ಹಲ್ಲು ಹಳದಿ ಆಗಿದ್ದರೆ ಈ ಮನೆಮದ್ದು ಬಳಸಿ | ತ್ವರಿತ ಪರಿಣಾಮ ನೀವೇ ನೋಡಿ
ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಹರಸಾಹಸ ಪಡುವುದು ಸಾಮಾನ್ಯ. ಆದರೆ, ತ್ವಚೆ, ಮುಖ,ಹಲ್ಲಿನ, ಕೂದಲಿನ ಸೌಂದರ್ಯದ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಸಾಲದು.ನಗುವ ಸುಂದರ ವದನದ ಜೊತೆಗೆ ಹಲ್ಲುಗಳು ಕಾಣುವಾಗ ಅದರ ಆರೋಗ್ಯವನ್ನೂ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.
ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದಾಗಿ, ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಹಲ್ಲುಗಳಲ್ಲಿ ಪ್ಲೇಕ್, ಹಳದಿ, ನೋವು, ಕೊಳೆತ, ರಕ್ತಸ್ರಾವ ಅಥವಾ ದುರ್ವಾಸನೆಯಂತಹ ಸಮಸ್ಯೆಗಳನ್ನು ಅನೇಕರು ಎದುರಿಸುತ್ತಿದ್ದಾರೆ. ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಜನರು ಗಂಭೀರವಾಗಿ ಪರಿಗಣಿಸದಿರುವುದು ಕಳವಳಕಾರಿ ಸಂಗತಿಯಾಗಿದೆ.
ಹಲ್ಲುಗಳ ಮೇಲ್ಭಾಗದಲ್ಲಿ ಎನಾಮಲ್ ಎಂಬ ಪದರವಿದ್ದು, ಗಟ್ಟಿಯಾದ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದಾಗ ಆಹಾರ ಪದಾರ್ಥಗಳಿಂದ ನಿರಂತರವಾಗಿ ಸಣ್ಣ ಪ್ರಮಾಣದಲ್ಲಿ ಬೀಳುವ ಒತ್ತಡದ ಕಾರಣ ಕ್ರಮೇಣವಾಗಿ ಎನಾಮಲ್ ಪದರ ಹಾನಿಯಾಗಿ ಹಲ್ಲುಗಳ ಆರೋಗ್ಯವನ್ನು ಹಾಳು ಮಾಡುತ್ತದೆ. ಹಲ್ಲು ಹಳದಿಯಾಗುವುದು ಪ್ರತಿಯೊಬ್ಬರ ಸಮಸ್ಯೆಯಾಗಿದ್ದು, ಆದರೆ ಅದಕ್ಕೆ ರಾಸಾಯನಿಕ ತುಂಬಿರುವ ವಸ್ತುಗಳನ್ನು ಬಳಕೆ ಮಾಡುವ ಬದಲು, ನೈಸರ್ಗಿಕ ವಿಧಾನವನ್ನು ಅನುಸರಿಸುವುದು ಉತ್ತಮ.
ಸ್ಟ್ರಾಬೇರಿಯಿಂದ ಹಲ್ಲನ್ನು 3 ನಿಮಿಷ ಮಸಾಜ್ ಮಾಡಿ, 5 ನಿಮಿಷ ಹಾಗೆ ಬಿಟ್ಟು ನಂತರ ಬೆರಳಿಂದ ಹಲ್ಲುಜ್ಜಬೇಕು. ಹೀಗೆ ಮಾಡುವುದರಿಂದ ಹಲ್ಲಿನ ಮೇಲಿರುವ ಹಳದಿ ಕಲೆ ಮಾಯವಾಗುತ್ತದೆ. ಬೇಕಿಂಗ್ ಸೋಡಾವು ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದ್ದು ಹಲ್ಲುಗಳನ್ನು ಬಿಳುಪುಗೊಳಿಸುವಲ್ಲಿ ಸಹಕಾರಿಯಾಗಿದೆ.ಇದರಲ್ಲಿರುವ ಅಂಶಗಳು ಹಲ್ಲುಗಳ ಹಳದಿ ಕಲೆಯನ್ನು ಹೋಗಲಾಡಿಸಿ,ಬಿಳಿ ಬಣ್ಣವನ್ನು ನೀಡುತ್ತದೆ. ಹಾಗಾಗಿ ಪ್ರತಿದಿನ ಅಡುಗೆ ಸೋಡಾ ಬಳಸಿ ಬ್ರಷ್ ಮಾಡುವುದು ಉತ್ತಮ.
