ಗ್ಯಾಸ್ಟ್ರಿಕ್ ಗೆ ಅಗ್ಗದ ಮದ್ದು: ತೆಂಗಿನಕಾಯಿ ಜುಟ್ಟು ಇದ್ದರೆ ಸಾಕು
ಗ್ಯಾಸ್ಟ್ರಿಕ್ಇ ಲ್ಲದ ಮನುಷ್ಯ ಇಲ್ಲ. ಯಾಕಂದರೆ ಹೊಟ್ಟೆಗೆ ಸಮಯಕ್ಕೆ ಸರಿಯಾಗಿ ಊಟ ಮಾಡಿಲ್ಲ ಅಂದರು ಗ್ಯಾಸ್ಟ್ರಿಕ್ ಬರೋದು ಕಾಮನ್. ಊಟ ಮಾಡಿದರು ಸಹ ಕೆಲವೊಂದು ಆಹಾರ ಪದಾರ್ಥದಿಂದಲೂ ಗ್ಯಾಸ್ಟ್ರಿಕ್ ಬರುತ್ತದೆ. ಹೀಗೆ ಗ್ಯಾಸ್ಟ್ರಿಕ್ ಕೆಲವರನ್ನು ತುಂಬಾ ಕಾಡುತ್ತೆ. ಹಿರಿಯರಿಗಂತೂ ಈ ಗ್ಯಾಸ್ಟ್ರಿಕ್ ನಿಂದ ಮುಕ್ತಿ ಇಲ್ಲ ಅನ್ನುವಷ್ಟು ಹಿಂಸೆ ಅನಿಸುತ್ತೆ.
ಯಾವ ಖಾಯಿಲೆ ಆಗಲಿ ತೊಂದರೆ ಆಗಲಿ ಎಲ್ಲದಕ್ಕೂ ಪರಿಹಾರ ಅನ್ನೋದು ಇದ್ದೇ ಇದೆ. ಅದರಂತೆ, ಗ್ಯಾಸ್ಟ್ರಿಕ್ ಗೆ ಹಲವಾರು ರೀತಿಯ ಮದ್ದು ಇದೆ. ಆದ್ರೆ ಇಲ್ಲಿ ಅಗ್ಗವಾಗಿ ನಾವು ಮನೆಯಲ್ಲೇ ತಯಾರು ಮಾಡಿ ಬಳಸಬಹುದು. ಮನೆಮದ್ದಿನಿಂದ ಖರ್ಚು ಉಳಿಯುತ್ತೆ ಹಾಗೂ ಸೈಡ್ ಎಫೆಕ್ಟ್ ಆಗೋದನ್ನು ಸಹ ತಪ್ಪಿಸಬಹುದು.
ಹೌದು. ಗ್ಯಾಸ್ಟ್ರಿಕ್ ಗೆ ಸುಲಭ ಮನೆ ಮದ್ದು ತೆಂಗಿನ ಕಾಯಿ ಜುಟ್ಟು. ತೆಂಗಿನ ಕಾಯಿಜುಟ್ಟಿನಲ್ಲಿ ಕಷಾಯ ಮಾಡಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುತ್ತದೆ. ಕಾಯಿಜುಟ್ಟನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಲೋಟದಲ್ಲಿ ಶೋಧಿಸಬೇಕು. ದಿನಕ್ಕೆ ಮೂರ್ನಾಲ್ಕು ಭಾರಿ ಸ್ಪೂನ್ ನಲ್ಲಿ ಅದನ್ನು ಕುಡಿಯುತ್ತಾ ಬಂದರೆ ನಿಮ್ಮ ಗ್ಯಾಸ್ಟಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ನಾವು ದಿನ ನಿತ್ಯದ ಆಹಾರ ಪದಾರ್ಥಗಳಲ್ಲಿ ತೆಂಗಿನ ಕಾಯಿಯನ್ನು ಹೆಚ್ಚಾಗಿ ಬಳಸುತ್ತೇವೆ. ತೆಂಗಿನ ಕಾಯಿಯ ಉಪಯೋಗ ಒಂದಲ್ಲ ಎರಡಲ್ಲ ಹಾಗೆಯೇ ತೆಂಗಿನ ಕಾಯಿಯ ಜುಟ್ಟನು ಸಹ ಎಸೆಯಬೇಡಿ. ಹೀಗೆ ಎಸೆಯುವ ತೆಂಗಿನಕಾಯಿ ಜುಟ್ಟಿನಿಂದ ಗ್ಯಾಸ್ಟ್ರಿಕ್ಗೆ ಪರಿಹಾರ ಇದೆ. ಅದರ ಜುಟ್ಟಿನಲ್ಲಿ ಔಷದಿಯ ಗುಣ ಇರುತ್ತದೆ ಎಂಬುದನ್ನೂ ಯಾರು ಕೂಡ ಊಹೆ ಮಾಡಿರುವುದಿಲ್ಲ. ಇದು ನಂಬಲಾಗದ ವಿಷಯವಾದರು ಇದು ಸತ್ಯ.