ಲೈಫ್ ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಒದ್ದಾಡುತ್ತಿದ್ದೀರಾ ? ಹಾಗಾದರೆ ಈ ಸುಲಭ ಟಿಪ್ಸ್ ಅನುಸರಿಸಿ

ಬಾಲ್ಯದಲ್ಲಿ ಇದ್ದ ಹುಡುಗಾಟ ಪ್ರವೃತ್ತಿ ಒಂದು ವಯಸ್ಸಿಗೆ ಬಂದಂತೆ  ಮೆಚ್ಯುರಿಟಿ ಸಹಜವಾಗಿಯೇ ಬಂದುಬಿಡುತ್ತದೆ.  ಮಾನಸಿಕವಾಗಿ ಪರಿಪಕ್ವತೆಯ ಪ್ರಕ್ರಿಯೆ ಯಿಂದಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮನುಷ್ಯರಲ್ಲಿ ಸಹಜವಾಗಿ ಬರುತ್ತದೆ. ಆದರೂ ಕೆಲವೊಬ್ಬರಿಗೆ  ಮಾನಸಿಕ ಪಕ್ವತೆ ಇರದೆ, ಹುಡುಗಾಟದಲ್ಲಿಯೇ ಜೀವನ ಕಳೆದುಬಿಡುತ್ತಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಮೆಚ್ಯುರಿಟಿ  ಇಲ್ಲದಿರುವುದು ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ  ಗಂಭೀರ ಸ್ವರೂಪದ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾದರೆ, ಪ್ರಬುದ್ಧತೆ ಅಳವಡಿಸಿ ಕೊಳ್ಳುವುದು ಹೇಗೆ? ಎಂಬ ಪ್ರಶ್ನೆ  ಹಲವರನ್ನು ಕಾಡುತ್ತಿರಬಹುದು.


Ad Widget

ಮತ್ತೊಬ್ಬರು ಹೇಳಿಕೊಟ್ಟ ಕೀಲಿ ಕೈ ಯಂತೆ ಹೇಳಿದಂತೆ ಅನುಸರಿಸುವುದನ್ನೂ  ಬಿಟ್ಟು ಅದರ ಬದಲಿಗೆ, ನಿಮ್ಮ ಸ್ವಂತ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವುದು  ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಸಾಮಾನ್ಯವಾಗಿ ಆಲೋಚನೆಗಳು ಮತ್ತು ಉತ್ತಮ ನಡವಳಿಕೆಯನ್ನು ರೂಢಿಸಿಕೊಂಡು, ಹೆಚ್ಚು ವಸ್ತುನಿಷ್ಠರಾಗಬಹುದು ಮತ್ತು ಉತ್ತಮ ನಿರ್ಧಾರ ಗಳನ್ನು ತೆಗೆದುಕೊಳ್ಳಬಹುದಾಗಿದೆ. ಸ್ವಯಂ ಅರಿವನ್ನು ಪಡೆದು ತಮ್ಮಲ್ಲಿರುವ ಲೋಪಗಳನ್ನು ತಿದ್ದಿಕೊಂಡು  ಇದರೊಂದಿಗೆ, ಹೊಸ ದೃಷ್ಟಿಕೋನವನ್ನು ಪಡೆಯಬಹುದು.

ಭಾವನೆಗಳ ಮೇಲೆ ಹಿಡಿತವಿರುವುದು ಅತಿ ಅವಶ್ಯ. ಭಾವನೆಗಳನ್ನು ಕಂಟ್ರೋಲ್ ಮಾಡುವುದು ಯಾವಾಗಲೂ ಸವಾಲಿನ ವಿಷಯ. ಆದರೆ ,ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾದರೆ, ಎಲ್ಲ ವಿಚಾರದಲ್ಲಿಯು ಕೂಡ ಸ್ವಯಂ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಕೆಲವೊಮ್ಮೆ ಭಾವನೆಗಳನ್ನು ತಾವೇ ಇಟ್ಟುಕೊಂಡು ಕೊರಗುವುದು ಅಸಹನೀಯ..ಹಾಗೆಂದು ಅವುಗಳನ್ನು ನಿರಂತರವಾಗಿ ಬೇರೆಯವರೊಂದಿಗೆ ವ್ಯಕ್ತಪಡಿಸುವುದು ಸಹ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಆದರೂ, ಭಾವನೆಗಳನ್ನು ನೀವು ವ್ಯಕ್ತಪಡಿಸದಿದ್ದಾಗ ಕೂಡ ತನ್ನ ಬಗ್ಗೆ ಯಾರೂ ಕಾಳಜಿ ವಹಿಸುವುದಿಲ್ಲ ಎಂಬ ರೀತಿಯ  ಭಾವನೆ ಉಂಟಾಗುತ್ತದೆ. ಇದರ ಪರಿಣಾಮವಾಗಿ  ನರ, ಖಿನ್ನತೆ ಮತ್ತು ಒತ್ತಡವನ್ನು ಅನುಭವಿಸುವ ಸಾಧ್ಯತೆ ದಟ್ಟವಾಗಿದೆ.

ದೈಹಿಕ ಮತ್ತು ಮಾನಸಿಕ ಆರೋಗ್ಯ  ಎರಡೂ ಯಶಸ್ವಿ ಮತ್ತು ಅರ್ಥಪೂರ್ಣ ಜೀವನದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉತ್ತಮ ಆರೋಗ್ಯವು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ. ಋಣಾತ್ಮಕ ಮನಸ್ಥಿತಿ ಅಥವಾ ಪರಿಸ್ಥಿತಿಯು ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗಬಹುದು. 
ನಕಾರಾತ್ಮಕ ಭಾವನೆಗಳು ತುಂಬಿದ್ದರೆ, ಅದರಿಂದ ಹೊರ ಬರಲು ಒಂದಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ. ನೀವು ಆನಂದಿಸುವ ಏನನ್ನಾದರೂ ಮಾಡಲು ಸ್ವಲ್ಪ ಸಮಯವನ್ನು ಮೀಸಲಿಟ್ಟು, ಮೃದುವಾದ ಸಂಗೀತ, ಕೇಳುವುದು ಇಲ್ಲವೇ, ಪರಿಸ್ಥಿತಿಯನ್ನು ವಿಶ್ಲೇಷಿಸಿಕೊಂಡು, ಋಣಾತ್ಮಕತೆಯನ್ನು ಎದುರಿಸಲು ಧನಾತ್ಮಕ ಮಾರ್ಗಗಳ ಆಯ್ಕೆ ಮಾಡಿಕೊಳ್ಳಬೇಕು. ಧ್ಯಾನ, ಯೋಗವನ್ನು ಅಭ್ಯಾಸ  ಮಾಡಿ, ನಕಾರಾತ್ಮಕ ಆಲೋಚನೆಗಳನ್ನು ಕಡಿಮೆ ಮಾಡಲು ಆಲೋಚನೆಗಳನ್ನು ಬದಲಾಯಿಸುವ ಉತ್ತಮ ಮಾರ್ಗವಾಗಿದೆ.

error: Content is protected !!
Scroll to Top
%d bloggers like this: