Dry Cough : ಒಣಕೆಮ್ಮಿಗೆ ಇಲ್ಲಿದೆ ರಾಮಬಾಣ!!!
ಬದಲಾಗುತ್ತಿರುವ ಹವಾಮಾನದಿಂದ ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಲವರಿಗೆ ಶೀತ ಮತ್ತು ಜ್ವರ ಗುಣವಾದರೂ ಕೆಮ್ಮು ಕಡಿಮೆಯಾಗಲು ಹೆಚ್ಚು ಸಮಯ ಬೇಕಾಗುತ್ತದೆ.
ಗಂಟಲಿನ ಕಿರಿಕಿರಿ, ಮಾಲಿನ್ಯ, ಪ್ರೌಢಾವಸ್ಥೆಯ ವೇಳೆ ಹಾರ್ಮೋನ್ ಅಸಮತೋಲನ, ಶ್ವಾಸಕೋಶದ ಸಮಸ್ಯೆ ಮತ್ತು ಉಸಿರಾಟದ ಸೋಂಕಿನಿಂದಾಗಿ ಒಣ ಕೆಮ್ಮಿನ ಸಮಸ್ಯೆಯು ಕಂಡುಬರುತ್ತದೆ. ರೋಗಾಣುಗಳು, ಹಾನಿಕಾರವಾದ ಕೊಳೆ, ಕೆಟ್ಟವಾಯು, ದೂಳು ಇತ್ಯಾದಿ ಬಾಹ್ಯ ಸೂಕ್ಷ್ಮ ವಸ್ತುಗಳು ಗಂಟಲಿಗೆ ಸೇರಿಕೊಂಡಾಗ ಕೆರೆತ ಉಂಟಾಗುತ್ತದೆ.
ಕಿರುನಾಲಗೆ ಮತ್ತು ಆಡಿನಾಯ್ಡ್ ಗ್ರಂಥಿಗಳ ಊತದಿಂದಲೂ ತೀವ್ರವಾದ ಶೀತದಿಂದಲೂ ಕೆಮ್ಮು ಕೆರಳುತ್ತದೆ. ಒಟ್ಟಾರೆಯಾಗಿ ಕೆಮ್ಮಿನಿಂದ ರಾತ್ರಿ ವೇಳೆಯಲ್ಲಿ ಮಲಗಲು ಪ್ರಯಾಸ ಪಡುವವರು ಸಾಕಷ್ಟು ಮಂದಿ ಇದ್ದಾರೆ.
ಮನೆಯಲ್ಲೆ ಸರಳ ಮನೆ ಮದ್ದು ಬಳಸಿ ಕೆಮ್ಮಿಗೆ ಪರಿಹಾರ ಪಡೆಯಬಹುದು.
ವಯಸ್ಕರಲ್ಲಿ ಕೆಮ್ಮು ಹೆಚ್ಚು ಕಾಣಿಸಿಕೊಂಡರೆ ಮೆಣಸು ಉತ್ತಮ ಔಷಧವಾಗಿದ್ದು, ತಾಪನ ಗುಣಗಳನ್ನು ಹೊಂದಿದ್ದು, ಕೆಮ್ಮು ಹೆಚ್ಚಾಗುವುದನ್ನು ತಡೆಯುತ್ತದೆ. ಕಾಳುಮೆಣಸಿನ ಪುಡಿಯನ್ನು ದೇಸಿ ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ನಿಯಮಿತವಾಗಿ ದಿನಕ್ಕೆ ಎರಡು ಬಾರಿ ಹೀಗೆ ಮಾಡಿದ್ದಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು.
ಒಂದು ಟೇಬಲ್ ಸ್ಪೂನ್ ಕಾಳುಮೆಣಸನ್ನು ಮಿಕ್ಸಿಯಲ್ಲಿ ಪುಡಿ ಮಾಡಿ, ಅದಕ್ಕೆ 15 ಗ್ರಾಂ ಕಲ್ಲುಸಕ್ಕರೆಯನ್ನು ಸೇರಿಸಿ ಪುಡಿ ಮಾಡಿಕೊಂಡು ಇದನ್ನು ಸಣ್ಣ ಉರಿಯಲ್ಲಿ ಒಂದು ಕಡಾಯಿಗೆ ಹಾಕಿ ಎರಡು ದೊಡ್ಡ ಲಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಮೂರು ಚೆನ್ನಾಗಿ ಮಿಶ್ರಣವಾದಾಗ ಒಂದು ರೀತಿ ಅಂಟಿನ ರೂಪದ ಅಕ್ರೋಟವಾಗುತ್ತದೆ. ಬಿಸಿ ಆರಿದ ಮೇಲೆ ತಿಂದರೆ ಒಣ ಕೆಮ್ಮು ಮಾಯವಾಗುತ್ತದೆ.
