Ghee health benefits : ತುಪ್ಪದ ಜೊತೆ ಇದನ್ನೂ ಸೇರಿಸಿ ತಿನ್ನಿ | ಒಳ್ಳೆಯ ಲಾಭ ಪಡೆಯಿರಿ!!!
ತುಪ್ಪವು ಭಾರತೀಯ ಅಡುಗೆ ಮನೆಯ ಪ್ರಮುಖ ಭಾಗ ಆಗಿದೆ. ತುಪ್ಪಕ್ಕೆ ಆದ್ಯತೆ ನೀಡದ ಯಾವುದೇ ಮನೆ ಇಲ್ಲ ಎಂದರೆ ಅತಿಶಯೋಕ್ತಿಯಾಗದು.ಅಷ್ಟರ ಮಟ್ಟಿಗೆ ಭಾರತದಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತದೆ. ತುಪ್ಪ ರುಚಿ ಮಾತ್ರವಲ್ಲದೇ, ಅದರ ಪರಿಮಳ ಆಹಾರದ ರುಚಿಯನ್ನು ಕೂಡ ಹೆಚ್ಚಿಸುತ್ತದೆ.
ತುಪ್ಪವು ಬೆಣ್ಣೆಯಿಂದ ಉತ್ಪಾದಿಸಲ್ಪಡುವ ವಸ್ತುವಾಗಿದ್ದು, ತುಪ್ಪ ಯಾವಾಗಲೂ ಸಾಂಪ್ರದಾಯಿಕವಾಗಿ ಪವಿತ್ರವೆಂದು ಪರಿಗಣಿಸಲ್ಪಟ್ಟ ಹಸುಗಳ ಹಾಲಿನಿಂದ ತಯಾರಿಸಲ್ಪಡುತ್ತದೆ. ತುಪ್ಪವು ಆರೋಗ್ಯಕರ ಮತ್ತು ಪೌಷ್ಠಿಕಾಂಶದ ಘಟಕವಾಗಿದೆ.
ನೈಸರ್ಗಿಕ ಬ್ಯೂಟಿರಿಕ್ ಆಮ್ಲವನ್ನು ಹೊಂದಿರುವ ಕೆಲವೇ ಉತ್ಪನ್ನಗಳಲ್ಲಿ ತುಪ್ಪವು ಒಂದಾಗಿದ್ದು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಆಹಾರದ ಸರಿಯಾದ ಜೀರ್ಣಕ್ರಿಯೆಯನ್ನು ಬೆಂಬಲಿಸಲು ಅಗತ್ಯವಾದ ರೋಗನಿರೋಧಕ ಪ್ರಕ್ರಿಯೆಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಹೊಂದಿದೆ. ಕರುಳಿನ ಚಲನೆಯನ್ನು ನಿಯಂತ್ರಿಸುವುದು ಇದರ ಪ್ರಮುಖ ಗುಣವಾಗಿದೆ.
ತುಪ್ಪ ಜೀವ ರಾಸಾಯನಿಕ ಕ್ರಿಯೆಯಲ್ಲಿ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಒತ್ತಡದ ಸ್ಥಿತಿಯಲ್ಲಿ, ಪಿತ್ತಜನಕಾಂಗವು ಹೆಚ್ಚು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸುತ್ತದೆ. ಒತ್ತಡವನ್ನು ಬಿಡುಗಡೆ ಮಾಡಲು, ಉತ್ತಮವಾಗಿ ನಿದ್ರೆ ಮಾಡಲು ಮತ್ತು ತುಪ್ಪ ಸಹಾಯ ಮಾಡುತ್ತದೆ.
ತುಪ್ಪದ ಪ್ರಯೋಜನ ದ್ವಿಗುಣಗೊಳಿಸಲು ತುಪ್ಪದ ಜೊತೆ ಈ ಐದು ಪದಾರ್ಥಗಳನ್ನು ಸೇರಿಸಿ ಸೇವಿಸುವುದು ಒಳ್ಳೆಯದು.
ಅರಿಶಿನ, ಕರ್ಪೂರ, ತುಳಸಿ, ದಾಲ್ಚಿನ್ನಿ ಮುಂತಾದ ಗಿಡಮೂಲಿಕೆಗಳ ಜೊತೆ ತುಪ್ಪವನ್ನು ಸೇವಿಸಿದರೆ ಅದರ ಪ್ರಯೋಜನ ವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ.
ಅರಿಶಿನವನ್ನು ತುಪ್ಪದ ಜೊತೆ ಬೆರೆಸಿ ಸೇವಿಸಿದರೆ ತೂಕ ಕಡಿಮೆ ಮಾಡಿಕೊಳ್ಳಲು, ಹೊಸ ರಕ್ತನಾಳಗಳನ್ನು ನಿರ್ಮಿಸಲು, ಹೃದಯದ ಆರೋಗ್ಯ ಸುಧಾರಿಸಲು ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಸಹಕಾರಿಯಾಗಿದೆ. ಜೊತೆಗೆ ಈ ಮಿಶ್ರಣವು ದೇಹದಲ್ಲಿನ ಉರಿಯೂತವನ್ನು ಕೂಡ ಕಡಿಮೆ ಮಾಡುತ್ತದೆ.
