ರೈತ ಸಮುದಾಯಕ್ಕೆ ಗುಡ್ ನ್ಯೂಸ್ | ನಿಮ್ಮ ಮುಂದೆ ಬರಲಿದೆ ಭೂಮಿ ಸರ್ವೆ ಮಾಡುವ ಸುಲಭ ಪರಿಹಾರ !!!

ದೇಶದ ಬೆನ್ನೆಲುಬು ಆಗಿರುವ ರೈತರಿಗೆ ರಾಜ್ಯ ಸರ್ಕಾರವು ಅವರ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ರೀತಿಯ ಯೋಜನೆಗಳು ಹಾಗೂ ಹೊಸ ಹೊಸ ರೀತಿಯ ಅಪ್ಲಿಕೇಶನ್ ಗಳನ್ನು ಉಪಯೋಗಿಸಿ ತಮ್ಮ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದೆ. ಅಂತಹ ಹಲವಾರು ಪ್ರಯತ್ನಗಳಲ್ಲಿ ಈ ಸ್ಕೆಚ್ ಕೂಡಾ ಒಂದು. ಇದರ ಪ್ರಕಾರ ಜಮೀನಿನ ಸ್ಕೆಚ್ ಅಥವಾ ನಕಾಶೆಯನ್ನು ತಾವೇ ರೂಪಿಸಲು ಹಾಗೂ ನೋಡಿ ತಿಳಿದುಕೊಳ್ಳಲು ಸುಲಭವಾಗುವಂತೆ ಹೊಸ ಅಪ್ಲಿಕೇಶನ್ ಕಂಡು ಹಿಡಿಯಲು ಸರಕಾರ ಮುಂದಾಗಿದೆ.ಸಚಿವರಾದ ಆರ್ ಅಶೋಕ್ ರವರು ಕಂದಾಯ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಸ್ವಾವಲಂಬಿ ಆ್ಯಪ್ ಬಳಸಿ ಖಾಸಗಿ ಜಮೀನುಗಳನ್ನು ನಾಗರಿಕರೇ ಸರ್ವೆ ಮಾಡಿ ಸ್ಕೆಚ್ ಹಾಕಬಹುದು. ಏಕ, ಬಹು ಮತ್ತು ಜಂಟಿ ಮಾಲೀಕತ್ವದಲ್ಲಿರುವ ಜಮೀನುಗಳಿಗೆ ಸ್ವಯಂ-ಸರ್ವೇ ಸೌಲಭ್ಯ ದೊರೆಯುತ್ತದೆ. ಕರ್ನಾಟಕದಲ್ಲಿ ಸುಮಾರು 2.5 ಕೋಟಿ ಭೂ ಹಿಡುವಳಿ ಅಥವಾ ನಿವೇಶನಗಳನ್ನು ಹೊಂದಿದೆ. ಅಂದರೆ ಒಂದು ಭೂಮಿಯು ಒಂದಕ್ಕಿಂತ ಹೆಚ್ಚಿನ ಮಾಲೀಕರನ್ನು ಹೊಂದಿರುವಾಗ ಹಾಗೂ ಆ ಜಮೀನಿನ ಗಡಿಗಳನ್ನು ನಿರ್ಧರಿಸುವ ಸಮಯದಲ್ಲಿ ಸಮೀಕ್ಷೆಯು ಅಗತ್ಯವಾಗುತ್ತದೆ, ಅಂತಹ ಸಮಯದಲ್ಲಿ ನಾಗರಿಕರು ಹಲವಾರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಾಗೂ ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಈ ಹೊಸ ಆಪ್ ಅನ್ನು ಸರ್ಕಾರವು ನಾಗರಿಕರ ಉಪಯೋಗಕ್ಕಾಗಿ ಮುಂಬರುವ ದಿನಗಳಲ್ಲಿ ಬಿಡುಗಡೆ ಮಾಡುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮೂರನೇ ಹಂತದ ಬೆಳೆ ಪರಿಹಾರದ ಹಣ ಜಮಾಭೂ ಸಮೀಕ್ಷೆಯ ವಿಧಗಳು ನಾಗರಿಕರಿಗೆ ಭೂಮಿಯ ಸಮೀಕ್ಷೆ ಮಾಡಲು ಸಾಮಾನ್ಯವಾಗಿ ನಾಲ್ಕು ವಿಧದ ಸಮೀಕ್ಷೆಗಳು ಅಗತ್ಯವಾಗಿವೆ. ಅವುಗಳೆಂದರೆ 11E ಸ್ಕೆಚ್ ಸಮೀಕ್ಷೆ, ಈ ಸಮೀಕ್ಷೆಯು ಯಾವುದೇ ವ್ಯಕ್ತಿಯು ತನ್ನ ಭೂಮಿಯಭೂಮಿಯ ಒಂದು ಭಾಗವನ್ನು ಮಾತ್ರ ಮಾರಾಟ ಮಾಡಬೇಕಾದಾಗ ಈ ಸಮೀಕ್ಷೆಯನ್ನು ಮಾಡಬೇಕಾಗುತ್ತದೆ. ಎರಡನೆಯ ವಿಧದ ಸಮೀಕ್ಷೆ ತತ್ಕಾಲ್ ಫೋಡಿ, ಇದು ಭೂಮಿಯನ್ನು ಭಾಗಗಳನ್ನಾಗಿ ವಿಭಜಿಸುವ ಸಮೀಕ್ಷೆಯಾಗಿದೆ. ಪೂರ್ವ-ಪರಿವರ್ತನೆಯ ರೇಖಾಚಿತ್ರ, ಅಂದರೆ ಕೃಷಿ ಭೂಮಿಯ ಒಂದು ಭಾಗವನ್ನು ಕೃಷಿಯೇತರ ಬಳಕೆಗಾಗಿ ಪರಿವರ್ತಿಸಬೇಕಾದಾಗ ಈ ಸಮೀಕ್ಷೆಯನ್ನು ಮಾಡಲಾಗುತ್ತದೆ. ಮತ್ತು ವಿಭಜನೆ ಪತ್ರ, ಕೃಷಿ ಭೂಮಿಯ ಒಂದು ಭಾಗದಲ್ಲಿ ಒಬ್ಬರ ಕಾನೂನು ಹಕ್ಕನ್ನು ತೋರಿಸಲು ಸ್ಕೆಚ್ ಅನ್ನು ಸಿದ್ಧಪಡಿಸಲಾಗಿದೆ. ಪ್ರಸ್ತುತ ನಾಗರಿಕರು ಯಾವುದೇ ರೀತಿಯ ಜಮೀನಿನ ಸರ್ವೆ ಅಥವಾ ಸಮೀಕ್ಷೆ ಮಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಹಾಗೂ ಬಹಳ ಸಮಸ್ಯೆಯನ್ನು ಉಂಟು ಮಾಡುತ್ತಿದೆ ಈ ಸಮಸ್ಯೆಗಳಿಗೆ ಪ್ರಮುಖ ಕಾರಣಗಳು ಸರ್ವೇಯರ್‌ಗಳ ಸಂಖ್ಯೆ ಸೀಮಿತವಾಗಿರುವುದು.ಭೂಮಿ ಸಮೀಕ್ಷೆ ಬಗ್ಗೆ ಮಾತನಾಡಿದ ಆರ್ ಅಶೋಕ್ ಪ್ರತಿ ತಿಂಗಳು ನಾವು ಒಂದು ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಅಲ್ಲದೆ, ಈಗಾಗಲೇ ವಿವಿಧ ಹಂತಗಳಲ್ಲಿ ಕೆಲವು ಆರು ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಇದು ನಾಗರಿಕರು ಹಲವಾರು ತಿಂಗಳುಗಳು ಹಾಗೂ ಕೆಲವು ಸಂದರ್ಭಗಳಲ್ಲಿ ವರ್ಷಗಳವರೆಗೆ ಕಾಯುವಂತೆ ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಪರಿಹರಿಸಲು, ನಾವು ನಾಗರಿಕರಿಗೆ ತಮ್ಮದೇ ಆದ ರೇಖಾಚಿತ್ರಗಳನ್ನು ಸಿದ್ಧಪಡಿಸುವ ವ್ಯವಸ್ಥೆಯನ್ನು ರೂಪಿಸಿದ್ದೇವೆ. ಆ ವ್ಯವಸ್ಥೆಯು ಮುಂಬರುವ ದಿನಗಳಲ್ಲಿ ಜಾರಿಗೆ ಬರುವುದು ಎಂದು ಕಂದಾಯ ಸಚಿವರು ಹೇಳಿದ್ದಾರೆ.ಕಂದಾಯ ಸಚಿವರಾದ ಆರ್ ಅಶೋಕ್ ರವರ ಮಾತಿನಂತೆ ಹೊಸ ಅಪ್ಲಿಕೇಶನ್ ನಲ್ಲಿ ತಮ್ಮ ಜಮೀನಿನ ನಕ್ಷೆಯನ್ನು ತಾವೇ ರಚಿಸಿಕೊಳ್ಳುವಂತಹ ಆಪ್ಪನ್ ಅನ್ನು ನಾಗರಿಕರಿಗೆ ನೀಡುವುದರಿಂದ ನಾಗರಿಕರಿಗೆ ಹಲವಾರು ರೀತಿಯ ಉಪಯೋಗಗಳಾಗುತ್ತವೆ ಹಾಗಾಗಿ ಈ ಅಪ್ಲಿಕೇಶನ್ ಅನ್ನು ಅತ್ಯಂತ ತ್ವರಿತ ಗತಿಯಲ್ಲಿ ಸಿದ್ಧಪಡಿಸಿ ನಾಗರಿಕರ ಉಪಯೋಗಕ್ಕಾಗಿ ಬಿಡುಗಡೆ ಮಾಡುವುದು ಉತ್ತಮ ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ. ಅತೀ ಶೀಘ್ರದಲ್ಲಿ ಈ ಅಪ್ಲಿಕೇಶನ್ ಅನ್ನು ರೈತರಿಗೆ ಹಸ್ತಾಂತರ ಮಾಡಲು ರಾಜ್ಯ ಸರ್ಕಾರ ಯೋಜನೆಯನ್ನು ಆಯೋಜಿಸಿದೆ.

 

Leave A Reply

Your email address will not be published.