ಮಹಿಳೆಯರೇ ಗಮನಿಸಿ | ನೀವು ಜೀನ್ಸ್ ಹಾಕುತ್ತೀರಾ? ಹಾಗಾದರೆ ಈ ಸಮಸ್ಯೆ ಕಾಡಬಹುದು!!!
ಕಾಲಕ್ಕೆ ತಕ್ಕಂತೆ ಕೋಲ ಎಂಬ ಮಾತಿನಂತೆ, ದಿನದಿಂದ ದಿನಕ್ಕೆ ತೊಡುವ ಬಟ್ಟೆಗಳಿಂದ ಹಿಡಿದು ಧರಿಸುವ ಚಪ್ಪಳಿಯವರೆಗೂ ವಿಭಿನ್ನ ಮಾದರಿ, ಯುವಜನತೆಗೆ ತಕ್ಕಂತೆ ಬಟ್ಟೆಗಳು ವಿಶೇಷ ರೀತಿಯಲ್ಲಿ ವಿನ್ಯಾಸಗೊಳ್ಳುತ್ತಿವೆ. ಈ ನಡುವೆ ಕೆಲವರು ಮುಖ ನೋಡಿ ಮಣೆ ಹಾಕುವ ಮನಸ್ತಿತಿಯವರು ಕೂಡಾ ಇದ್ದು, ಧರಿಸುವ ಉಡುಗೆ ತೊಡುಗೆಯ ಆಧಾರದಲ್ಲಿ ಅಳೆಯುವವರು ಕೂಡ ಇದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.ಜನರ ಅಭಿರುಚಿಗೆ ತಕ್ಕಂತೆ ಬಿಗಿಯಾದ ಜೀನ್ಸ್ ಗಳ ಜೊತೆಗೆ ಇನ್ನಿತರ ಉಡುಪುಗಳು ಮೈಯನ್ನು ಬಿಗಿಯಾಗಿ ಅಪ್ಪುವಂತೆ ವಿನ್ಯಾಸ ಮಾಡುವುದು ಸಾಮಾನ್ಯ.
ಆದರೆ ಇಷ್ಟೊಂದು ಬಿಗಿಯಾದ ಉಡುಪುಗಳಿಂದ ಮನುಷ್ಯನ ದೇಹಕ್ಕೆ ತೊಂದರೆಯುಂಟಾಗುತ್ತದೆ. ಬೆನ್ನು ನೋವು , ಕಾಲುಗಳಲ್ಲಿ ನೋವು, ರಕ್ತನಾಳಗಳಲ್ಲಿ ಹಿಡಿತ, ಮೆರಾಲ್ಜಿಯಾ ಪರೇಸ್ಥೆಟಿಕಾ ದಂತಹ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ.ಟೈಟ್ ಜೀನ್ಸ್ (tight jeans) ಮತ್ತು ಲೆಗ್ಗಿನ್ಸ್ (leggings) ಪ್ಯಾಂಟ್ ಧರಿಸುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಜಠರಗರುಳಿನ ತೊಂದರೆಗೆ ಕಾರಣವಾಗುತ್ತದೆ. ಈ ಬಿಗಿಯಾದ ಬಟ್ಟೆಯಿಂದ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದ ಸೊಂಟವು ಅಂಗಗಳನ್ನು ಹಿಸುಕುವುದು ಮಾತ್ರವಲ್ಲದೆ, ಹೊಟ್ಟೆಯ ಆಮ್ಲವು ಅನ್ನನಾಳದ ಮೇಲೆ ಪರಿಣಾಮ ಬೀರುತ್ತದೆ. ಇದು ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿಗೆ ಕಾರಣವಾಗಬಹುದು.
