ಪಿಎಫ್‌ಐ ಬ್ಯಾನ್ ಹಿನ್ನೆಲೆ : ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರಕ್ಕೆ ಪ್ರವೀಣ್ ಸೂದ್ ಸೂಚನೆ
ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳನ್ನು ದೇಶದಲ್ಲಿ ಐದು ವರ್ಷಗಳವರೆಗೆ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸುವಂತೆ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ಕೊಟ್ಟಿದ್ದಾರೆ. ಎಲ್ಲಿಯೂ ಶಾಂತಿ ಭಂಗ ನಡೆಯದಂತೆ ನೋಡಿಕೊಳ್ಳಬೇಕು, ಕೂಡಲೇ ಮುಸ್ಲಿಂ ಮುಖಂಡರನ್ನಯ ಭೇಟಿ ಮಾಡಿ ಶಾಂತಿಸಭೆ ನಡೆಸುವಂತೆ ಸೂಚಿಸಿದರು.
ರಾಜ್ಯದ ಎಲ್ಲಾ ಕಡೆ ಶಾಂತಿ ಕದಡುವವರನ್ನು ಕೂಡಲೇ ವಶಕ್ಕೆ ಪಡೆಯುವಂತೆ ಆದೇಶಿಸಲಾಗಿದೆ. ಕೇಂದ್ರ ಸರ್ಕಾರದಿಂದ ಈಗಾಗಲೇ ಗಸ್ತು ಹೆಚ್ಚಿಸುವಂತೆ ಆದೇಶ ಬಂದಿದೆ, ರಾಜ್ಯ ಸರ್ಕಾರದಿಂದಲೂ ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಪಿಎಫ್‌ಐ ಬ್ಯಾನ್‌ನಿಂದ ಪ್ರತಿಭಟನೆ, ಅಶಾಂತಿ ಎಬ್ಬಿಸುವ ಕೃತ್ಯಗಳು ನಡೆಯುತ್ತವೆ. ಅವುಗಳಿಗೆ ಅವಕಾಶ ಕೊಡದಂತೆ ಈ ಕೂಡಲೇ ಬಿಗಿ ಭದ್ರತೆ ಕೈಗೊಂಡು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿ ಎಂದರು.
ಇನ್ನೂ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಾದ ಕೆ.ಜೆ.ಹಳ್ಳಿ, ಡಿ.ಜೆಹಳ್ಳಿ, ಶಿವಾಜಿನಗರ, ಟ್ಯಾನರಿ ರಸ್ತೆ, ಸೇರದಂತೆ ಮುಸ್ಲಿಂ ಸಮುದಾಯ ಹೆಚ್ಚಿರುವ ಸ್ಥಳಗಳಲಿ ಹೆಚ್ಚಿನ ಗಸ್ತು ನಿಯೋಜಿಸಿ. ಅಲ್ಲಿನ ಮುಸ್ಲಿಂ ಮುಖಂಡರೊಂದಿಗೆ ಭೇಟಿಯಾಗಿ ಶಾಂತಿ ಸಭೆ ನಡೆಸಲು ಸೂಚಿಸಲಾಗಿದೆ.