ಕಾಳು ಮೆಣಸಿನ ಪುಡಿ ಹಾಗೂ ಕಲ್ಲುಸಕ್ಕರೆಯನ್ನು ತಿನ್ನುವುದರಿಂದಲೂ ಕೆಮ್ಮು ಗುಣವಾಗುತ್ತದೆ. ಮೂಗಿನಿಂದ ರಕ್ತ ಸೋರುತ್ತಿದ್ದರೆ ಕಲ್ಲುಸಕ್ಕರೆಯನ್ನು ಮೂಗಿನ ಬಳಿ ಹಿಡಿದು ವಾಸನೆ ತೆಗೆದುಕೊಂಡಾಗ ಕಡಿಮೆಯಾಗುತ್ತದೆ. ಕರಿಮೆಣಸಿನ ಹುಡಿ ಮತ್ತು ಜೇನುತುಪ್ಪದ ಜೊತೆ ಮಿಶ್ರಣ ಮಾಡಿ, ಎರಡು ಚಮಚ ನೀರಿನೊಂದಿಗೆ ಇದನ್ನು ಮಿಶ್ರಣ ಮಾಡಿಕೊಂಡು ದಿನದಲ್ಲಿ ಎರಡು ಸಲ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.
ಮಲಗುವ ಸಮಯದಲ್ಲಿ 2 ಟೀ ಚಮಚ ಜೇನು ತುಪ್ಪವನ್ನು ಸ್ವಲ್ಪ ಬಿಸಿ ಮಾಡಿಕೊಂಡು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಇಲ್ಲವೆ ಸ್ವಲ್ಪ ಉಗುರು ಬೆಚ್ಚಗಿನ ನೀರಿಗೆ 2 ಟೀ ಚಮಚ ಜೇನು ತುಪ್ಪ ಮಿಶ್ರಣ ಮಾಡಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬಹುದು ಇದು ಒಣ ಕೆಮ್ಮು ಸಮಸ್ಯೆಯನ್ನು ಬಹಳ ಸುಲಭವಾಗಿ ನಿವಾರಣೆ ಮಾಡುತ್ತದೆ.
ಒಂದು ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಉರಿಯಲ್ಲಿ ಇಡಿ. ನೀರು ಸ್ವಲ್ಪ ಬಿಸಿಯಾದಾಗ, ಒಂದು ಟೀಚಮಚ ನಿಂಬೆ ರಸ, ಟೀಚಮಚ ತುರಿದ ಶುಂಠಿ, ಜೇನುತುಪ್ಪದ ಒಂದು ಚಮಚ, ಒಂದು ಪಿಂಚ್ ಕರಿಮೆಣಸು, ಒಂದು ಚಮಚ ಆಪಲ್ ಸೈಡರ್ ವಿನೆಗರ್,ಒಂದು ಕಪ್ ನೀರು ಮೇಲೆ ಹೇಳಿದ ಪದಾರ್ಥಗಳನ್ನು ಒಂದೊಂದಾಗಿ ಸೇರಿಸಿ, ಈ ಮಿಶ್ರಣವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ತಣ್ಣಗಾಗಿಸಿ ಮತ್ತು ಫಿಲ್ಟರ್ ಮಾಡಿ. ಗಾಳಿಯಾಡದ ಮುಚ್ಚಳವನ್ನು ಹೊಂದಿರುವ ಪಾತ್ರೆಯಲ್ಲಿ ಇರಿಸಬೇಕು.ಇದನ್ನು ದಿನಕ್ಕೆರಡು ಬಾರಿ ಸೇವನೆ ಮಾಡಬಹುದು.
ಅರ್ಧ ಟೀ ಸ್ಪೂನ್ ಕಪ್ಪು ಜೀರಿಗೆ ಮತ್ತು ಸ್ವಲ್ಪ ಕಾಳುಮೆಣಸು ಒಂದು ಚಿಟಿಕೆ ಉಪ್ಪಿನೊಂದಿಗೆ ಜಗಿದು ತಿಂದರೆ ಕೆಮ್ಮು ಕಡಿಮೆಯಾಗುತ್ತದೆ. ದಾಳಿಂಬೆ ಕಾಳನ್ನು ಹಿಸುಕಿ ರಸ ತೆಗೆದುಕೊಂಡು ಈ ರಸಕ್ಕೆ ಶುಂಠಿ ರಸ ಅಥವಾ ಕಾಳುಮೆಣಸಿನ ಪುಡಿ ಹಾಕಿ ಸೇವಿಸಿದರೆ ತ್ವರಿತ ಫಲಿತಾಂಶ ಪಡೆಯಬಹುದು. ಮನೆಯಲ್ಲೇ ಮನೆ ಮದ್ದು ಮಾಡಿ ಕೆಮ್ಮಿಗೆ ಪರಿಹಾರ ಪಡೆಯಬಹುದು.