WhatsApp: ವಾಟ್ಸ್ಆ್ಯಪ್‌ನಲ್ಲಿ ಲೈವ್ ಲೊಕೇಶನ್ ಶೇರ್ ಹೇಗೆ ಮಾಡುವುದು? ಸುಲಭ ವಿಧಾನ ಇಲ್ಲಿದೆ
ಇವತ್ತಿನ ಆಧುನಿಕ ಯುಗದಲ್ಲಿ ಒಬ್ಬರಿಗೆ ವಿಳಾಸವನ್ನು ತಿಳಿಸುವುದು ಬಹಳಷ್ಟು ಸುಲಭ. ಅವರು ತಲುಪಬೇಕಿರುವ ವಿಳಾಸವನ್ನು ಗೂಗಲ್ ಲೊಕೇಶನ್ (Google Location) ಕಳುಹಿಸುವ ಮೂಲಕ ಕಳುಹಿಸಿದರೆ ಸಾಕು. ಸಾಮಾನ್ಯವಾಗಿ ಎಲ್ಲರೂ ಈಗ ಲೊಕೇಶನ್ ಶೇರ್ ಮಾಡಲು ವಾಟ್ಸ್ಆ್ಯಪ್ (WhatsApp) ಬಳಸುತ್ತಾರೆ.
ವಾಟ್ಸಪ್ ನಲ್ಲಿರೋ ಲೊಕೇಶನ್ ಶೇರ್ ಮತ್ತು ಲೈವ್ ಲೊಕೇಶನ್ ಶೇರ್ ಇತ್ತೀಚೆಗೆ ಬಹಳ ಬಳಕೆ ಮಾಡಲಾಗುತ್ತದೆ. ಆದರೂ ಕೆಲವರಿಗೆ ವಾಟ್ಸ್ ಆ್ಯಪ್ ನಲ್ಲಿ ಲೊಕೇಶನ್ ಶೇರ್ ಮಾಡುವ ಬಗ್ಗೆ ಗೊಂದಲವಿದೆ.
ಸಾಮಾನ್ಯವಾಗಿ ವಾಟ್ಸ್ಆ್ಯಪ್‌ನಲ್ಲಿ ಲೊಕೇಶನ್ ಶೇರ್ ಅನ್ನು ಎರಡು ರೂಪಗಳಲ್ಲಿ ಮಾಡಬಹುದು. ಒಂದು ಕರೆಂಟ್ ಲೊಕೇಶನ್ ಶೇರ್ ಆಯ್ಕೆ. ಇದರಲ್ಲಿ ಬಳಕೆದಾರರು ತಮ್ಮ ಪ್ರಸ್ತುತ ಸ್ಥಳವನ್ನು ವೈಯಕ್ತಿಕ ಸಂಪರ್ಕದವರೊಂದಿಗೆ ಅಥವಾ ಒಂದು ಬಾರಿ ಗುಂಪಿನಲ್ಲಿ ಹಂಚಿಕೊಳ್ಳಬಹುದು.
ಆದರೆ ಇನ್ನೊಂದು ಲೈವ್ ಸ್ಥಳ ಶೇರ್ ಆಯ್ಕೆ. ಇಲ್ಲಿ ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದು.
ವಾಟ್ಸ್‌ಆ್ಯಪ್‌ನಲ್ಲಿ ಲೊಕೇಶನ್ ಶೇರ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.
ಪರ್ಸನಲ್ ಚಾಟ್ ತೆರೆಯಿರಿ ಮತ್ತು ಫೈಲ್ ಗಳನ್ನು ಆ್ಯಡ್ ಮಾಡಲಿರುವ ಐಕಾನ್ ಟ್ಯಾಪ್ ಮಾಡಿ.
ಗುಂಪಿನಲ್ಲಿ ಒಂದು ಬಾರಿ ಹಂಚಿಕೊಳ್ಳಬಹುದು.
ಆದರೆ ಇನ್ನೊಂದು ಲೈವ್ ಸ್ಥಳ ಹಂಚಿಕೆ ಆಯ್ಕೆಯಾಗಿದ್ದು, ಬಳಕೆದಾರರು ತಮ್ಮ ಸ್ಥಳವನ್ನು ಪೂರ್ವಭಾವಿಯಾಗಿ ನಿರಂತರವಾಗಿ ಹಂಚಿಕೊಳ್ಳಬಹುದಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಲೊಕೇಶನ್ ಶೇರ್ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿ ನೋಡಿ.
ಪರ್ಸನಲ್ ಚಾಟ್ ತೆರೆಯಿರಿ ಮತ್ತು ಫೈಲ್ ಗಳನ್ನು ಆ್ಯಡ್ ಮಾಡಲಿರುವ ಐಕಾನ್ ಟ್ಯಾಪ್ ಮಾಡಿ.
ಟ್ಯಾಪ್ ಮಾಡಿದ ನಂತರ ಕೆಲವು ಆಯ್ಕೆಗಳನ್ನು ಕಾಣಿಸುತ್ತದೆ ಮತ್ತು ಅಲ್ಲಿ ಲೊಕೇಶನ್ ಟ್ಯಾಪ್ ಮಾಡಿ.
ಈಗ, ನಿಮ್ಮ ಕರೆಂಟ್ ಲೊಕೇಶನ್ ಸೆಂಡ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಲೈವ್ ಲೊಕೇಶನ್ ಶೇರ್ ಮಾಡುವ ರೀತಿ :
• ಪರ್ಸನಲ್ ಚಾಟ್ ತೆರೆಯಿರಿ ಮತ್ತು ಫೈಲ್ ಗಳನ್ನು ಆ್ಯಡ್ ಮಾಡಲಿರುವ ಐಕಾನ್ ಟ್ಯಾಪ್ ಮಾಡಿ.
ಟ್ಯಾಪ್ ಮಾಡಿದ ನಂತರ ಕೆಲವು ಆಯ್ಕೆಗಳನ್ನು ಕಾಣಿಸುತ್ತದೆ ಮತ್ತು ಅಲ್ಲಿ ಲೊಕೇಶನ್ ಟ್ಯಾಪ್ ಮಾಡಿ.
ಈಗ, ಶೇರ್ ಲೈವ್ ಲೊಕೇಶನ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಸಮಯದ ಚೌಕಟ್ಟನ್ನು ಆರಿಸಿ: 15 ನಿಮಿಷಗಳು, 1 ಗಂಟೆ ಅಥವಾ 8 ಗಂಟೆಗಳು,
ಶೀರ್ಷಿಕೆ ಸೇರಿಸಿ ಮತ್ತು ಸೆಂಡ್ ಬಟನ್ ಟ್ಯಾಪ್ ಮಾಡಿ.