ವೈದ್ಯಕೀಯ ಮೂಲಗಳ ಪ್ರಕಾರ ಅತಿಯಾದ ಬಿಗಿ ಉಂಟು ಮಾಡುವಂತಹ ಜೀನ್ಸ್ ಪ್ಯಾಂಟ್ ಅನ್ನು ಧರಿಸುತವವರಿಗೆ ಮೆರಾಲ್ಜಿಯಾ ಪರೇಸ್ಥೆಟಿಕಾ ತೊಂದರೆ ಕಾಣಿಸಿಕೊಳ್ಳಬಹುದು. ಮನುಷ್ಯನ ದೇಹದಲ್ಲಿ ಸೊಂಟದ ಭಾಗದಿಂದ ತೊಡೆಯ ಭಾಗಕ್ಕೆ ಸಂವೇದನಾ ನರಗಳು ಸಕ್ರಿಯತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಂದು ವೇಳೆ ಸತತವಾಗಿ ಜೀನ್ಸ್ ಪ್ಯಾಂಟ್ ಧರಿಸಿದ್ದೇ ಆದರೆ ಈ ನರಗಳು ತಮ್ಮ ಕಾರ್ಯ ನಿಲ್ಲಿಸುತ್ತವೆ. ಇದರಿಂದ ತೊಡೆಯ ಭಾಗ ಬರುಬರುತ್ತಾ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಮಹಿಳೆಯರು ಬಿಗಿಯಾದ ಜೀನ್ಸ್ ಪ್ಯಾಂಟುಗಳನ್ನು ತೊಡುವುದರಿಂದ ಮೂತ್ರನಾಳದ ಸೋಂಕುಗಳು ಹೆಚ್ಚಾಗಿ ಈಸ್ಟ್ ಸೋಂಕುಗಳು ಬೆಳೆಯಲು ಪ್ರಾರಂಭವಾಗುತ್ತದೆ. ಇದಕ್ಕೆ ಕಾರಣ ಗುಪ್ತಾಂಗಗಳಿಗೆ ಎದುರಾಗುವ ಅತಿಯಾದ ಶಾಖ.ಬಿಗಿಯಾದ ಜೀನ್ಸ್ ಪ್ಯಾಂಟ್ ಗಳು ಹೊಟ್ಟೆ ಮತ್ತು ಸೊಂಟದ ಭಾಗವನ್ನು ಹಿಸುಕುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಇದರಿಂದ ಮನುಷ್ಯನ ದೇಹದಲ್ಲಿ ದುಗ್ಧರಸ ಗ್ರಂಥಿಗಳು ಹರಿಯಲು ತೊಂದರೆ ಆಗುತ್ತದೆ ಮತ್ತು ಇಷ್ಟೊಂದು ಬಿಗಿಯಾದ ಉಡುಪುಗಳಿಂದ ಮನುಷ್ಯನ ದೇಹದಲ್ಲಿ ರಕ್ತ ಸಂಚಾರ ಸಹ ಸರಿಯಾಗಿ ಆಗುವುದಿಲ್ಲ.
ಜೀನ್ಸ್ ಮತ್ತು ಲೆಗ್ಗಿನ್ಸ್ ಪ್ಯಾಂಟ್’ನಂತಹ ಬಿಗಿಯಾದ ಬಟ್ಟೆಗಳನ್ನು ಧರಿಸಿದಾಗ, ಚರ್ಮದ ಉರಿಯೂತವು ಉಂಟಾಗುತ್ತದೆ. ಚರ್ಮವನ್ನು (Skin) ಈ ಬಿಗಿಯಾದ ಬಟ್ಟೆಗಳು ಉಜ್ಜುತ್ತವೆ. ಇದರಿಂದ ಸೂಕ್ಷ್ಮ ಚರ್ಮ ಅಥವಾ ಎಸ್ಜಿಮಾ, ಸೋರಿಯಾಸಿಸ್, ಅಥವಾ ಕೆಲವು ಸೂಕ್ಷ್ಮತೆಗಳ ಕಾರಣದಿಂದಾಗಿ ಚರ್ಮದ ಮೇಲೆ ದದ್ದುಗಳು ಉಂಟಾಗುತ್ತವೆ.
