ಕಾಂತಾರ ಸಿನಿಮಾ ಹಿಂದಿ ಟ್ರೈಲರ್ ರೆಡಿ | ಪ್ಯಾನ್ ಇಂಡಿಯಾ ಸಿನಿಮಾ ಆಗುವತ್ತ ದಾಪುಗಾಲು ಇಟ್ಟ ರಿಷಬ್ ಶೆಟ್ಟಿ ಸಿನಿಮಾ

ಸಿನಿಪ್ರಿಯರ ಬಾಯಲ್ಲಿ ಈಗ ಬರೀ ಒಂದೇ ಸಿನಿಮಾದೇ ಮಾತು ಓಡಾಡುತ್ತಿದೆ. ಅದು ಕಾಂತಾರ ಸಿನಿಮಾ ಬಗ್ಗೆ. ಉತ್ತಮ ವಿಮರ್ಶೆಯ ಜೊತೆಗೆ ಕರಾವಳಿ ಮಾತ್ರವಲ್ಲದೇ ಬೆಂಗಳೂರಿಗರ ಮನಸ್ಸನ್ನು ಕೂಡಾ ಸೂರೆಗೊಂಡಿದೆ ಈ ಸಿನಿಮಾ ಎಂದರೆ ತಪ್ಪಿಲ್ಲ. ಈ ಸಿನಿಮಾ ರಿಲೀಸ್ ಆದಾಗಿನಿಂದ ಒಂದು ಮಾತು ಹೆಚ್ಚು ಕೇಳುತ್ತಿತ್ತು ಅದುವೇ ಇದು ಬೇರೆ ಭಾಷೆಯಲ್ಲಿ ಬರುತ್ತಾ ಎನ್ನುವುದು. ಈಗ ಈ ಸಿನಿಮಾ ಒಂದು ಹೆಜ್ಜೆ ಮುಂದೆ ಇಟ್ಟಿದೆ.

 

ಹೌದು, ರಿಷಬ್ ಶೆಟ್ಟಿ ಅಭಿನಯದ ದೈವ ಶಕ್ತಿಯನ್ನೇ ಎತ್ತಿ ತೋರಿಸಿದ ಸೂಪರ್ ಹಿಟ್ ಚಲನ ಚಿತ್ರ ‘ಕಾಂತಾರ’ ಪ್ಯಾನ್ ಇಂಡಿಯಾ ಸಿನಿಮಾವಾಗುವತ್ತ ದಾಪುಗಾಲಿಡುತ್ತಿದ್ದು ಹಿಂದಿ ಟ್ರೈಲರ್ ಬಿಡುಗಡೆಗೆ ಸಿದ್ಧವಾಗಿದೆ.

‘ದೈವತ್ವದಿಂದ ಮಂತ್ರಮುಗ್ಧರಾಗಲು ಸಿದ್ಧರಾಗಿ, ಸಾಕ್ಷಿ ಮತ್ತು ದೈವಿಕ ಶಕ್ತಿಯನ್ನು ಅನುಭವಿಸಿ, ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9 ರಂದು ಬೆಳಗ್ಗೆ 9 10 ಕ್ಕೆ ಬಿಡುಗಡೆ ಮಾಡಲಾಗುವುದು’ ಎಂದು ಹೊಂಬಾಳೆ ಫಿಲ್ಮ್ ಗುರುವಾರ ಟ್ವಿಟ್ ಮಾಡಿದೆ. ಎಲ್ಲಾ ಕಡೆನೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಹಲವರು ಟಿಕೆಟ್ ಸಿಗದೇ ನಿರಾಶರಾಗುತ್ತಿದ್ದಾರೆ.
ಕಾಂತಾರ ಚಿತ್ರಕ್ಕೆ ಭಾರಿ ಸ್ಪಂದನೆ ವ್ಯಕ್ತವಾಗಿದ್ದು, ಇತರ ಭಾಷೆಗಳಿಗೂ ಶೀಘ್ರ ಡಬ್ಬಿಂಗ್ ನಡೆಯಲಿದೆ ಎನ್ನಲಾಗಿದೆ.

ಮಲಯಾಳ, ತೆಲುಗು, ತಮಿಳು ಭಾಷೆಗಳವರಿಂದ ಆ ಭಾಷೆಗಳಿಗೆ ಡಬ್ಬಿಂಗ್‌ಗೆ ಬೇಡಿಕೆ ಬರುತ್ತಿದ್ದು, ನಮ್ಮ ಪ್ರೊಡಕ್ಷನ್ ಹೌಸ್ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Leave A Reply

Your email address will not be published.