WhatsApp ನಲ್ಲಿ ಬರಲಿದೆ ಈ ಹೊಸ ವೈಶಿಷ್ಟ್ಯ | ಇನ್ನು ಮುಂದೆ ಈ ಆಪ್ಶನ್ ಶೀಘ್ರ ನಿರ್ಬಂಧ!!!

ಮೊಬೈಲ್ ಎಂಬ ಸಾಧನ ಜನರ ಅವಿಭಾಜ್ಯ ಅಂಗವಾಗಿದ್ದು, ಪ್ರತಿನಿತ್ಯದ ದಿನಚರಿಯಲ್ಲಿ ಮೊಬೈಲ್ ಎಂಬ ಮಾಯಾವಿಯ ಬಳಕೆ ಮಾಡದೇ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ವಾಟ್ಸಪ್ ಎಂಬ ಮಾಧ್ಯಮದ ಮೇಲೆ ಜನರಿಗೆ ಹೆಚ್ಚು ಒಲವು ಎಂದರೂ ತಪ್ಪಾಗದು.
ಬಳಕೆದಾರರು ಹೆಚ್ಚಾದಂತೆ ವಾಟ್ಸಪ್ ಕೂಡ ಗ್ರಾಹಕನಿಗೆ ನೆರವಾಗಲು ದಿನದಿಂದ ದಿನಕ್ಕೆ ಹೊಸ ವೈಶಿಷ್ಟ್ಯವನ್ನು ಹೊರ ತಂದು ಜನಸ್ನೇಹಿ ಮಾಧ್ಯಮವಾಗಿ ಬಿಟ್ಟಿದೆ.

ಅದರಲ್ಲೂ ಕೂಡ ಇತ್ತೀಚಿನ ದಿನಗಳಲ್ಲಿ ಬಳಕೆದಾರರು ಫೋಟೊ ಮತ್ತು ವಿಡಿಯೊ ರವಾನಿಸುವಾಗ ಮೊಬೈಲಿನ ಗ್ಯಾಲರಿಯಲ್ಲಿ ಸೇವ್ ಆಗದಿರುವಂತೆ ಕೇವಲ ಒಂದು ಸಲ ನೋಡಲು ಅನುವು ಮಾಡಿಕೊಡುವ ಉದ್ದೇಶದಿಂದ ‘ವ್ಯೂ ಒನ್ಸ್’ ಆಯ್ಕೆಯನ್ನು ವಾಟ್ಸಪ್ ಪರಿಚಯಿಸಿದೆ.
ಅಲ್ಲದೇ, ಈಗಿರುವ ಆಯ್ಕೆಯಲ್ಲಿ ಬಳಕೆದಾರರು ‘ವ್ಯೂ ಒನ್ಸ್’ ಫೋಟೊಗಳನ್ನು ಸ್ಕ್ರೀನ್ ಶಾಟ್ ತೆಗೆಯಲು ಹಾಗೂ ವೀಡಿಯೊಗಳನ್ನು ಸ್ಕ್ರೀನ್ ರೆಕಾರ್ಡಿಂಗ್ ಮಾಡಿಕೊಳ್ಳಲು ಸಾಧ್ಯವಿದೆ.

ಹಾಗಾಗಿ, ಇದರಿಂದ ಅನುಕೂಲದ ಜೊತೆಗೆ ಅನಾನುಕೂಲವು ಸೇರಿಕೊಂಡಿದ್ದು, ಈ ಫೋಟೋ ಅಥವಾ ವೀಡಿಯೊವನ್ನು ದುರುಪಯೋಗ ಪಡಿಸಿಕೊಳ್ಳವುದನ್ನು ತಡೆಯಲು ವಾಟ್ಸಪ್ ಹೊಸ ನಿರ್ಧಾರ ಕೈಗೊಳ್ಳಲಿದೆ.
ಪ್ಲೇ ಸ್ಟೋರ್‌ನಿಂದ ಇತ್ತೀಚಿನ ಬೀಟಾವನ್ನು ಸ್ಥಾಪಿಸುವ ಕೆಲವು ಬೀಟಾ ಪರೀಕ್ಷಕರಿಗೆ ಸಾಮರ್ಥ್ಯ ಲಭ್ಯವಿದ್ದು, WaBetaInfo ಎಂಬುದು WhatsApp ನ ಮುಂಬರುವ ಹೊಸ ವೈಶಿಷ್ಟ್ಯಗಳನ್ನು ಟ್ರ್ಯಾಕ್ ಮಾಡುವ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ.

