Debit and Credit Card : ಕ್ರೆಡಿಟ್ ಡೆಬಿಟ್ ಕಾರ್ಡ್ ಸುರಕ್ಷತೆಗೆ ಬಂದಿದೆ ಟೋಕನೈಸೇಶನ್ | RBI ನ ಹೊಸ ರೂಲ್ಸ್ ಏನಿದು?
ಮನೆಯಲ್ಲೆ ಕುಳಿತು ಕ್ಷಣ ಮಾತ್ರದಲ್ಲೆ ರೀಚಾರ್ಜ್ , ಕರೆಂಟ್ ಬಿಲ್, ಟಿವಿ ರೀಚಾರ್ಜ್ ಹೀಗೆ ನಾನಾ ರೀತಿಯಲ್ಲಿ ಹಣ ವರ್ಗಾವಣೆ ಜೊತೆಗೆ ಹಣವನ್ನು ಪಡೆಯಲು ಸರಳ ವಿಧಾನಗಳನ್ನು ಗೂಗಲ್ ಪೇ, ಫೋನ್ ಪೇ ಮೂಲಕ ಪಡೆಯುವುದು ಈಗ ದಿನನಿತ್ಯ ದಿನಚರಿಯನ್ನು ಸುಲಭಗೊಳಿಸಲು ಸಹಕಾರಿಯಾಗಿದೆ.
ಯಾವುದೇ ಪಾವತಿ ಇದ್ದರೂ ಕೂಡ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಬಳಕೆಯ ಮಾಡುವುದು ಸಾಮಾನ್ಯ.
ಈ ರೀತಿ ಪಾವತಿ ಮಾಡಿದಾಗ ಕೆಲವೊಮ್ಮೆ ಮಾಹಿತಿಗಳು ಸೋರಿಕೆ ಯಾಗುವ ಸಾಧ್ಯತೆ ಇದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಆರ್. ಬಿ.ಐ ಟೋಕನೈಸೇಶನ್ ಕಡ್ಡಾಯಗೊಳಿಸಿದೆ.
ಕಾರ್ಡ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತಗೊಳಿಸುವ ಪ್ರಯತ್ನದ ಭಾಗವಾಗಿ ವಿಶೇಷ ನೀತಿಯನ್ನು ಜಾರಿಗೆ ತಂದಿದೆ. ದುರದ್ದೇಶದಿಂದ ಸಂಸ್ಥೆಗಳ ಅಥವಾ ವ್ಯಕ್ತಿಯ ಹಣ ದೋಚುವ ಪ್ರಕ್ರಿಯೆಯನ್ನು ನಿರ್ಬಂಧಿಸುವ ಮೂಲಕ ಆನ್ಲೈನ್ ವಂಚನೆ ತಡೆಯುವ ಉದ್ದೇಶದಿಂದ ಟೋಕನೈಸೇಶನ್ ಅನ್ನು ಕಡ್ಡಾಯಗೊಳಿಸಲಾಗಿದೆ.
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕದ ಪಾವತಿಗೆ ಅ.1ರಿಂದ ಟೋಕನೈಸೇಷನ್ ಕಡ್ಡಾಯವಾಗಿದ್ದು, ಆನ್ಲೈನ್ ಪಾವತಿಗೆ ಸಿವಿವಿ ಅಥವಾ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬದಲು ಟೋಕನ್ ನಂಬರ್ ನೀಡುವಂತೆ ಆರ್ ಬಿಐ ಸೂಚಿಸಿದ್ದು, ಕಾರ್ಡ್ ಡೇಟಾ ಉಲ್ಲಂಘನೆಗಳಿಂದ ಗ್ರಾಹಕರ ನಿರ್ಣಾಯಕ ಹಣಕಾಸಿನ ಮಾಹಿತಿಯನ್ನು ಸುರಕ್ಷಿತವಾಗಿರಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ
ಜೂನ್ 30, 2022 ರಿಂದ, ಪಾವತಿ ಅಗ್ರಿಗೇಟರ್‌ಗಳು (ಉದಾಹರಣೆಗೆ ಸ್ಟ್ರೈಪ್) ಪಾವತಿ ಪ್ರಕ್ರಿಯೆಗೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಸಂಖ್ಯೆಯ ಬದಲಿಗೆ ನೆಟ್‌ವರ್ಕ್ ಟೋಕನ್‌ಗಳನ್ನು ಮಾತ್ರವೇ ಬಳಸಬೇಕಾಗುತ್ತದೆ.
