಬೆ ಬೀಜಗಳು ಮಧುಮೇಹ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದು ಮಧುಮೇಹ ರೋಗಿಗಳಿಗೆ ಯಾವುದೇ ಔಷಧಿಗಿಂತ ಕಡಿಮೆಯಿಲ್ಲ. ಈ ಹಣ್ಣಿನಲ್ಲಿ ನಾರಿನಂಶ ಜಾಸ್ತಿ ಇರುವುದರಿಂದ ಅದನ್ನು ಹಾಗೆಯೇ ತಿಂದರೆ ಉತ್ತಮ . ಇನ್ನು ಜ್ಯೂಸ್ ತೆಗೆದು ಕುಡಿದರೆ, ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯವಾಗುತ್ತದೆ. 2. ರಕ್ತಹೀನತೆಯಲ್ಲಿ ಪ್ರಯೋಜನಕಾರಿ: ತಮ್ಮ ದೇಹದಲ್ಲಿ ರಕ್ತದ ಕೊರತೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಆಯಾಸ ಮತ್ತು ದೌರ್ಬಲ್ಯವನ್ನು ಎದುರಿಸುತ್ತಾರೆ. ಅಂತಹ ಸ್ಥಿತಿಯನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ನಿಮಗೂ ಈ ಕಾಯಿಲೆ ಇದ್ದರೆ, ಅಥವಾ ಎದುರಾದರೆ ದಾಳಿಂಬೆಯನ್ನು ಸೇವಿಸಿ. ಇದು ಕಬ್ಬಿಣದ ಕೊರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ, ಕೆಂಪು ರಕ್ತ ಕಣಗಳನ್ನು ಹೆಚ್ಚಿಸುತ್ತದೆ. 3. ಗರ್ಭಾವಸ್ಥೆಯಲ್ಲಿ ಸಹಾಯಕ : ದಾಳಿಂಬೆಯಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ. ಇದರ ಮೂಲಕ ಗರ್ಭಾವಸ್ಥೆಯಲ್ಲಿ ಪ್ಲೆಸೆಂಟಾ ರಕ್ಷಿಸಲ್ಪಡುತ್ತದೆ. ಈ ಹಣ್ಣಿನಲ್ಲಿರುವ ಫೋಲೇಟ್ ಹೊಟ್ಟೆಯಲ್ಲಿ ಬೆಳೆಯುವ ಮಗುವಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಹಣ್ಣನ್ನು ತಿನ್ನಿ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಿ.