‘PASSPORT’ ಪಡೆಯುವ ನಿಯಮದಲ್ಲಿ ಈ ಬದಲಾವಣೆ | ಇಂದಿನಿಂದಲೇ ಜಾರಿಯಾಗಿದೆ ಸುಲಭ ವಿಧಾನ!
ಪಾಸ್ ಪೋರ್ಟ್ ಮಾಡಿಸಬೇಕಾದರೆ ಪಡಬೇಕಾದ ಕಷ್ಟ ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಆ ಕಚೇರಿ ಈ ಕಚೇರಿ ಎಂದು ಅಲೆಯುತ್ತಲೇ ಇರಬೇಕಾಗುತ್ತದೆ. ಈ ಹಿತದೃಷ್ಟಿಯಿಂದ ಸರ್ಕಾರ ಈಗಾಗಲೇ ಪಾಸ್ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸುಲಭಗೊಳಿಸಿದೆ. ಇದೀಗ ಮತ್ತೆ ಪಾಸ್ಪೋರ್ಟ್ ಪಡೆಯುವ ನಿಯಮದಲ್ಲಿ ಬದಲಾವಣೆ ಜಾರಿಗೊಳಿಸಿದೆ.
ಹೌದು. ಹೊಸ ನಿಯಮ ಸೆಪ್ಟೆಂಬರ್ 28ರ ಇಂದಿನಿಂದಲೇ ಜಾರಿಗೆ ಬರುತ್ತಿದ್ದು, ಪಾಸ್ಪೋರ್ಟ್ ಪಡೆಯಲು ಅನಗತ್ಯವಾಗಿ ಆಗುತ್ತಿದ್ದ ವಿಳಂಬ ಇದರಿಂದಾಗಿ ತಪ್ಪಲಿದೆ. ಪಾಸ್ಪೋರ್ಟ್ ಮಾಡಿಸಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಪೊಲೀಸ್ ವೆರಿಫಿಕೇಶನ್. ಇದನ್ನು ಪೂರ್ಣಗೊಳಿಸಲು ಠಾಣೆಗೆ ಅಲೆಯ ಬೇಕಾಗಿತ್ತು. ಗ್ರಾಹಕರಿಗೆ ಸುಲಭವಾಗಲು ಇದೀಗ ಈ ನಿಯಮದಲ್ಲಿ ಬದಲಾವಣೆ ಜಾರಿಗೊಳಿಸಿದೆ.
ಇನ್ನು ಮುಂದೆ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಯನ್ನು ಆನ್ಲೈನ್ ಮೂಲಕವೇ ಪೂರ್ಣಗೊಳಿಸಬಹುದಾಗಿದೆ. ಈ ಮೊದಲು ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ ವೇಳೆ ಅರ್ಜಿದಾರನ ಠಾಣೆ ವ್ಯಾಪ್ತಿಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರ ಹಿನ್ನೆಲೆ ಅವರ ವಿರುದ್ಧ ಯಾವುದಾದರೂ ಪ್ರಕರಣ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದರು. ಇದರಿಂದಾಗಿ ಬಹಳಷ್ಟು ವಿಳಂಬವಾಗುತ್ತಿತ್ತು. ಇದೀಗ ಆನ್ಲೈನ್ ಮೂಲಕ ಪೊಲೀಸ್ ವೆರಿಫಿಕೇಶನ್ ಅವಕಾಶವನ್ನು ವಿದೇಶಾಂಗ ಸಚಿವಾಲಯ ಕಲ್ಪಿಸಿಕೊಟ್ಟಿದೆ.
ಅಲ್ಲದೆ, ಇದಕ್ಕೆ ಅಂಚೆ ಕಚೇರಿಯ ಪಾಸ್ಪೋರ್ಟ್ ಸೇವಾ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ಸಾರ್ವಜನಿಕರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ಪಾಸ್ಪೋರ್ಟ್ ತಲೆ ಬಿಸಿಯನ್ನು ಕಡಿಮೆ ಮಾಡಿದೆ.