Kantara Hero Rishab Shetty | ಮಗಳ ಫೋಟೋ ಶೇರ್ ಮಾಡಿದ ರಿಷಬ್ | ಕಾರಣ?

ಕಾಂತಾರ ಸಿನಿಮಾ ಬಾಕ್ಸ್ ಆಫೀಸಿನಲ್ಕಿ ಕೊಳ್ಳೆಹೊಡೆಯುತ್ತಿದೆ. ಕಾಂತಾರ ಸಿನಿಮಾದ ಇಡೀ ತಂಡ ತಾವು ಇಷ್ಟಪಟ್ಟು ಮಾಡಿದ ಕೆಲಸದ ಸಕ್ಸಸ್ ಅನ್ನು ಅನುಭವಿಸುತ್ತಿದ್ದಾರೆ. ಈಗ ಇದೇ ಖುಷಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮಗಳ ಫೋಟೋ ಒಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿದ್ದಾರೆ.

 

ರಿಷಬ್ ಅವರ ಎರಡನೇ ಮಗಳ ನಗುವ ಫೋಟೋವೊಂದನ್ನು ಅಪ್​ಲೋಡ್ ಮಾಡಿ ಕ್ಯಾಪ್ಶನ್ ಕೊಟ್ಟಿದ್ದಾರೆ.

ಎಲ್ಲರಿಗೂ ನವರಾತ್ರಿಯ ಶುಭಾಶಯಗಳು. ನಾಡಹಬ್ಬಕ್ಕೆ ಕಾಂತಾರದ ಯಶಸ್ಸು, ನಾಡಿನ ಜನರ ಪ್ರೀತಿ ಮತ್ತಷ್ಟು ಸಂಭ್ರಮವನ್ನು ತಂದಿವೆ. ಇದಕ್ಕೆ ಕಲಶಪ್ರಾಯವಾಗಿ, ಮಗಳು ರಾಧ್ಯಾಳ ಮುಗ್ಧ ನಗುವೂ ಜೊತೆಯಾಗಿದೆ. ನಿಮ್ಮೆಲ್ಲರ ಹಾರೈಕೆಗಳಿರಲಿ ಎಂದು ರಿಷಬ್ ಬರೆದಿದ್ದಾರೆ.

ರಿಷಬ್ ದಂಪತಿಗಳಿಗೆ ಮುದ್ದಾದ ಮಗನೂ ಇದ್ದಾನೆ. ರಣ್ ವಿತ್ ಶೆಟ್ಟಿ ಎಂಬುದು ಈ ಪೋರನ ಹೆಸರು.
ಮಾರ್ಚ್ 4ರಂದು ರಿಷಬ್‌ ಹೆಣ್ಣು ಮಗುವಿನ ತಂದೆಯಾಗಿದ್ದರು. ಆ ಕುರಿತು ಮಾಹಿತಿ ನೀಡಿದ್ದ ರಿಷಬ್‌, ‘ಚಂದದ ಮಗಳು ಹುಟ್ಟಿದ್ದಾಳೆ, ತಾಯಿ ಮಗು ಆರೋಗ್ಯವಾಗಿದ್ದಾರೆ’ ಎಂದಿದ್ದರು.

ರಿಷಬ್ ಮಗಳಿಗೆ 7 ತಿಂಗಳು ತುಂಬಿದ್ದು ಈ ಖುಷಿಯಲ್ಲಿಯೇ ಫೊಟೋ ಶೇರ್ ಮಾಡಿದ್ದಾರೆ.
ರಿಷಬ್ ಅವರು ಶೇರ್ ಮಾಡಿದ ಮಗಳ ಫೋಟೋಗೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 250ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.

Leave A Reply

Your email address will not be published.