ದೇವಸ್ಥಾನದೊಳಗೆ ಮುನ್ನೀ ಬದ್ನಾಮ್ ಹುಯಿ ಹಾಡಿಗೆ ಮೈ ಬಳುಕಿಸಿದ ಯುವತಿ | ಬಜರಂಗದಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ

Share the Article

ಕಷ್ಟಗಳನ್ನೆಲ್ಲಾ ಕಡಿಮೆ ಮಾಡಿ ನೆಮ್ಮದಿಯ ಬದುಕು ನನಗೆ ಕೊಡಿ ಎಂದು ಹೆಚ್ಚಿನವರು ಬೇಡೋಕೆ ಎಂದು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಇಲ್ಲೋರ್ವ ಯುವತಿ ದೇವಸ್ಥಾನದಲ್ಲಿ ಐಟಂ ಸಾಂಗ್‌ಗೆ ಮೈ ಬಳುಕಿಸಿ ಸಂಕಷ್ಟವನ್ನೇ ಮೈಮೇಲೆ ಎಳೆದುಕೊಂಡಿದ್ದಾಳೆ.

ಮಧ್ಯಪ್ರದೇಶದ (Madhya Pradesh) ಛತ್ತರ್‌ಪುರ ಜಿಲ್ಲೆಯಲ್ಲಿ ದೇವಸ್ಥಾನವೊಂದರ ಆವರಣದಲ್ಲಿ ಐಟಮ್ ಸಾಂಗ್‌ವೊಂದಕ್ಕೆ ಡ್ಯಾನ್ಸ್ ಮಾಡಿದ್ದ ಯುವತಿ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.

ನೇಹಾ ಎಂಬಾಕೆಯೇ ದೇವಸ್ಥಾನದಲ್ಲಿ ಮುನ್ನಿ ಬದ್ನಾಮ್ ಹುಯಿ ಎಂಬ ಹಾಡಿಗೆ ದೇವಸ್ಥಾನದ ಮೆಟ್ಟಿಲಿನಲ್ಲಿ ಸೊಂಟ ಬಳುಕಿಸಿದ್ದಾಳೆ. ನಂತರ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಆದರೆ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ

ಬಜರಂಗದಳದ ಕೆಲವು ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಜೊತೆಗೆ ದೇವಸ್ಥಾನದೊಳಗೆ ಈ ರೀತಿಯ ರೀಲ್ಸ್ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾಳೆ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಯುವತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.ಇಷ್ಟೇ ಅಲ್ಲ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿರುವ ಯುವತಿ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ. ಇತ್ತ ವಿವಾದ ಹೆಚ್ಚಾಗುತ್ತಿದ್ದಂತೆ ಯುವತಿ ವಿಡಿಯೋ ಡಿಲೀಟ್ ಮಾಡಿದ್ದಾಳೆ.

ಇತ್ತ ಯುವತಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಕ್ಷಮೆಯಾಚಿಸಿದ್ದಾಳೆ. ಅತ್ತ ಕಡೆ ಧಾರ್ಮಿಕ ಭಾವನೆಗಳಿಗೆ ಅಡ್ಡಿಯುಂಟಾಗಿದೆ ಎಂಬ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯುವತಿ ಕೂಡಲೇ ಆ ವೀಡಿಯೋ ಡಿಲೀಟ್ ಮಾಡಿ ಕ್ಷಮೆಯಾಚಿಸಿದ್ದಾಳೆ.

Leave A Reply