Shivamogga Special । ವಾರಗಳ ನಂತರ ಇನ್ನೊಂದು ಅವಳಿ ಕರುವಿಗೆ ಜನ್ಮ ನೀಡಿದ ಎಮ್ಮೆ, ವೈದ್ಯ ಲೋಕಕ್ಕೆ ಅಚ್ಚರಿ !!

ವೈದ್ಯರಿಗೆ ಏನು ಅಚ್ಚರಿ ಆಗುವ ಘಟನೆಯೊಂದು ನಡೆದಿದೆ. ಎಮ್ಮೆಯೊಂದು ಅವಳಿ ಕರುಗಳಿಗೆ ಜನ್ಮ ನೀಡಿದೆ. ಅದೇನು ವಿಶೇಷ, ಅವಳಿ ಕರುಗಳಿಗೆ ಜನ್ಮ ನೀಡೋದ್ರಲ್ಲಿ? ಎಂದು ಯೋಚಿಸುತ್ತಿದ್ದಾರಾ? ಅಲ್ಲೇ ಇರೋದು ವಿಶೇಷ, ಈ ಬಗೆಗಿನ ಇಂಟ್ರೆಸ್ಟಿಂಗ್ ಸುದ್ದಿ ಓದಿ.

 

ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ನಾಡ ಕಳಿಸ ಎಂಬ ಗ್ರಾಮದಲ್ಲಿ ಎಮ್ಮೆಯನ್ನು ಮೇಯಲೆಂದು ಹೊರಗಡೆ ಕಟ್ಟಿ ಹಾಕಲಾಗಿತ್ತು. ಇಲ್ಲಿನ ದುರ್ಗಪ್ಪ ಅವರ ಎಮ್ಮೆ ಸೆಪ್ಟೆಂಬರ್ 13 ರಂದು ಮೊದಲ ಪ್ರಸವದಲ್ಲಿ ಗಂಡು ಕರುವಿಗೆ ಜನ್ಮ ನೀಡಿತ್ತು. ಅಷ್ಟೇ ಆಗಿದ್ರೆ ಈ ಎಮ್ಮೆ ಹೀಗೆ ಸುದ್ದಿನೇ ಆಗ್ತಿರಲಿಲ್ಲ. ಆದ್ರೆ ಚೆನ್ನಾಗಿ ಮೇಯ್ಕೊಂಡು ಆರೋಗ್ಯವಾಗಿದ್ದ ಎಮ್ಮೆಯನ್ನು ಒಂದು ವಾರದ ಬಳಿಕ ಹುಲ್ಲು ಮೇಯಲೆಂದು ಹೊರಗೆ ಕಟ್ಟಿ ಹಾಕಿದ್ರು. ಅಲ್ಲೇ ಎಮ್ಮೆಗೆ ಹಠಾತ್ ಪ್ರಸವ ವೇದನೆ ಕಾಣಿಸಿಕೊಂಡು ಇನ್ನೊಂದು ಹೆಣ್ಣು ಕರುವಿಗೆ ಜನ್ಮ ನೀಡಿದೆ. ಅದೂ ಒಂದು ವಾರದ ನಂತರ.

ಸಾಮಾನ್ಯವಾಗಿ ಎಮ್ಮೆ ದನಗಳು ಅವಳಿ ಜವಳಿಗೆ ಜನ್ಮ ನೀಡಿರುವುದನ್ನು ಕೇಳಿರಬಹುದು. ಆಶ್ಚರ್ಯ ಅಂದ್ರೆ ಸಾಮಾನ್ಯವಾಗಿ ಅವಳಿ ಜವಳಿ ಕರುಗಳು ಹುಟ್ಟೋದಿದ್ರೆ ಕೆಲವೇ ತಾಸುಗಳ ಅಂತರದಲ್ಲಿ ಹುಟ್ಟುತ್ತವೆ.ಆದರೆ ಈ ಎಮ್ಮೆ ಒಂದು ವಾರದ ನಂತರ ಮತ್ತೊಮ್ಮೆ ಈದೈತೆ !!! ಅದೇ ಜನರನ್ನು ಮತ್ತು ವೈದ್ಯರನ್ನು ಚಕಿತಗೊಳಿಸಿರುವುದು.

ಈ ಎಮ್ಮೆಯು ಸೆಪ್ಟೆಂಬರ್ 13 ರಂದು ಮೊದಲ ಗಂಡು ಕರುವಿಗೆ ಜನ್ಮ ನೀಡಿತ್ತು. ಎಮ್ಮೆಯು ಅರೋಗ್ಯವಾಗಿತ್ತು, ನಂತರ ಒಂದು ವಾರ ಬಳಿಕ ಹೆಣ್ಣು ಕರುವಿಗೆ ಜನ್ಮ ನೀಡಿದ್ದು ಸದ್ಯ ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ಈ ರೀತಿ ಅವಳ ಜವಳಿ 1 ವಾರ ಕಾಲ ಅಂತರದಲ್ಲಿ ಜನ್ಮ ನೀಡಿದ್ದು ವಿಶೇಷ ವೈದ್ಯಲೋಕಕ್ಕೆ ಅಚ್ಚರಿಯ ಸಂಗತಿಯಾಗಿದೆ.

ವಾರದ ನಂತರ ಮೊದಲ ಕರುವಿಗೆ ಸಹೋದರಿ ಹುಟ್ಟುಕೊಂಡಿದ್ದಾಳೆ. ದುರ್ಗಪ್ಪ ಅವರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಒಟ್ಟಿನಲ್ಲಿ ಈ ಅವಳಿ‌ಜವಳಿ ಪ್ರಸವದಿಂದಾಗಿ ಎಮ್ಮೆ ಮತ್ತು ಕರುಗಳು ಜನರ ಕುತೂಹಲಕ್ಕೆ ಕಾರಣವಾಗಿವೆ.

Leave A Reply

Your email address will not be published.