ಒಂದು ಜಾರ್ ನಲ್ಲಿ ಒಂದು ಕಪ್ ತುಪ್ಪವನ್ನು ಹಾಕಿ ಮತ್ತು ಒಂದು ಟೀಸ್ಪೂನ್ ಅರಿಶಿನ ಸೇರಿಸಬೇಕು. ಈ ಮಿಶ್ರಣವನ್ನು ಗಾಳಿಯಾಡದ ಜಾರ್ನಲ್ಲಿ ಸಂಗ್ರಹಿಸಿಟ್ಟು ಬಳಸಿ ಪ್ರಯೋಜನ ಪಡೆಯಬಹುದು.
ತುಳಸಿ ದೇಹಕ್ಕೆ ಹಲವು ಪ್ರಯೋಜನ ನೀಡುತ್ತದೆ. ತುಳಸಿ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿದ್ದು ರಕ್ತದ ಸಕ್ಕರೆ, ಲಿಪಿಡ್ ಮತ್ತು ರಕ್ತದೊತ್ತಡ ಮಟ್ಟ ಸಾಮಾನ್ಯಗೊಳಿಸಲು ತುಳಸಿ ಸಹಕಾರಿಯಾಗಿದೆ. ಮಾನಸಿಕ ಒತ್ತಡ ನಿವಾರಿಸುತ್ತದೆ. ಹಾಗಾಗಿ ತುಳಸಿ ಮತ್ತು ತುಪ್ಪದ ಮಿಶ್ರಣ ಬೆರೆಸಿ ಸೇವನೆ ಮಾಡುವುದು ಉತ್ತಮ. ತುಪ್ಪ ಬೇಯಿಸುವಾಗ ಕೆಲವು ತುಳಸಿ ಎಲೆಗಳನ್ನು ಸೇರಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಸೇವಿಸಬಹುದು.
ತುಪ್ಪದಲ್ಲಿ ಕರ್ಪೂರ ಸೇರಿಸಿದರೆ ವಾತ, ಪಿತ್ತ ಮತ್ತು ಕಫ ಮೂರು ದೋಷ ಸಮತೋಲನಗೊಳಿಸುತ್ತದೆ. ಜೀರ್ಣಶಕ್ತಿ ಹೆಚ್ಚಿಸುತ್ತದೆ. ಕರುಳಿನ ಹುಳುಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಜ್ವರವನ್ನೂ ತಡೆಯುತ್ತದೆ. ಇದಲ್ಲದೆ, ಹೃದಯ ಬಡಿತ ನಿಯಂತ್ರಿಸಿ, ಅಸ್ತಮಾ ಸಮಸ್ಯೆ ತಡೆಗೆ ಸಹಕಾರಿಯಾಗಿದೆ.
ಕರ್ಪೂರ ಮತ್ತು ತುಪ್ಪದ ಮಿಶ್ರಣ ತಯಾರಿಸಲು, ಎರಡು ತುಂಡು ಕರ್ಪೂರವನ್ನು ತುಪ್ಪದಲ್ಲಿ ಹಾಕಿ ಐದು ನಿಮಿಷ ಬಿಸಿ ಮಾಡಬೇಕು. ನಂತರ ತುಪ್ಪವನ್ನು ತಣ್ಣಗಾಗಲು ಬಿಟ್ಟು ಬಳಿಕ ಫಿಲ್ಟರ್ ಮಾಡಿ ಸೇವಿಸಬಹುದು.
ದಾಲ್ಚಿನ್ನಿ ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಈ ಮಿಶ್ರಣವನ್ನು ತಯಾರಿಸಲು ಬಾಣಲೆಗೆ ತುಪ್ಪ ಹಾಕಿ, ಅದರಲ್ಲಿ ಎರಡು ದಾಲ್ಚಿನ್ನಿ ತುಂಡು ಹಾಕಬೇಕು. ತುಪ್ಪವನ್ನು ಮಧ್ಯಮ ಉರಿಯಲ್ಲಿ ಐದು ನಿಮಿಷ ಬಿಸಿ ಮಾಡಿ. ತಣ್ಣಗಾಗಲು ಬಿಟ್ಟು ನಂತರ ಸೇವಿಸಬೇಕು.
ಬೆಳ್ಳುಳ್ಳಿ ಮತ್ತು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿದರೆ ದೇಹದಲ್ಲಿ ಉರಿಯೂತ, ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಈ ಮಿಶ್ರಣವನ್ನು ತಯಾರಿಸಲು, ಬಾಣಲೆಗೆ ಕತ್ತರಿಸಿದ ಬೆಳ್ಳುಳ್ಳಿ ಲವಂಗದೊಂದಿಗೆ ಸ್ವಲ್ಪ ತುಪ್ಪ ಸೇರಿಸಬೇಕು. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ತಣ್ಣಗಾಗಲು ಬಿಟ್ಟು ಫಿಲ್ಟರ್ ಮಾಡಿ ಸೇವಿಸಬಹುದು.
ಹಸುವಿನ ತುಪ್ಪ ಜೀರ್ಣಾಂಗ ವ್ಯವಸ್ಥೆಯನ್ನು ನಯಗೊಳಿಸುತ್ತದೆ ಮತ್ತು ಹೊಟ್ಟೆಯ ಲೋಳೆಯ ಒಳಪದರವನ್ನು ಕಾಪಾಡಿಕೊಳ್ಳಲು, ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಸರಿಪಡಿಸಲು ಸಹಕಾರಿಯಾಗಿದೆ. ಬಹುಪಯೋಗಿ ತುಪ್ಪವನ್ನು ಹಿತಮಿತವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.