ಏರ್ ಇಂಡಿಯಾ ಬಳಿಕ ಇದೀಗ ಇನ್ನೊಂದು ವಿಮಾನ ಸಂಸ್ಥೆ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅವಕಾಶ ಕಲ್ಪಿಸಿದೆ. ಯಾವುದು ಆ ವಿಮಾನ ಸಂಸ್ಥೆ ?

ವಿಮಾನದಲ್ಲಿ ಪ್ರಯಾಣಿಸುವವರಿಗೆ ಇದೊಂದು ರೀತಿಯಲ್ಲಿ ಸಂತಸದ ಸುದ್ದಿ. ಅದೇನೆಂದರೆ ಇನ್ನು ಮುಂದೆ ವಿಮಾನ ಪ್ರಯಾಣಿಕರು ಪ್ರಯಾಣಿಸುವಾಗ ತಮ್ಮ ಸಾಕು ಪ್ರಾಣಿಗಳನ್ನು ಕೊಂಡೊಯ್ಯಬೇಕೆಂದು ಇಚ್ಛಿಸಿದ್ದರೆ ,ಏರ್ ಇಂಡಿಯಾ ಬಳಿಕ ಇನ್ನೊಂದು ವಿಮಾನ ಸಂಸ್ಥೆ ಅದಕ್ಕೆ ಅವಕಾಶ ಕಲ್ಪಿಸಿದೆ.

ಹೌದು. ಹೊಸತಾಗಿ ವಿಮಾನಯಾನಕ್ಕೆ ದಾಪುಗಾಲಿಟ್ಟ ʼಆಕಾಶ್ ಏರ್ ವಿಮಾನʼವು ಪ್ರಯಾಣಿಕರು ತಾವು ಸಾಕುವ ಸಾಕು ಪ್ರಾಣಿಗಳನ್ನು ಕೊಂಡೊಯ್ಯಲು ಅನುಮತಿ ನೀಡಿರುವ ಸಂಸ್ಥೆ.  ನೂತನ ಆಕಾಶ ಏರ್ ವಿಮಾನಯಾನ ಸಂಸ್ಥೆಯ ಬುಕ್ಕಿಂಗ್ ಅಕ್ಟೋಬರ್ 15ರಿಂದ ಆರಂಭವಾಗುತ್ತಿದ್ದು, ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದೆ.

ಒಂದು ಸಾಕು ಪ್ರಾಣಿಯು 7 ಕೆಜಿವರೆಗೆ ತೂಕವಿರುವ ಮಿತಿಯಲ್ಲಿದ್ದರೆ  ಅದನ್ನು ಕ್ಯಾಬಿನೊಳಗೆ ಕೊಂಡೊಯ್ಯಲು  ಅನುಮತಿ ನೀಡಲಾಗಿದೆ. ಉಳಿದವುಗಳನ್ನು ಕಾರ್ಗೋದಲ್ಲಿ ಕೊಂಡೊಯ್ಯಲು ಅನುಮತಿಸಲಾಗಿದೆ ಎಂದು ಆಕಾಶ ಏರ್ ಸಂಸ್ಥೆ ತಿಳಿಸಿದೆ.

ಇದು ಸಾಕು ಪ್ರಾಣಿಗಳನ್ನು ಕೊಂಡು ಹೋಗಲು ಅವಕಾಶ ಕಲ್ಪಿಸಿದ ಎರಡನೇ ವಾಣಿಜ್ಯ ವಿಮಾನ ಸಂಸ್ಥೆಯಾಗಿದೆ . ಇದಕ್ಕೂ ಮೊದಲು ಏರ್ ಇಂಡಿಯಾ ವಿಮಾನ ಸಂಸ್ಥೆ ನಿರ್ದಿಷ್ಟ ಇತಿ ಮಿತಿಯಲ್ಲಿ ಅವಕಾಶ ಕಲ್ಪಿಸಿತ್ತು.

Leave A Reply

Your email address will not be published.