Home Remidies: ಸುಟ್ಟಗಾಯ, ಬಾಯಿಹುಣ್ಣಿಗೆ ಈ ಮನೆಮದ್ದು ಟ್ರೈ ಮಾಡಬೇಡಿ

ಹಿತ್ತಲ ಗಿಡ ಮದ್ದಲ್ಲ ಎಂಬ ಮಾತಿನಂತೆ ನಾವು ಮನೆಯಲ್ಲೆ ಎಲ್ಲ ಅನಾರೋಗ್ಯಕ್ಕೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಿಕ್ಕಿದೆಲ್ಲವನ್ನು ಅತಿಯಾಗಿ ಸೇವಿಸಿದರೆ , ಅನಾರೋಗ್ಯಕ್ಕೆ ಆಹ್ವಾನ ಕೊಟ್ಟಂತೆ ಆಗುವುದರಲ್ಲಿ ಸಂಶಯವಿಲ್ಲ.ನಾವು ಅನುಸರಿಸುವ ಮನೆ ಮದ್ದುಗಳು ಏಷ್ಟು ಪ್ರಯೋಜನಕಾರಿಯಾಗಿದೆ ಜೊತೆಗೆ ಅದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿಯ ಆಧಾರದ ಮೇಲೆ ಸ್ವಚಿಕಿತ್ಸೆ ಮಾಡಿಕೊಳ್ಳುವುದು ಉತ್ತಮ.

ಚಿಕ್ಕ ಪುಟ್ಟ ಗಾಯಗಳಾದಾಗ ಮನೆ ಮದ್ದು ಮಾಡಬಹುದು ಆದರೆ , ಗಂಭೀರ ಅಪಘಾತಗಳಾದ ಸಂದರ್ಭದಲ್ಲಿ, ಹೃದಯ ಸಂಬಂಧಿ ಕಾಯಿಲೆ , ಕಿಡ್ನಿ ಸಮಸ್ಯೆ ಇದ್ದಾಗ ಮನೆ ಮದ್ದು ಮಾಡಲು ಹೋಗುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತಿ ಅವಶ್ಯಕವಾಗಿದೆ.

ಅಚಾನಕ್ಕಾಗಿ ಕೈ ಸುಡಬಹುದು ಅಥವಾ ಏನೋ ತಾಗಿ ಗಾಯವಾಗಬಹುದು, ಎಲ್ಲಾ ಸಂದರ್ಭದಲ್ಲೂ ಮನೆಮದ್ದು (Home Remedies) ಉಪಯೋಗಿಸಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಸುಟ್ಟ ಗಾಯಗಳಾದಾಗ ಮನೆಮದ್ದು ಮಾಡುವ ಮುನ್ನ ಎಚ್ಚರಿಕೆಯಿಂದಿರುವುದು ಒಳ್ಳೆಯದು.

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆಯನ್ನು ಮಾಡುವುದು ಒಳಿತಾಗಿದ್ದರೂ ಕೂಡ ರೋಗದ ತೀವ್ರತೆಯನ್ನೂ ಕೂಡ ಪರಿಗಣಿಸಬೇಕಾಗುತ್ತದೆ.ಹಾಗಾಗಿ ಮನೆ ಮದ್ದು ಮಾಡುವಾಗ ಜಾಗ್ರತೆ ವಹಿಸುವುದು ಅಗತ್ಯ.
ಹೆಚ್ಚಿನವರು ಸುಟ್ಟಗಾಯಕ್ಕೆ ಬೆಣ್ಣೆ ಲೇಪನವನ್ನು ನೋವು ಕಡಿಮೆ ಮಾಡುವ ಸಲುವಾಗಿ ಮಾಡುತ್ತಾರೆ ಆದರೆ, ಗಾಯ ಗುಣವಾಗುವ ಬದಲು ಹೆಚ್ಚಾಗುತ್ತದೆ. ಆಗ ಆ ಜಾಗಕ್ಕೆ ತಣ್ಣೀರು ಬಳಸಬಹುದು.


ಬಾಯಿ ಹುಣ್ಣುಗಳಿಗೆ ಟೂತ್‌ಪೇಸ್ಟ್ ಹಚ್ಚುವುದರಿಂದ ತೊಂದರೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ. ಟೂತ್‌ಪೇಸ್ಟ್‌ನಲ್ಲಿರುವ ಮೆಂಥಾಲ್ ಪರಿಹಾರವನ್ನು ನೀಡುವ ಬದಲಿಗೆ ಗಾಯವನ್ನು ಉಲ್ಬಣಗೊಳಿಸುತ್ತದೆ. ಹಾಗಾಗಿ, ಬಾಯಿ ಹುಣ್ಣಿಗೆ ಟೂತ್‌ಪೇಸ್ಟ್ ಹಚ್ಚುವುದನ್ನು ನಿಲ್ಲಿಸುವುದು ಉತ್ತಮ.

ದೇಹದ ಯಾವುದೇ ಭಾಗದಲ್ಲಿ ಆಂತರಿಕ ಗಾಯವಾದಾಗ ಹೆಚ್ಚಿನವರು ತಕ್ಷಣ ಮಸಾಜ್ ಮಾಡಲು ಪ್ರಾರಂಭಿಸುವುದುಂಟು .ಆದರೆ ಹೀಗೆ ಮಸಾಜ್ ಮಾಡಿದರೆ ಗಾಯವು ಉಲ್ಬಣಗೊಳ್ಳುವ ಸಾಧ್ಯತೆಯೇ ಹೆಚ್ಚು. ಕೆಲವೊಮ್ಮೆ ಅಂತಹ ಗಾಯದಿಂದ ಮೂಳೆಗಳು ಬಿರುಕು ಬಿಡುವ ಸಂಭವವಿದೆ.

ಈ ಮಸಾಜ್ ಸಮಯದಲ್ಲಿ ಮೂಳೆಗಳು ಮುರಿಯಬಹುದು ಮಸಾಜ್ ಮಾಡುವುದರಿಂದ, ಮುರಿದ ಮೂಳೆಯಲ್ಲಿ ಅಂತರ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಯಾವುದೇ ಪ್ರಥಮ ಚಿಕಿತ್ಸೆ ನೀಡುವ ಮೊದಲು ಸರಿಯಾಗಿ ನೋವಿನ ಬಗ್ಗೆ ಜೊತೆಗೆ ಪರಿಹಾರದ ಬಗ್ಗೆ ತಿಳಿದಿರ ಬೇಕಾಗಿರುವುದು ಅವಶ್ಯ.

Leave A Reply

Your email address will not be published.