ಕಾರ್ಡ್ ವಿವರಗಳು ಮತ್ತು ಬಳಕೆದಾರರ ಡೇಟಾವನ್ನು ಸಾಮಾನ್ಯವಾಗಿ ಪಾವತಿ ಅಥವಾ ವ್ಯಾಪಾರಿ ಗೇಟ್‌ವೇಗಳಲ್ಲಿ ಸಂಗ್ರಹಿಸಲಾಗುತ್ತದೆ. ವೆಬ್‌ಸೈಟ್‌ಗಳಲ್ಲಿನ ಈ ಡೇಟಾ ಸಂಗ್ರಹಣೆಯು ಗ್ರಾಹಕರ ಡೇಟಾವನ್ನು ಆನ್‌ಲೈನ್ ಫಿಶಿಂಗ್ ಮತ್ತು ವಂಚನೆಗೆ ಗುರಿಯಾಗಿಸಬಹುದು. ಹೀಗಾಗಿಯೇ ಗ್ರಾಹಕರ ಡೇಟಾಗಳನ್ನು ಸುರಕ್ಷಿತವಾಗಿಡಲೆಂದೇ ಈ ಟೋಕನೈಸೇಶನ್ ಜಾರಿಗೆ ತರಲಾಗಿದೆ.
ಕಾರ್ಡ್ನ 16 ಅಂಕಿಗಳು ಮತ್ತು ಕಾರ್ಡ್ ಕಾರ್ಯಾವಧಿಯ ಅಂತಿಮ ದಿನಾಂಕವನ್ನು ನಮೂದು ಮಾಡುವ ಪ್ರಕ್ರಿಯೆ ಸೆ. 30ಕ್ಕೆ ಮುಗಿಯಲಿದೆ.
ಟೋಕನೈಸೇಶನ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ಆಪರೇಟಿಂಗ್ ಬ್ಯಾಂಕ್ ನೀಡಿದ ಟೋಕನ್‌ನೊಂದಿಗೆ ಬದಲಾಯಿಸುತ್ತಿದೆ. ಅಂದರೆ, ಈಗ ಆನ್‌ಲೈನ್‌ನಲ್ಲಿ ಏನನ್ನಾದರೂ ಪಾವತಿಸುವಾಗ ಬಳಕೆದಾರರ ಕಾರ್ಡ್‌ನಲ್ಲಿ ಇರುವ 16 ಅಂಕಿಗಳನ್ನು ಪಂಚ್ ಮಾಡಲಾಗುವುದಿಲ್ಲ.
ಹೀಗೆ ಮಾಡುವಾಗ ಕಾರ್ಡ್ ವಿವರಗಳನ್ನು ಉಳಿಸುವ ಮೊದಲು 3D ಸುರಕ್ಷಿತ ದೃಢೀಕರಣ ಮತ್ತು ಇತರ RBI ಇ – ಆದೇಶ – ಸಂಬಂಧಿತ ಅವಶ್ಯಕತೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದ್ದು, ಗ್ರಾಹಕರು ತಮ್ಮ ವ್ಯಾಪಾರಿಗೆ ಪಾವತಿಸುವಾಗ ತಮ್ಮ ಟೋಕನ್‌ಗಳನ್ನು ಅಳಿಸಲು ಆಯ್ಕೆ ನೀಡಬೇಕಾಗಿದೆ.
ನಿಜವಾದ ಕಾರ್ಡ್ ಡೇಟಾ, ಟೋಕನ್‌ಗಳು ಮತ್ತು ಇತರ ಸಂಬಂಧಿತ ವಿವರಗಳನ್ನು ಅಧಿಕೃತ ಕಾರ್ಡ್ ನೆಟ್‌ವರ್ಕ್‌ಗಳಿಂದ ಸುರಕ್ಷಿತ ಮೋಡ್‌ನಲ್ಲಿ ಸಂಗ್ರಹಿಸಲಾಗಿದ್ದು, ಟೋಕನ್ಗೆ ವಿನಂತಿಸುವವರು ಪ್ರಾಥಮಿಕ ಖಾತೆ ಸಂಖ್ಯೆ (PAN), ಅಂದರೆ ಕಾರ್ಡ್ ಸಂಖ್ಯೆ ಅಥವಾ ಯಾವುದೇ ಇತರ ಕಾರ್ಡ್ ವಿವರವನ್ನು ಸಂಗ್ರಹಿಸಲಾಗುವುದಿಲ್ಲ. ಟೋಕನ್ ವಿನಂತಿದಾರರನ್ನು ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಮಾಣೀಕರಿಸಲು ಕಾರ್ಡ್ ನೆಟ್‌ವರ್ಕ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ಅದು ಅಂತಾರಾಷ್ಟ್ರೀಯ ಉತ್ತಮ ಅಭ್ಯಾಸಗಳು / ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳಿಗೆ ಅನುಗುಣವಾಗಿರುತ್ತದೆ.
