ಪಿಎಫ್ಐ ಬ್ಯಾನ್ ಮಾಡುವಂತೆ ಯು.ಟಿ.ಖಾದರ್ ಕಣ್ಣೀರು ಹಾಕಿದ್ದರು-ನಳಿನ್ ಕುಮಾರ್
ಸೋಷಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಬ್ಯಾನ್ ಮಾಡುವಂತೆ ಶಾಸಕ ಯು.ಟಿ ಖಾದರ್, ನಮ್ಮ ಬಳಿ ಬಂದು ಕಣ್ಣೀರು ಹಾಕಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಚಿಕ್ಕೋಡಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದರು. ಶಾಸಕ ಯು.ಟಿ ಖಾದರ್ ಅವರು ಎಸ್ ಡಿಪಿಐ, ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ನಮ್ಮ ಬಳಿ ಬಂದು ಕಣ್ಣೀರು ಹಾಕಿದ್ದರು. ನನ್ನ ಬಳಿ ಇದಕ್ಕೆ ಸಾಕ್ಷಿಗಳಿವೆ ಎಂದು ಹೇಳಿದ್ದಾರೆ.