IOCL : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ | 1535 ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ (ಐಒಸಿಎಲ್) ( IOCL) ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

 

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 24-09-2022
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-10-2022 ರ ಸಂಜೆ 05 ಗಂಟೆವರೆಗೆ.
ಅಡ್ಮಿಟ್ ಕಾರ್ಡ್‌ ಡೌನ್‌ಲೋಡ್ ಆರಂಭಿಕ ದಿನಾಂಕ: 01-11-2022
ಲಿಖಿತ ಪರೀಕ್ಷೆ ದಿನಾಂಕ: 06-11-2022
ಲಿಖಿತ ಪರೀಕ್ಷೆ ಫಲಿತಾಂಶ ದಿನಾಂಕ: 21-11-2022
ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ: 28-11-2022 ರಿಂದ 07-12-2022

ಹುದ್ದೆಗಳ ವಿವರ : ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನೀಷಿಯನ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಬಿಡುಗಡೆ ಮಾಡಿದೆ.
ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ವಿವರ (ಟ್ರೇಡ್‌ವಾರು)
ಅಟೆಂಡಂಟ್ ಆಪರೇಟರ್ (ಕೆಮಿಕಲ್ ಪ್ಲಾಂಟ್) : 396
ಫಿಟ್ಟರ್: 161
ಬಾಯ್ಲರ್ : 54
ಸೆಕ್ರೇಟರಿಯಲ್ ಅಸಿಸ್ಟಂಟ್: 39
ಅಕೌಂಟಂಟ್‌ : 45
ಡಾಟಾ ಎಂಟ್ರಿ ಆಪರೇಟರ್: 73
ಟೆಕ್ನೀಷಿಯನ್ ಅಪ್ರೆಂಟಿಸ್ (ಬ್ರ್ಯಾಂಚ್‌ವಾರು ಹುದ್ದೆಗಳ ವಿವರ)
ಕೆಮಿಕಲ್ : 332
ಮೆಕ್ಯಾನಿಕಲ್: 163
ಇಲೆಕ್ಟ್ರಿಕಲ್: 198
ಇನ್‌ಸ್ಟ್ರುಮೆಂಟೇಶನ್ : 74

ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ, ಗರಿಷ್ಠ 24 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವರ್ಗವಾರು ಮೀಸಲಾತಿ ನಿಯಮ ಅನ್ವಯವಾಗಲಿದೆ.

ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ಬ್ರ್ಯಾಂಚ್‌ಗಳಲ್ಲಿ ಡಿಪ್ಲೊಮ / ಐಟಿಐ / ಬಿಎಸ್ಸಿ / ಮೆಟ್ರಿಕ್ಯೂಲೇಷನ್ ಪಾಸ್‌ ಮಾಡಿರಬೇಕು.

ತರಬೇತಿ ಅವಧಿ ಒಂದು ವರ್ಷ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.