ಡೆಬಿಟ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಟೋಕನೈಸ್ ಮಾಡುವ ವಿಧಾನ ಹೀಗಿದೆ:
ಇ-ಕಾಮರ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಯಾವುದೇ ವಸ್ತು ಖರೀದಿಸಿ ಪಾವತಿ ಮಾಡುವಾಗ ಕಾರ್ಡ್ ಆಯ್ಕೆಗಳನ್ನು ಮಾಡಿ ಅಗತ್ಯವಿರುವ ವಿವರಗಳನ್ನೂ ಗಮನಿಸಿ ನಮೂದಿಸಬೇಕು .
ಟೋಕನ್ ಅನ್ನು ಪಡೆಯಲು RBI ಮಾರ್ಗಸೂಚಿಗಳನ್ನು ಅನುಸರಿಸಿ, ನಂತರ ಸಂಗ್ರಹಿಸಿ ವೆಬ್‌ಸೈಟ್‌ನಲ್ಲಿ ಕಾರ್ಡ್ ಅನ್ನು ಸುರಕ್ಷಿತಗೊಳಿಸುವ ಆಯ್ಕೆಯನ್ನು ಒತ್ತಬೇಕು.
ಗ್ರಾಹಕರಿಗೆ ಒಂದು ಬಾರಿ ಬಳಕೆಯಾಗುವ (OTP)ಯನ್ನು ಕಳಿಸಲಾಗಿರುತ್ತದೆ. ಬ್ಯಾಂಕ್ ಪೇಜ್ ನಲ್ಲಿ OTP ಸಂಖ್ಯೆ ಯನ್ನೂ ಹಾಕಿ , ಟೋಕನ್ ಪಡೆದು, ವಹಿವಾಟು ನಡೆಸಲು ಕಾರ್ಡ್ನ ಮಾಹಿತಿಯನ್ನು ಕಳುಹಿಸಬೇಕು.
ಟೋಕನ್ ಅನ್ನು ವ್ಯಾಪಾರಿಗೆ ಕಳುಹಿಸಲಾಗುವುದರಿಂದ ಅದನ್ನು ವೈಯಕ್ತಿಕ ಕಾರ್ಡ್ ವಿವರಗಳ ಸ್ಥಳದಲ್ಲಿ ವ್ಯಾಪಾರಿ ಉಳಿಸುತ್ತಾರೆ. ಮತ್ತೊಮ್ಮೆ ಅದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಥವಾ ವ್ಯಾಪಾರಿ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಉಳಿಸಿದ ಕಾರ್ಡ್‌ನ ಕೊನೆಯ ನಾಲ್ಕು ಅಂಕಿಗಳನ್ನು ಮಾತ್ರ ಪ್ರದರ್ಶಿಸಲಾಗುತ್ತದೆ. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ಟೋಕನೈಸ್ ಮಾಡಲಾಗಿದೆ ಎಂಬುದನ್ನೂ ಹೀಗೆ ತಿಳಿಯಬಹುದು.
ಗ್ರಾಹಕನು ಕಾರ್ಡ್ ಅನ್ನು ಟೋಕನೈಸ್ ಮಾಡುವ ಆಯ್ಕೆಯನ್ನು ಗ್ರಾಹಕನಿಗೆ ಬಿಡಲಾಗಿದ್ದು, ಟೋಕನ್ ರಚಿಸಲು ಇಚ್ಛಿಸದವರು ವಹಿವಾಟು ಕೈಗೊಳ್ಳುವ ಸಮಯದಲ್ಲಿ ಕಾರ್ಡ್ ವಿವರಗಳನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ ಮೊದಲಿನಂತೆ ವಹಿವಾಟು ಮುಂದುವರಿಸಬಹುದಾಗಿದೆ.
ಈಗ ನಡೆಯುತ್ತಿರುವ ಡೇಟಾ ಹ್ಯಾಕಿಂಗ್ , ಆನ್ಲೈನ್ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಈ ಕ್ರಮವನ್ನು ಜಾರಿಗೆ ತರಲಾಗಿದೆ. ಇದರಿಂದಾಗಿ ಗ್ರಾಹಕರು, ವ್ಯಾಪಾರಿಗಳು ಮತ್ತು ಬ್ಯಾಂಕ್‌ಗಳಿಗೆ ಸಹಾಯವಾಗುತ್ತದೆ