ರಾಮಭಕ್ತರೇ ಗಮನಿಸಿ | ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಇನ್ನೊಂದು ಮಾಸ್ಟರ್ ಪ್ಲಾನ್ | ಏನದು ?
ಹಿಂದೂಗಳ ಪವಿತ್ರ ಸ್ಥಾನ ಎಂದೇ ಕರೆಯಲ್ಪಡುವ ಭವ್ಯವಾದ ರಾಮಮಂದಿರ ಶೀಘ್ರದಲ್ಲಿ ನಿರ್ಮಾಣವಾಗಲಿದೆ. ಆ ಕುರಿತು ಕಾಮಗಾರಿಯೂ ಆರಂಭಗೊಂಡಿದೆ. ಇದರ ಜೊತೆ ಜೊತೆಗೆ ಪುಣ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮತ್ತೊಂದು ಮಾಸ್ಟರ್ ಪ್ಲಾನ್ ತಯಾರಿಸಿಕೊಂಡಿದೆ.ಮಾಸ್ಟರ್ ಪ್ಲಾನ್ ಅಂದರೆ ಟ್ರಸ್ಟ್ ಸದಸ್ಯರೊಬ್ಬರ ಪ್ರಕಾರ ಭವ್ಯವಾದ ರಾಮಮಂದಿರ ನಿರ್ಮಾಣಗೊಂಡ ಬಳಿಕ ಉಳಿಯುವ ಜಾಗದಲ್ಲಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ನಕಾಶೆ ಸಿದ್ಧಪಡಿಸಲಾಗಿದೆ. ಅಂದರೆ ಅದೇ ಜಾಗದಲ್ಲಿ ರಾಮಾಯಣ ಕಾಲದ ಋಷಿಗಳ ದೇವಸ್ಥಾನವೂ ಕೂಡ ನಿರ್ಮಾಣಗೊಳ್ಳಲಿದೆ. ಈ ಯೋಜನಾ ಮನವಿಯ ಅನುಮೋದನೆಯು ಕೊನೆಯ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.ಪ್ರಸ್ತುತ ಸಿದ್ದಪಡಿಸಿರುವ ಸದ್ಯ ಮಾಸ್ಟರ್ ಪ್ಲಾನ್ ಪ್ರಕಾರ ಋಷಿವರ್ಯರಾದ ವಾಲ್ಮೀಕಿ, ವಶಿಷ್ಠ, ವಿಶ್ವಾಮಿತ್ರ, ಅಗಸ್ತ್ರ, ಮಾತಾ ಶಬರಿ ಮುಂತಾದವರಿಗೂ ದೇವಾಲಯ ನಿರ್ಮಾಣಗೊಳ್ಳಲಿದೆ. ಇನ್ನುಳಿದ ಸ್ಥಳಗಳಲ್ಲಿ ಯಾತ್ರಿಗಳ ಸೌಲಭ್ಯಕ್ಕಾಗಿ ವಿಶ್ರಾಂತಿ ಗ್ರಹ ನಿರ್ಮಾಣಗಳು ಮಾಡುವುದಾಗಿ ಮತ್ತು ಯಾಗ ಮಂಟಪ, ಅನುಷ್ಠಾನ ಮಂಟಪ, ಸಂತ ನಿವಾಸ, ವಸ್ತುಸಂಗ್ರಹಾಲಯ, ಸಂಶೋಧನಾ ಕೇಂದ್ರ, ಗ್ರಂಥಾಲಯಗಳ ನಿರ್ಮಾಣಕ್ಕೂ ಯೋಜನೆ ಹಾಕಿಕೊಳ್ಳಲಾಗಿದೆ. ಸದ್ಯದಲ್ಲಿ ಅಂದರೆ 2023ರ ಡಿಸೆಂಬರ್‌ನಲ್ಲಿ ಮಂದಿರವನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವ ಗುರಿ ಇರಿಸಲಾಗಿದ್ದು ಜನತೆಗೆ ಭರವಸೆ ನೀಡಲಾಗಿದೆ ಎಂದು ತಿಳಿಸಲಾಗಿದೆ. ಮತ್ತು ಹಿಂದೂಗಳಿಗೆ ಇದೊಂದು ಖುಷಿಯ ವಿಚಾರವಾಗಿದೆ.