5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾದ ರಿಲಯನ್ಸ್ ಜಿಯೊ | ಹೇಗಿದೆ ಗೊತ್ತಾ ಮೊಬೈಲ್ ಬ್ಯಾಟರಿ ಸಾಮರ್ಥ್ಯ, ಸ್ಟೋರೇಜ್!
ದೇಶದ ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ರೀತಿಯಲ್ಲಿ ಪೈಪೋಟಿ ನೀಡುತ್ತಲೇ ಬರುತ್ತಿದೆ. ಅದರಂತೆ ಇದೀಗ 5ಜಿ ಲೋಕಕ್ಕೆ ಕಾಲಿಡುತ್ತಿದ್ದು, ಎಲ್ಲೆಡೆ 5ಜಿ ಮಯವಾಗಿದೆ. ಅದರಂತೆ, ದೇಶದ ಪ್ರಮುಖ ಉದ್ಯಮ ಸಂಸ್ಥೆ ರಿಲಯನ್ಸ್, ಜಿಯೊ 5G ಸ್ಮಾರ್ಟ್ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಹೌದು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ 5G ಸ್ಮಾರ್ಟ್ಫೋನ್ ಒದಗಿಸಬೇಕು ಎನ್ನುವ ಉದ್ದೇಶದಿಂದ ರಿಲಯನ್ಸ್ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ನೀಡುತ್ತಿದೆ. ಗೂಗಲ್ ಸಹಯೋಗದಲ್ಲಿ ಹೊಸ 5G ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಪ್ರವೇಶಿಸಲಿದೆ. ದೇಶದಲ್ಲಿ 5G ತಂತ್ರಜ್ಞಾನ ಅಭಿವೃದ್ಧಿಪಡಿಸಲು ರಿಲಯನ್ಸ್ ₹2 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಹೇಳಿತ್ತು.
ನೂತನ ಜಿಯೊ 5G ಸ್ಮಾರ್ಟ್ಫೋನ್, ಆಯಂಡ್ರಾಯ್ಡ್ 12 ಓಎಸ್ ಹಾಗೂ 5,000mAh ಬ್ಯಾಟರಿ ಸಾಮರ್ಥ್ಯ ಹೊಂದಿರುತ್ತದೆ ಎಂದು 91 ಮೊಬೈಲ್ಸ್ ವರದಿ ಮಾಡಿದೆ. ಹಾಗೆಯೇ, ಸ್ನ್ಯಾಪ್ಡ್ರ್ಯಾಗನ್ 480 ಪ್ರೊಸೆಸರ್ ಮತ್ತು 4 GB RAM ಹಾಗೂ 32 GB ಸ್ಟೋರೇಜ್ ಇರಲಿದೆ ಎನ್ನಲಾಗಿದೆ.