ರೈತರಿಗೆ ಬಂಪರ್ : ಇಸ್ರೇಲ್ ಉಚಿತ ಪ್ರವಾಸ ಭಾಗ್ಯ

ದುಡಿಮೆಯಿಂದ ಪ್ರಾಥಮಿಕ ಅಗತ್ಯಗಳನ್ನಷ್ಟೆ ಪೂರೈಸಲು ಕಷ್ಟಪಡುವ ನಮ್ಮ ರೈತರಿಗೆ ಈಗ ಒಂದು ಬಂಪರ್ ಹೊಡೆದಿದೆ. ರೈತರಿಗೆ ದಸರಾ ಹಬ್ಬದ ಸಿಹಿ ಸುದ್ದಿ ಸಿಕ್ಕಿದ್ದು ಸುಮಾರು 50 ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯ ದೊರಕಿದೆ.

ಹೌದು, ಚಿತ್ರದುರ್ಗ ತಾಲೂಕಿನ ಸುಮಾರು 50 ರೈತರಿಗೆ ದಸರಾ ಹಬ್ಬದ ಉಡುಗೊರೆಯಂತೆ ಈ ಭಾಗ್ಯ ದೊರಕಿದೆ.
ವಿಧಾನ ಪರಿಷತ್ ಮಾಜಿ ಸದಸ್ಯರಾದ ರಘು ಆಚಾರ್ ಅವರು ಈ ಕೊಡುಗೆಯನ್ನು ನೀಡಿದ್ದಾರೆ. ದಸರಾ ಪ್ರಯುಕ್ತ ಸುಮಾರು 50 ಜನ ರೈತರಿಗೆ ಇಸ್ರೇಲ್ ಪ್ರವಾಸ ಭಾಗ್ಯವನ್ನು(Israel tour to farmers) ನೀಡಿದ್ದಾರೆ.

ಎಲ್ಲರಿಗೂ ತಿಳಿದಿರುವಂತೆ ಇಸ್ರೇಲ್ ಆಧುನಿಕ ಪದ್ಧತಿಯಿಂದ ಕೃಷಿ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿದೆ. ಈ ರೈತರು ಇಸ್ರೇಲ್ ನಲ್ಲಿರುವ ಕೃಷಿ ಪದ್ಧತಿಗಳು ನೀರಾವರಿ ಪದ್ಧತಿಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಇಲ್ಲಿ ಬಂದ ನಂತರ ಉಳಿದ ರೈತರಿಗೆ ಹೇಳಿ ಕೃಷಿಯಲ್ಲಿ ಹೆಚ್ಚಿನ ಲಾಭವನ್ನು ಪಡೆದು ಇತರರಿಗೆ ಮಾದರಿಯಾಗಬೇಕೆಂಬುದೇ ಅವರ ಆಶಯವಾಗಿದೆ.

ಈಗ ಮೊದಲನೇ ಹಂತದಲ್ಲಿ ಚಿತ್ರದುರ್ಗ ತಾಲೂಕಿನ ಸುಮಾರು 50 ರೈತರನ್ನು ತಮ್ಮ ಸ್ವಂತ ಖರ್ಚಿನಿಂದ ಕೃಷಿ ಬಗ್ಗೆ ಅಧ್ಯಯನಕ್ಕಾಗಿ ಇಸ್ರೇಲ್ ಗೆ ಕಳಿಸಲಿದ್ದಾರೆ. ಅಕ್ಟೋಬರ್ 25ರ ಒಳಗೆ 50 ಜನ ರೈತರನ್ನು ಆಯ್ಕೆ ಮಾಡಲಾಗುವುದು ಹಾಗೂ ನವೆಂಬರ್ 25 ರ ನಂತರ 50 ರೈತರನ್ನು ಇಸ್ರೇಲ್ ದೇಶಕ್ಕೆ(Israel tour to farmers) ಕಳಿಸಲಾಗುವುದು ಎಂದು ಹೇಳಿದ್ದಾರೆ.

ಒಬ್ಬ ರೈತನಿಗೆ ಸುಮಾರು 3.5 ಲಕ್ಷ ರೂಪಾಯಿಗಳವರೆಗೆ ಖರ್ಚಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು ಒಂದು ವಾರಗಳ ಕಾಲ ರೈತರು ಇಸ್ರಲ್ ಪ್ರವಾಸದಲ್ಲಿ ಇರಲಿದ್ದಾರೆ. ಅಲ್ಲಿ ವಿವಿಧ ರೀತಿಯ ಕೃಷಿ ತಂತ್ರಜ್ಞಾನಗಳು ಹಾಗೂ ಕೃಷಿ ಪದ್ದತಿಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
ಇಸ್ರೇಲ್ ಕೃಷಿ ಮುಂದುವರೆದಿದ್ದು ನೀರಾವರಿ ಪದ್ಧತಿಯಲ್ಲಿ ಅತ್ಯುನ್ನತ ಸಾಧನೆಗಳನ್ನು ಮಾಡಿದೆ ಹಾಗಾಗಿ ಅಲ್ಲಿ ಹೋಗಿ ಬಂದ ನಂತರ ರೈತರು ಅಲ್ಲಿಯ ತಂತ್ರಜ್ಞಾನಗಳನ್ನು ಇಲ್ಲಿ ಅಳವಡಿಸಿ ಕಾರ್ಯಾಗಾರದ ಮೂಲಕ ಉಳಿದ ರೈತರಿಗೂ ತಿಳಿಸುವ ಮೂಲಕ ನಾವು ಕೃಷಿಯಲ್ಲಿ ಹೆಚ್ಚಿನ ಸಾಧನೆ ಸಾಧ್ಯ.

Leave A Reply

Your email address will not be published.