Covid Mask Fine : ಇನ್ಮುಂದೆ ಮಾಸ್ಕ್ ಹಾಕದಿದ್ದರೆ ಫೈನ್ ಇಲ್ಲ | ಸರಕಾರದಿಂದ ಮಹತ್ವದ ನಿರ್ಧಾರ

ಕಳೆದ ಮೂರು ವರ್ಷಗಳಲ್ಲಿ ಜನತೆ ಎಂದೂ ಕಂಡಿರದ ಮಹಾಮಾರಿಗೆ ನಲುಗಿ, ಲಾಕ್ ಡೌನ್, ಕ್ವಾರಂಟೈನ್ ಎಂಬ ನಿಯಮ ಜಾರಿಗೆ ಬಂದು ಮನೆಯಿಂದ ಹೊರಗೆ ಕಾಲಿಡಲು ಕೂಡ ಹೆದರುವ ಪರಿಸ್ಥಿತಿ ಜೊತೆಗೆ ಹೊರಗೆ ಕಾಲಿಟ್ಟರೆ, ಮಾಸ್ಕ್, ಸ್ಯಾನಿಟೈಜರ್ ಒಟ್ಟಿಗೆ ಒಯ್ಯವ ಸ್ಥಿತಿ ಎದುರಾಗಿ ಸಾಕಷ್ಟು ಸಾವು ನೋವು ಸಂಭವಿಸಿ ಬದುಕಿನ ಕರಾಳ ದಿನಗಳನ್ನು ಕಣ್ಣಾರೆ ಕಂಡಿದ್ದೇವೆ.

ಈ ಕೋವಿಡ್ ದೇಶ ವ್ಯಾಪಿಯಾಗಿ ಸಾವು ಬದುಕಿನ ಹೋರಾಟದ ಒದ್ದಾಟವನ್ನು ನಿಯಂತ್ರಿಸಲು ಸರಕಾರ ಲಸಿಕೆ ನೀಡುವ ಕ್ರಮ , 14ದಿನಗಳ ಕ್ವಾರಂಟೈನ್, ರೋಗ ಉಲ್ಬಣಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಿ ನೆರವಾಗಿ ವಿಶೇಷ ಗಮನ ಹರಿಸಿ, ಮನೆಯಿಂದ ಹೊರಗೆ ಕಾಲಿಟ್ಟಾಗ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಲಸಿಕೆ ನೀಡುವ ಕ್ರಮ ಜಾರಿಗೆ ತಂದು ಜನರ ಆರೋಗ್ಯದ ದೃಷ್ಟಿಯ ಕಡೆಗೆ ಹೆಚ್ಚಿನ ಗಮನ ವಹಿಸಿದೆ.
ಮಾಸ್ಕ್ ಕಡ್ಡಾಯಗೊಳಿಸಿ ಧರಿಸದವರಿಗೆ ದಂಡ ವಿಧಿಸಿ, ಆರೋಗ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

ಸತತ ಮೂರು ವರ್ಷಗಳ ಬಳಿಕ ಕೋವಿಡ್-19 ಪ್ರಕರಣಗಳು ಇಳಿಮುಖವಾಗಿರುವುದರಿಂದ ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ 500 ರೂಪಾಯಿ ದಂಡವನ್ನು ಹಿಂಪಡೆಯಲಿದೆ. ಇದರ ಕುರಿತಾಗಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಅಕ್ಟೋಬರ್ 5, ಬುಧವಾರ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸುವ ನಿರೀಕ್ಷೆಯಿದೆ.
ದಂಡವನ್ನು ಹಿಂಪಡೆಯುವ ನಿರ್ಧಾರವನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (DDMA) ಸಭೆಯಲ್ಲಿ ನಿರ್ಧಾರ ಕೈಗೊಂಡು, ಅಂತಿಮ ವರದಿ ಹೊರಡಿಸಲಿದೆ.

ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದುದರಿಂದ ಒಮ್ಮೆ ಮಾಸ್ಕ್ ಕಡ್ಡಾಯ ಮಾಡಿದ್ದನ್ನು ಹಿಂಪಡೆದ ಬಳಿಕ, ಮತ್ತೊಮ್ಮೆ, ಏಪ್ರಿಲ್ನಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸದಿದ್ದಕ್ಕಾಗಿ 500 ರೂಪಾಯಿ ದಂಡವನ್ನು ನಗರ ಅಧಿಕಾರಿಗಳು ವಿಧಿಸಲು ಆರಂಭಿಸಿದ್ದರು.
ಆದರೀಗ ಮಾಸ್ಕ್ ಕಡ್ಡಾಯ ಬಳಕೆಗೆ ಬ್ರೇಕ್ ನೀಡಿ, ದಂಡ ವಿಧಿಸುವ ಯೋಜನೆಯನ್ನು ಕೈ ಬಿಡಲು ತೀರ್ಮಾನ ನಡೆಯುತ್ತಿದೆ. ಆದರೂ ಕೇಂದ್ರ ಆರೋಗ್ಯ ಸಚಿವಾಲಯವು ದೇಶಾದ್ಯಂತ ಹಬ್ಬಗಳು ಮತ್ತು ಸಾಮೂಹಿಕ ಜನ ಸೇರುವಿಕೆಯಿಂದ ಮತ್ತೆ ಕೋವಿಡ್ ಉಲ್ಬಣಗೊಳ್ಳಬಹುದು ಎಂಬ ದೃಷ್ಟಿಯಿಂದ ಎಚ್ಚರಿಕಾ ಕ್ರಮಗಳನ್ನು ಅನುಸರಿಸಲು ತಿಳಿಸಿದೆ.
ಈ ನಡುವೆ, ಎನ್​ಡಿಎಂಎ ಸದಸ್ಯರಾದ ಡಾ ರಾಜೇಂದ್ರ ಸಿಂಗ್ ಅವರು ಮುಂಬರುವ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 15 ರವರೆಗೆ ಮಾಸ್ಕ್​​ಗಳನ್ನು ಧರಿಸುವುದನ್ನು ಮುಂದುವರಿಸಲು ಸಲಹೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ದೆಹಲಿಯಲ್ಲಿ ಸದ್ಯ ಮಾಸ್ಕ್​ಗಳ ಮೇಲಿನ ದಂಡವನ್ನು ಹಿಂತೆಗೆದುಕೊಳ್ಳಲಾಗಿದ್ದರೂ ಕೂಡ ಜನತೆ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಿಗೆ ತೆರಳುವಾಗ ಹಾಗೂ ಉಳಿದ ಸಂದರ್ಭದಲ್ಲೂ ಕೂಡ ಜಾಗ್ರತೆ ವಹಿಸುವುದು ಒಳ್ಳೆಯದು.

Leave A Reply

Your email address will not be published.