ನವರಾತ್ರಿ-ದಸರಾ ಹಬ್ಬದ ಹಿನ್ನೆಲೆ!! ಗೃಹಿಣಿಯರಿಗೆ ಬಂಪರ್ ಆಫರ್-ಭೂರೀ ಭೋಜನಕ್ಕೆ ಇನ್ನಿಲ್ಲ ಕೊರತೆ!!
ಕಳೆದ ನಾಲ್ಕೈದು ತಿಂಗಳಿನಿಂದ ಅಡುಗೆ ಮನೆಯಲ್ಲಿ ದುಸುಗುಟ್ಟುತ್ತಾ, ಸರ್ಕಾರ ಹಾಗೂ ಬೆಲೆ ಏರಿಕೆಯ ಮೇಲೆ ಕೋಪಗೊಳ್ಳುತ್ತಿದ್ದ ಮನೆಯೊಡತಿಯ ಮೊಗದಲ್ಲಿ ತುಸು ನಗು ಬೀರಿದೆ.ಸಂಜೆಯಾಗುತ್ತಲೇ ಚಹಾದೊಂದಿಗೆ ಮನೆಯೊಡತಿಯ ಗರಿ ಗರಿಯಾದ ತಿಂಡಿ ತಿನಿಸುಗಳಳಿಲ್ಲದೆ ಗ್ಲಾಸ್ ನಲ್ಲಿ ಅರ್ಧಕ್ಕರ್ಧ ಉಳಿಯುತ್ತಿದ್ದ ಚಹಾದ ಲೋಟವೂ ಈಗ ಪೂರ್ತಿ ಖಾಲಿಯಾಗಿದ್ದು. ಇದಕ್ಕೆಲ್ಲಾ ಕಾರಣ ಹುಡುಕಹೊರಟಾಗ ತಿಳಿದದ್ದು ಮಾತ್ರ ಅಡುಗೆ ಎಣ್ಣೆಯ ಬೆಲೆ ಇಳಿಕೆಯ ಕ್ರಮ.
ಕಳೆದ ನಾಲ್ಕೈದು ತಿಂಗಳಿನಿಂದ ಏರಿಕೆಯಾಗಿದ್ದ ಅಡುಗೆ ಎಣ್ಣೆಯ ಬೆಲೆ ಇಳಿಕೆ ಕಂಡಿದ್ದು, ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ನಿಜಕ್ಕೂ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಅಡುಗೆ ಎಣ್ಣೆಯ ಬೆಲೆಯು ಪ್ರತೀ ಲೀಟರ್ ಗೆ ಸುಮಾರು 160 ರೂಪಾಯಿ ಏರಿಕೆಯಾಗಿದ್ದು, ಕಳೆದ ಒಂದು ತಿಂಗಳಿನಿಂದ ಇಳಿಕೆಯಾಗುತ್ತಿದ್ದು ಸದ್ಯ ಲೀಟರ್ ಗೆ 90 ರೂಪಾಯಿ ಆಗಿದೆ ಎನ್ನುವುದು ತಿಳಿದುಬಂದಿದೆ.
ಕಳೆದ ಬಾರಿಯೇ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದ್ದು, ಅಡುಗೆ ಎಣ್ಣೆಯ ಸಹತ ಇತರ ದಿನಸಿಗಳ ಬೆಲೆಯೂ ಏರಿಕೆಯಾಗಿತ್ತು. ಎಣ್ಣೆಯ ಬೆಲೆ ಇಳಿಕೆಯಾದ ಕೂಡಲೇ ಗ್ರಾಹಕರಿಗೆ ಸಿಗಲು ಸಾಧ್ಯವಿಲ್ಲ ಎನ್ನುವುದಕ್ಕೆ ತಜ್ಞರು ಹೇಳಿಕೆ ನೀಡಿದ್ದು, ಕಚ್ಚಾ ವಸ್ತುಗಳ ಮೇಲೆ ಹೇರಿರುವ ಬೆಲೆಯನ್ನು ಕನಿಷ್ಠಗೊಳಿಸಿದರೆ ಮುಂದಿನ ಡಿಸೆಂಬರ್ ತಿಂಗಳಿನಿಂದಲೇ ಗ್ರಾಹಕರಿಗೆ ಪ್ರಯೋಜನವಾಗಲಿದೆ ಎಂದರು.
ಕಳೆದ ತಿಂಗಳಿನಿಂದಲೇ ಅಡುಗೆ ಎಣ್ಣೆಯ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಸದ್ಯ ಕಂಪೆನಿಗಳು ಇನ್ನಷ್ಟು ಬೆಲೆ ಕಡಿಮೆಗೊಳಿಸುವ ಸಾಧ್ಯತೆ ಹೆಚ್ಚಿದೆ ಎನ್ನುವುದು ಮೂಲಗಳಿಂದ ತಿಳಿದುಬಂದಿದೆ.