ಬರಲಿದೆ ಅಗ್ಗದ ಬೆಲೆಗೆ ಜಿಯೊ ಲ್ಯಾಪ್‌ಟಾಪ್ | ಎಷ್ಟು ಬೆಲೆ ಗೊತ್ತೇ?

ಯಾವಾಗಾಲೂ ತನ್ನ ಉನ್ನತ ತಂತ್ರಜ್ಞಾನ ಹಾಗೂ ಹಲವು ವಿಧವಿಧವಾದ ಆಫರ್ ಗಳಿಂದಲೇ ಮನ ಸೆಳೆಯುವ ಜಿಯೋ ಸಂಸ್ಥೆ ಈಗ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ, ರಿಲಯನ್ಸ್ ಜಿಯೋ ಕಂಪನಿಯು ‘ಜಿಯೊಬುಕ್’ ಎಂಬ ಹೆಸರಿನ ಲ್ಯಾಪ್ ಟಾಪ್ ಬಿಡುಗಡೆ ಮಾಡಲಿದೆ. ಅದು ಕೂಡಾ ಬರೀ 15 ಸಾವಿರಕ್ಕೆ ಇದು ಬಿಡುಗಡೆ ಮಾಡಲಿದೆ. ಅಷ್ಟು ಮಾತ್ರವಲ್ಲ ಇದರಲ್ಲಿ 4ಜಿ ಸಿಮ್ ಕೂಡ ಇರಲಿದೆ.

ಜಿಯೊ ಒಎಸ್ ಕಾರ್ಯಾಚರಣೆ ವ್ಯವಸ್ಥೆ ಇದರಲ್ಲಿ ಇರಲಿದ್ದು, ಜಿಯೊ ಸ್ಟೋರ್‌ನಿಂದ ಆಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಲ್ಯಾಪ್‌ಟಾಪ್ ತಯಾರಿಕೆಗೆ ಜಿಯೋ ಕಂಪನಿಯು ಕ್ವಾಲ್ಕಾಮ್ ಮತ್ತು ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಈ ಲ್ಯಾಪ್‌ಟಾಪ್ ಸರ್ಕಾರಿ ಸಂಸ್ಥೆಗಳಿಗೆ ಮತ್ತು ಶಾಲೆಗಳಿಗೆ ಈ ತಿಂಗಳಿನಿಂದಲೇ ಲಭ್ಯವಾಗಲಿದೆ. ಇತರರಿಗೆ ಇನ್ನು ಮೂರು ತಿಂಗಳಲ್ಲಿ ಲಭ್ಯವಾಗಲಿದೆ ಶೀಘ್ರದಲ್ಲೇ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ 5ಜಿ ಆವೃತ್ತಿಯೂ ಸಿಗಲಿದೆ.

ಅಂದಹಾಗೇ, ಜಿಯೊಬುಕ್ ತಯಾರಿಕೆ ಭಾರತದಲ್ಲಿಯೇ ಆಗಲಿದೆ. ‘ಈ ಲ್ಯಾಪ್‌ಟಾಪ್ ಬಿಡುಗಡೆ ಆದ ನಂತರದಲ್ಲಿ ದೇಶದ ಲ್ಯಾಪ್‌ಟಾಪ್ ಮಾರುಕಟ್ಟೆಯು ಶೇಕಡ 15ರಷ್ಟು ವಿಸ್ತರಿಸಬಹುದು’ ಎಂದು ಕೌಂಟರ್‌ಪಾಯಿಂಟ್ ಸಂಸ್ಥೆಯ ವಿಶ್ಲೇಷಕ ತರುಣ್ ಪಾಠಕ್ ಹೇಳಿದ್ದಾರೆ.

Leave A Reply

Your email address will not be published.