ಹಲ್ಲುಗಳನ್ನು ಸ್ವಚ್ಛಗೊಳಿಸಲು ನಿಂಬೆ ರಸವು ಸುಲಭವಾದ ಆಯ್ಕೆಯಾಗಿದೆ. ನಿಂಬೆಯು ಸಿಟ್ರಿಕ್ ಆಮ್ಲವನ್ನು ಹೊಂದಿದ್ದು, ಇದು ಹಳದಿ ಪ್ಲೇಕ್ ಅನ್ನು ಕರಗಿಸುತ್ತದೆ. ಜೊತೆಗೆ ಹಲ್ಲುಗಳನ್ನು ಸ್ವಲ್ಪ ಬಿಳುಪುಗೊಳಿಸುತ್ತದೆ. ಹಲ್ಲುಜ್ಜುವ ಬ್ರಷ್ ಅನ್ನು ತಾಜಾ ನಿಂಬೆ ರಸದಲ್ಲಿ ಅದ್ದಿ ಮತ್ತು ಅದನ್ನು ಹಲ್ಲುಗಳ ಮೇಲೆ ನಿಧಾನವಾಗಿ ಉಜ್ಜಿಕೊಳ್ಳಬೇಕು. ಅದನ್ನು ತೊಳೆಯುವ ಮೊದಲು ಒಂದು ನಿಮಿಷ ಬಿಡಬೇಕು. ಆದರೆ ಅತಿಯಾಗಿ ಬಳಕೆ ಮಾಡಿದರೂ ಕೂಡ ತೊಂದರೆಯಾಗುತ್ತದೆ.
ಲವಂಗವನ್ನು ಬಹಳ ಹಿಂದಿನಿಂದಲೂ ಹಲ್ಲು ನೋವಿಗೆ ಮನೆಮದ್ದಾಗಿ ಬಳಸಲಾಗುತ್ತಿದೆ. ಇದು ಬಾಯಿಯಲ್ಲಿರುವ ಸೂಕ್ಷ್ಮಜೀವಿಗಳ ವಿರುದ್ಧವೂ ಹೋರಾಡುತ್ತದೆ. ಒಂದು ಲವಂಗವನ್ನು ರುಬ್ಬಿಕೊಳ್ಳಬಹುದು. ಅಥವಾ ಲವಂಗದ ಪೌಡರ್ ಅನ್ನು ಬಳಸಬಹುದು. ಅದಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನು ಸೇರಿಸಿ ಪೇಸ್ಟ್ ರೀತಿಯಲ್ಲಿ ತಯಾರಿಸಿ ಕಲೆ ಇರುವ ಜಾಗಗಳಿಗೆ ಹಚ್ಚಿದರೆ, ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಲು ಮತ್ತು ಬ್ಯಾಕ್ಟೀರಿಯಾವನ್ನು ಕೊಲ್ಲಲು ಲವಂಗವನ್ನು ನಿಯಮಿತವಾಗಿ ಬಳಸಬಹುದು.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬನ್ನು ತಿನ್ನಬಹುದು. ಇದರಿಂದ ಹಲ್ಲು ಬಿಳಿಯಾಗಿರುತ್ತದೆ. ಟೊಮ್ಯಾಟೊ ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು. ಟೊಮೆಟೋವನ್ನು ಕತ್ತರಿಸಿ ಅದರ ತಿರುಳನ್ನು ಹಲ್ಲುಗಳ ಮೇಲೆ ಹಾಕಿ. 5 ನಿಮಿಷಗಳ ಕಾಲ ಬಿಟ್ಟು ನಂತರ ಬಾಯಿಯನ್ನು ತೊಳೆಯಬೇಕು.
