ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳ ಮೇಲೆ ಹಲ್ಲೆ

Share the Article

ಇಲ್ಲೊಂದು ಕಡೆ ಸಾಧುಗಳಂತೆ ಉಡುಗೆ ತೊಟ್ಟಿದ್ದ ಮೂವರನ್ನು ಸ್ಥಳೀಯರು ಸೇರಿ ಮಕ್ಕಳ ಕಳ್ಳರೆಂದು ಭಾವಿಸಿ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ನಡೆದಿದೆ.ಛತ್ತೀಸ್ ಗಢ ರಾಜ್ಯದ ಲಾಯಿ ಪೊಲೀಸ್ ಠಾಣೆಯ ವ್ಯಾಪ್ತಿಯ ಖರೊಡಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ. ಹಲ್ಲೆಗೊಳಗಾದವರು ರಾಜಸ್ಥಾನ ಮೂಲದವರಾಗಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಸಾಧು ರೂಪದ ವೇಶವನ್ನು ಧರಿಸಿ ಅಲ್ಲಿನ ಸ್ಥಳೀಯ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದದ್ದನ್ನು ಶಂಕಿಸಿ ಸ್ಥಳೀಯರು ಏಕಾ ಏಕಿ ಬಂದು ಮೂವರಿಗೆ ಥಳಿಸಿದ್ದಾರೆ.

ಈ ಕುರಿತು ಘಟನೆಗೆ ಸಂಬಂಧಿಸಿ 30 ಮಂದಿಯನ್ನು ಈಗಾಗಲೇ ಪ್ರಶ್ನಿಸಲಾಗಿದೆ ಎಂದು ದುರ್ಗ್ ಜಿಲ್ಲೆಯ ಎಸ್ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.

Leave A Reply