ವ್ಯೂ ಒನ್ಸ್ ಫೀಚರ್ ಮೂಲಕ ಸ್ವೀಕರಿಸುವವರ ಚಾಟ್ ಅನ್ನು ಒಮ್ಮೆ ತೆರೆದರೆ ಆ ಫೋಟೊ ಅಥವಾ ವಿಡಿಯೋ ಸ್ವಯಂಚಾಲಿತವಾಗಿ ಅಳಿಸಿ ಹೋಗುತ್ತದೆ. ಈ ವೈಶಿಷ್ಟ್ಯವು ವಾಟ್ಸಾಪ್ ಬಳಕೆದಾರರಿಗೆ ಹೆಚ್ಚಿನ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ತಂದಿದ್ದು, ವ್ಯೂ ಒನ್ಸ್ ಫೋಟೊ ಮತ್ತು ವಿಡಿಯೊಗಳ ಸ್ಕ್ರೀನ್‌ಶಾಟ್ ಮತ್ತು ವೀಡಿಯೊ ರೆಕಾರ್ಡಿಂಗ್ ಮಾಡದೇ ಇರುವ ನಿಟ್ಟಿನಲ್ಲಿ ಹೊಸ ಭದ್ರತಾ ಅಪ್‌ಡೇಟ್ ಅನ್ನು ಶೀಘ್ರದಲ್ಲೇ ಬಳಕೆದಾರರಿಗೆ ಒದಗಿಸಲಿದೆ.

ಈ ಕುರಿತ ಬೀಟಾ ಆವೃತ್ತಿಯನ್ನು ವಾಟ್ಸಾಪ್ ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ಐಫೋನ್ ಮತ್ತು ಅಂಡ್ರಾಯ್ಡ್ ಬಳಕೆದಾರರಿಗೆ ಹೊಸ ಅಪ್‌ಡೇಟ್ ದೊರಕುವ ಸಾಧ್ಯತೆ ದಟ್ಟವಾಗಿದೆ. ಹೊಸ ಫೀಚರ್ ಮೂಲಕ ಬಳಕೆದಾರರು ಒಮ್ಮೆ ಸಂದೇಶಗಳನ್ನು ವೀಕ್ಷಿಸಲು ಸ್ಕ್ರೀನ್‌ಶಾಟ್‌ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದು.ಜೊತೆಗೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಲು ಪ್ರಯತ್ನ ಪಟ್ಟರೆ ಚಿತ್ರವು ಕಪ್ಪು ಬಣ್ಣದಲ್ಲಿರುತ್ತದೆ.

ಚಿತ್ರಗಳು ಮತ್ತು ವೀಡಿಯೊಗಳನ್ನು ಒಮ್ಮೆ ಫಾರ್ವರ್ಡ್ ಮಾಡಲು, ರಫ್ತು ಮಾಡಲು ಅಥವಾ ಉಳಿಸಲು ಸಾಧ್ಯವಿಲ್ಲದೆ ಇರುವುದರಿಂದ , ಸ್ವೀಕರಿಸುವವರು ಬೇರೆ ಮೊಬೈಲ್ ಸಾಧನವನ್ನು ಬಳಸಿಕೊಂಡು ಫೋಟೋ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಸಂದೇಶಗಳನ್ನು ಒಮ್ಮೆ ವೀಕ್ಷಿಸಿ ಕಳುಹಿಸುವಾಗ ಜಾಗ್ರತೆ ವಹಿಸುವುದು ಒಳ್ಳೆಯದು.


ಬಳಕೆದಾರರು ಒಮ್ಮೆ ಸಂದೇಶಗಳನ್ನು ವೀಕ್ಷಿಸಿದ ಸ್ಕ್ರೀನ್‌ಶಾಟ್‌ಗಳನ್ನು ತೆಗೆಯುವುದನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಈ ಹೊಸ ಬದಲಾವಣೆಗೆ ಅಡಿ ಇಡಲಾಗಿದ್ದು, ಜನರಿಗೆ ನೆರವಾಗಲಿದೆ ಎಂಬ ನಿರೀಕ್ಷೆಯನ್ನು ವಾಟ್ಸಾಪ್ ಹುಟ್ಟು ಹಾಕಿದೆ.

Leave A Reply

Your email address will not be published.