ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ | ವೇತನದಲ್ಲಿ ಡಿಎ ಶೇ. 25 ರಿಂದ 30ರಷ್ಟು ವಿಲೀನವಾಗುವ ಸಾಧ್ಯತೆ!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ನವರಾತ್ರಿ ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದ್ದು, ವೇತನ ಪರಿಷ್ಕರಣೆ ಸಂಬಂಧಪಟ್ಟ ಸಮಿತಿ ರಚಿಸಲು ರಾಜ್ಯ ಸರ್ಕಾರ  ಸಿದ್ಧತೆ ಮಾಡಿಕೊಂಡಿದೆ.

 

ವೇತನ ಪರಿಷ್ಕರಣೆ ಸಮಿತಿ ದಸರಾ ನಂತರ ರಚಿಸಲಿದ್ದು, ಡಿಸೆಂಬರ್ ಅಂತ್ಯಕ್ಕೆ ವರದಿ ಮಂಡನೆಯಾಗಲಿದೆ. ಹೊಸ ವರ್ಷದಲ್ಲಿ ಪರಿಷ್ಕೃತ ವೇತನ ಜಾರಿಯಾಗುವ ಸಾಧ್ಯತೆಯಿದ್ದು, ಮೂಲ ವೇತನದಲ್ಲಿ ಡಿಎ ಶೇ. 25 ರಿಂದ 30ರಷ್ಟು ವಿಲೀನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಜ್ಯದಲ್ಲಿ ಆರನೇ ವೇತನ ಆಯೋಗದ ಶಿಫಾರಸಿನ ಅನ್ವಯ ಸರ್ಕಾರಿ ನೌಕರರಿಗೆ ವೇತನ ನೀಡುತ್ತಿದ್ದು, 7ನೇ ವೇತನ ಆಯೋಗ ರಚನೆಗೆ ಮತ್ತು ಕೇಂದ್ರ ಸರ್ಕಾರ ನೌಕರರಿಗೆ ಸಮನಾದ ವೇತನ, ಭತ್ಯೆ ನೀಡುವಂತೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಸಮಿತಿ ರಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.

ವೇತನ ಪರಿಷ್ಕರಣೆಯಿಂದ ಸುಮಾರು 6 ಲಕ್ಷ ಸರ್ಕಾರಿ ನೌಕರರು, 3 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರಗಳ ಸಿಬ್ಬಂದಿ ಹಾಗೂ 4.50 ಲಕ್ಷ ಪಿಂಚಣಿದಾರಾರಿಗೆ ಅನುಕೂಲವಾಗಲಿದೆ. 17000 ಮೂಲವೇತನ ಡಿಎ ವಿಲೀನವಾದಾಗ 21 ಸಾವಿರ ರೂ.ಗೆ ಏರಿಕೆಯಾಗಲಿದೆ. ಈ ಮೂಲಕ ಹಬ್ಬದ ಸಂದರ್ಭದಲ್ಲಿ ಉದ್ಯೋಗಿಗಳಿಗೆ ಸಿಹಿಸುದ್ದಿ ದೊರಕಿದೆ.

Leave A Reply

Your email address will not be published.