PM Kisan : ವಿಜಯದಶಮಿಗೆ ಗುಡ್ ನ್ಯೂಸ್ | ರೈತರ ಖಾತೆಗೆ ರೂ.2000 ಸೇರುವ ಸಾಧ್ಯತೆ
ರೈತರ ಆರ್ಥಿಕ ಸಹಾಯಕ್ಕಾಗಿ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ( PM Kisan Samman Nidhi Yojana) ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ನೀಡುತ್ತಿದೆ. ಈ ಹಣವನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂ. ಕಂತುಗಳಲ್ಲಿ ರೈತರ ( Farmer) ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಇದುವರೆಗೆ ಈ ಯೋಜನೆಯ 11 ಕಂತುಗಳು ರೈತರ ಖಾತೆಗೆ ಜಮಾ ಮಾಡಲಾಗಿದೆ.
ದಸರಾ ಹಬ್ಬದ ನವರಾತ್ರಿಯ ವೇಳೆಗೆ ಕಿಸಾನ್ ಸಮ್ಮಾನ್ ಯೋಜನೆಯ 12 ನೇ ಕಂತಿನ ಹಣ ರೈತರ ಕೈ ಸೇರುವ ಸಾಧ್ಯತೆ ಇದೆ. ಈ ಮೂಲಕ ಕೇಂದ್ರ ಸರ್ಕಾರ ದಶಮಿಯ ಪ್ರಯುಕ್ತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡುವ ನಿರೀಕ್ಷೆ ಹೆಚ್ಚಿದ್ದು, 11 ಕೋಟಿಗೂ ಹೆಚ್ಚು ರೈತರ ಖಾತೆಗೆ ಕೊನೆಯ ಕಂತಿನ 2000 ರೂ. ರವಾನೆಯಾಗುವ ಸಾಧ್ಯತೆಯೂ ದಟ್ಟವಾಗಿದೆ ಎಂದು ವರದಿಯಾಗಿದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಡೆಯಲು ಇ-ಕೆವೈಸಿ ( E Kyc) ಪೂರ್ಣಗೊಳಿಸಬೇಕಾದ ಅಂತಿಮ ದಿನಾಂಕವನ್ನು ಕೇಂದ್ರ ಸರಕಾರ ಮುಂದೂಡಿಕೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಯೋಜನೆಯ ಲಾಭ ಪಡೆಯಲು ನಕಲಿ ದಾಖಲೆಗಳನ್ನು ನೀಡಿ ಸರಕಾರಕ್ಕೆ ಮೋಸ ಮಾಡುವ ಪ್ರಯತ್ನವನ್ನು ತಡೆಯುವ ನಿಟ್ಟಿನಲ್ಲಿ, ಫಲಾನುಭವಿಗಳ ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ನಡೆಸುತ್ತಿರುವುದರಿಂದ ಹಣ ಸಂದಾಯ ಕಾರ್ಯ ವಿಳಂಬವಾಗಿದೆ.
ಈಗಾಗಲೇ ಸರ್ಕಾರ 11ಕಂತಿನಲ್ಲಿ 2000ರೂ. ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದ್ದು, ಕೊನೆಯ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ.
ಫಲಾನುಭವಿ ಪಟ್ಟಿಯಲ್ಲಿ ಹೆಸರನ್ನು ಪರಿಶೀಲಿಸಲು, ‘ಪಿಎಂ ಕಿಸಾನ್’ ವೆಬ್ಸೈಟ್ಗೆ ಭೇಟಿ ನೀಡಿ, ವೆಬ್ಸೈಟ್ ಮುಖಪುಟದ ‘ಫಾರ್ಮರ್ಸ್ ಕಾರ್ನರ್’ ವಿಭಾಗದಲ್ಲಿ ‘ಫಲಾನುಭವಿಗಳ ಪಟ್ಟಿ’ ಇದ್ದು, ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ರಾಜ್ಯಗಳು, ಜಿಲ್ಲೆ, ಉಪ-ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಯ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಮಾಹಿತಿ ಆಯ್ಕೆ ಮಾಡಿ ಕೊನೆಗೆ ವರದಿ (Get Report) ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಹೆಸರು ಹುಡುಕಬಹುದು. ಅಲ್ಲಿ ನಿಮ್ಮ ಹೆಸರಿದ್ದರೆ ಆದಷ್ಟು ಶೀಘ್ರವೇ ನಿಮ್ಮ ಖಾತೆಗೆ ಕೇಂದ್ರದಿಂದ 12ನೇ ಕಂತಿನ 2,000ರೂ.ಹಣ ಜಮೆ ಆಗಲಿದೆ.