ತುಂಬಾ ಬಿಗಿಯಾದ ಬಟ್ಟೆಯಿಂದ ಚರ್ಮವು ಸಾಮಾನ್ಯವಾಗಿ ಉಸಿರಾಡಲು ಸಾಧ್ಯವಾಗದೆ, ಇದರಿಂದ ದೇಹದ ಉಷ್ಣತೆ ಹೆಚ್ಚಾಗಿ ಬೆವರು ಉಂಟಾಗಿ ಚರ್ಮವು (Skin)ತೇವಾಂಶದಿಂದ ಕೂಡಿರುತ್ತದೆ. ಇದರಿಂದ ದೇಹದಲ್ಲಿ ಬ್ಯಾಕ್ಟೀರಿಯಾಗಳು ಉತ್ಪಾದನೆಯಾಗುತ್ತದೆ.
ಯೀಸ್ಟ್ ಸೋಂಕು ತುಂಬಾ ಬಿಗಿಯಾದ ಜೀನ್ಸ್, ಲೆಗ್ಗಿನ್ಸ್, ಕ್ರೀಡಾ ಉಡುಪು ಅಥವಾ ಶೇಪ್ವೇರ್ ಮತ್ತು ಬಿಗಿಯಾದ ಒಳ ಉಡುಪುಗಳನ್ನು ಧರಿಸುವುದರಿಂದ ದೇಹದಲ್ಲಿ ಕಾಣಿಸಿಕೊಳ್ಳುತ್ತದೆ. ಇದರಿಂದ ಯೋನಿ ಆರೋಗ್ಯಕ್ಕೆ ಹಾನಿಕಾರಕವಾದ ವಲ್ವೊಡಿನಿಯಾ ಎನ್ನುವ ಸಮಸ್ಯೆಯಿಂದ ಮಹಿಳೆಯರು ಬಳಲುವಂತಾಗುತ್ತದೆ. ಈ ಸೋಂಕು ಮಹಿಳೆಯರ ಖಾಸಗಿ ಭಾಗಗಳಲ್ಲಿ ನೋವು ಉಂಟುಮಾಡುವ ಸ್ಥಿತಿಯಾಗಿದ್ದು, ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬಿಗಿಯಾದ ಜೀನ್ಸ್ ಉಡುಪುಗಳು ಕಾಲುಗಳ ಚಲನೆಯನ್ನು ನಿರ್ಬಂಧಿಸುತ್ತವೆ. ಇದರಿಂದ ಪರೋಕ್ಷವಾಗಿ ಬೆನ್ನು ಹುರಿಗೆ ಸಮಸ್ಯೆ ಎದುರಾಗಬಹುದು. ಕಾಲುಗಳಿಗೆ ಬಿಗಿದಪ್ಪುವ ಜೀನ್ಸ್ ಪ್ಯಾಂಟ್ ಗಳು ಕಾಲುಗಳ ನರಗಳ ಮೇಲೆ ಹೆಚ್ಚಿನ ಪ್ರಭಾವ ಬೀರಿ ಕಾಲುಗಳು ಜೋಮು ಹಿಡಿದು ಸದಾ ಜುಮ್ಮ್ ಎನ್ನುವಂತೆ ಮತ್ತು ಕಾಲುಗಳಲ್ಲಿ ಉರಿಯುವಂತಹ ಲಕ್ಷಣಗಳನ್ನು ತೋರ್ಪಡಿಸುತ್ತವೆ. ಹಾಗಾಗಿ, ದಿನನಿತ್ಯ ಜೀನ್ಸ್ ಧರಿಸುವ ಅಭ್ಯಾಸವಿದ್ದರೆ, ಸಡಿಲವಾದ ಇಲ್ಲವೇ ಅಪರೂಪಕ್ಕೆ ಧರಿಸುವುದು ಒಳ್ಳೆಯದು.