ಅದೃಷ್ಟ ಅಂದರೆ ಇದಪ್ಪಾ!!! ಗಣಿಯಲ್ಲಿ ದೊರೆಯಿತು ಐವರಿಗೆ ವಜ್ರದ ಹರಳು !!!
ಯಾವ ಹೂವು ಯಾರ ಮುಡಿಗೋ ? ಯಾವಾಗ ಯಾರಿಗೆ ಹೇಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿದು ಒಲಿಯುತ್ತಾಳೆ ಎಂದು ತಿಳಿಯದು. ಇಂದು ಸಾಮಾನ್ಯ ಮನುಷ್ಯನಾಗಿದ್ದವನು ನಾಳೆ ಕೋಟಿಗಟ್ಟಲೆ ಕಾಂಚಾಣ ಹೊಂದಿರುವ ಒಡೆಯನಾಗ ಬಹುದು.
ಒಂದೇ ದಿನದಲ್ಲಿ ಐವರು ಗುತ್ತಿಗೆದಾರರಿಗೆ ಐಶ್ವರ್ಯ ಒಲಿದು ಸಿರಿವಂತರಾಗಿದ್ದಾರೆ. ಮಧ್ಯಪ್ರದೇಶದ ಪನ್ನಾದ ವಜ್ರ ಗಣಿಯಲ್ಲಿ ಒಂದೇ ದಿನದಲ್ಲಿ ಐವರಿಗೆ ಐದು ವಜ್ರ ಸಿಕ್ಕಿದ್ದು, ಹರಾಜಿಗೆ ಇಟ್ಟಾಗ ಬರೋಬ್ಬರಿ 50 ಲಕ್ಷ ರೂಪಾಯಿಗೂ ಹೆಚ್ಚು ಮೊತ್ತವೆಂದು ಅಂದಾಜಿಸಲಾಗಿದೆ.
ಮಧ್ಯಪ್ರದೇಶ ಪನ್ನಾ ಎಂಬಲ್ಲಿ ವಜ್ರದ ಗಣಿಯಲ್ಲಿ ಐವರು ಗುತ್ತಿಗೆದಾರರಿಗೆ ಜಾಕ್ಪಾಟ್ ಹೊಡೆದಿದ್ದು, ಒಂದೇ ದಿನದಲ್ಲಿ ಐವರಿಗೆ ಪ್ರತ್ಯೇಕ ಗಣಿಗಳಲ್ಲಿ 5 ವಜ್ರಗಳು ಸಿಕ್ಕಿದ್ದು, ಇವುಗಳು 18.82 ಕ್ಯಾರೆಟ್ ತೂಕ ಹೊಂದಿವೆ.ಬಹುಶಃ ಈ ಗಣಿ ಪ್ರದೇಶದಲ್ಲಿ ವಜ್ರದ ನಿಕ್ಷೇಪ ಗಳಿರಬಹುದೇನೋ??
ಕಳೆದ ವಾರದಲ್ಲಿ 8 ವಜ್ರಗಳು ಪತ್ತೆಯಾಗಿದ್ದು, ಅದರ ಬೆನ್ನಲ್ಲೇ ಪ್ರತ್ಯೇಕ ಗಣಿ ಪ್ರದೇಶದಲ್ಲಿ 5 ವಜ್ರದ ಹರಳುಗಳು ದೊರೆತಿವೆ. ಈ ಬಗ್ಗೆ ವಜ್ರದ ವ್ಯಾಪಾರಿಯೊಬ್ಬರು ವಜ್ರದ ತೂಕದ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ವ್ಯಕ್ತಿಗೆ 6.81 ಕ್ಯಾರೆಟ್ ವಜ್ರ, ಎರಡನೆಯದು 1.77 ಕ್ಯಾರೆಟ್, ಮೂರನೇಯ ವ್ಯಕ್ತಿಗೆ 2.28 ಕ್ಯಾರೆಟ್, 4ನೇ ವ್ಯಕ್ತಿಗೆ 3.64 ಕ್ಯಾರೆಟ್ ಮತ್ತು ಕೊನೆಯಾತನಿಗೆ ಅತಿ ಹೆಚ್ಚು ತೂಕದ 4.32 ಕ್ಯಾರೆಟ್ ವಜ್ರ ಸಿಕ್ಕಿದೆ. ಸಿಕ್ಕ ವಜ್ರಗಳನ್ನು ಕಚೇರಿಯಲ್ಲಿ ಠೇವಣಿ ಇಡಲಾಗಿದ್ದು, ಪನ್ನಾ ಜಿಲ್ಲೆಯ ಗಣಿಗಳಿಂದ ತೆಗೆಯಲಾದ ಒಟ್ಟು 125 ವಜ್ರಗಳನ್ನು ಅಕ್ಟೋಬರ್ 18 ರಂದು ಕಲೆಕ್ಟರೇಟ್ ಕಟ್ಟಡದಲ್ಲಿ ಬೃಹತ್ ಹರಾಜು ಪ್ರಕ್ರಿಯೆಯಲ್ಲಿ ಇಡಲಾಗುತ್ತದೆ.