ಆರೇಂಜ್ ಸಿಪ್ಪೆಯಿಂದ ಹಲ್ಲುಜ್ಜಬೇಕು. 5 ನಿಮಿಷ ಬಿಟ್ಟು ಬಾಯಿ ತೊಳೆಯಬೇಕು. ಹೀಗೆ ಮಾಡುವುದರಿಂದ ಹಲ್ಲು ಬಿಳಿಯಾಗುತ್ತದೆ. ಪ್ರತಿದಿನ ನೀವು ಬೆಳಿಗ್ಗೆ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಚಿಟಿಕೆ ಉಪ್ಪು ಹಾಕಿ, ಅದರಿಂದ 10 ಬಾರಿ ಬಾಯಿ ಮುಕ್ಕಳಿಸಬೇಕು. ಹೀಗೆ ಮಾಡುವುದರಿಂದ ಹಲ್ಲಿನ ಆರೋಗ್ಯ ಉತ್ತಮವಾಗಿರುತ್ತದೆ.
3 ಸ್ಪೂನ್ ತೆಂಗಿನ ಎಣ್ಣೆ ತೆಗೆದುಕೊಂಡು, ಅದನ್ನು ಬಾಯಲ್ಲಿ ಹಾಕಿ, ಬಾಯಿ ಮುಕ್ಕಳಿಸಬೇಕು. ಹೀಗೆ 5 ನಿಮಿಷ ಬಾಯಲ್ಲೇ ತೆಂಗಿನ ಎಣ್ಣೆಯನ್ನು ಅಲ್ಲಾಡಿಸುತ್ತಿದ್ದರೆ, ಹಲ್ಲು ಬಿಳಿಯಾಗಿರುತ್ತದೆ. ಆದರೆ, ಅಪ್ಪಿ ತಪ್ಪಿಯೂ ಎಣ್ಣೆಯನ್ನು ಕುಡಿದುಬಿಡಬೇಡಿ. ಹಾಗೆ ಮಾಡಿದ್ದಲ್ಲಿ ಕೆಮ್ಮು ಶುರುವಾಗುತ್ತದೆ.
ಎಳ್ಳು ಬೀಜದ ಎಣ್ಣೆಯು ಉತ್ಕರ್ಷಣ ನಿರೋಧಕ, ನಿರ್ವೀಶಿಕರಣ ಮತ್ತು ಪ್ರತಿಜೀವಕ ಗುಣಲಕ್ಷಣವನ್ನು ಪ್ರದರ್ಶಿಸುವ ಜೈವಿಕ ಸಕ್ರಿಯ ಸಂಯುಕ್ತಗಳಿಂದ ಸಮೃದ್ಧವಾಗಿದೆ. ಸಾಂಪ್ರದಾಯಿಕವಾಗಿ ಇದನ್ನು ಹಲ್ಲುಗಳ ಆರೋಗ್ಯ ರಕ್ಷಣೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಹಲ್ಲುಗಳಲ್ಲಿ ನಿರ್ಮಾಣವಾಗುವ ಕಂದು ಬಣ್ಣವನ್ನು ತಡೆಯಲು ಸಹಕಾರಿಯಾಗಿದೆ. ವಸಡಿನ ಗಾಯದ ನಿವಾರಣೆಗೂ ಕೂಡ ಇದು ನೆರವು ನೀಡುತ್ತದೆ. ಮೇಲೆ ತಿಳಿಸಿದ ಸರಳ ವಿಧಾನಗಳನ್ನು ಅನುಸರಿಸಿದರೆ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದನ್ನು ತಪ್ಪಿಸಬಹುದು.
Wow, superb weblog layout! How long have you ever been running a blog for?
you made blogging look easy. The full look of your web site is wonderful, let alone the content!
You can see similar here sklep internetowy
Ich stehe total auf manner die wissen was sie wollen and free online live adult webcams auf geile gesprache! Wenn du auf junge curvy blondienen mit gro?en Brusten stehst bist du bei mir genau richtig.