ಕಟ್ಟಡ ಕಾರ್ಮಿಕರೇ ನಿಮಗೊಂದು ಗುಡ್ ನ್ಯೂಸ್ | ಇನ್ನು ಮುಂದೆ ಉಚಿತ ಬಸ್ ಪಾಸ್ ಸೌಲಭ್ಯ
ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮಹಾ ನಗರ ಸಾರಿಗೆ ಬಸ್ಗಳಲ್ಲಿ ಕಲ್ಪಿಸಲಾಗಿದ್ದ ರಿಯಾಯಿತಿ ಬಸ್ಪಾಸ್ ಸೌಲಭ್ಯ ಇದೀಗ ರಾಜ್ಯಾದ್ಯಂತ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿದ್ದು ಇ ಆಡಳಿತ ಅಭಿವೃದ್ಧಿಪಡಿಸಿರುವ ತಂತ್ರಾಂಶ ಮೂಲಕ ಬಸ್ಪಾಸ್ ವಿತರಣೆ ಆಗಲಿದೆ.
ರಾಜ್ಯ ರಸ್ತೆ ಸಾರಿಗೆ ನಿಗಮ ಹೊರಡಿಸಿರುವ ಸುತ್ತೋಲೆ ಅನ್ವಯ ನೋಂದಾಯಿತ ಅರ್ಹ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರು ಬಸ್ಪಾಸ್ ಪಡೆಯಲು ಬೆಂಗಳೂರು-ಒನ್, ಕರ್ನಾಟಕ ಒನ್ ಹಾಗೂ ಗ್ರಾಮ-ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಿ ಸ್ಮಾರ್ಟ್ ಕಾರ್ಡ್ ಮಾದರಿಯ ಬಸ್ಪಾಸ್ಗಳನ್ನು ಪಡೆಯಬಹುದಾಗಿದೆ.
ನೋಂದಾಯಿತ ಕಾರ್ಮಿಕರು ಯಾವುದೇ ಜಿಲ್ಲೆಯಲ್ಲಿ ನೋಂದಣಿ ಆಗಿದ್ದರೂ ಅವರು ಇಚ್ಛಿಸುವ ಪ್ರಾರಂಭಿಕ ಸ್ಥಳದಿಂದ 7 ಹಂತಗಳ ಒಟ್ಟು (ಗರಿಷ್ಠ 45 ಕಿ.ಮೀ) ಉಚಿತವಾಗಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ಮಹಿಳಾ ಸಿಬ್ಬಂದಿಗಳಿಗೆ ಉಚಿತ ಬಸ್ ಪಾಸ್ ಕೊಡಿಸಲು ಗಾರ್ಮೆಂಟ್ಸ್ ನಿರ್ಲಕ್ಷ್ಯ ಬಸ್ ಪ್ರಯಾಣ ಉಚಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಹೋದರ ಸಂಸ್ಥೆಗಳಾದ ವಾಕರಸಾ ಸಂಸ್ಥೆ, ಕಕರಸಾ ನಿಗಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಾಸ ಇರುವ
ಕಟ್ಟಡ ಕಾರ್ಮಿಕರು ಉಚಿತ ಬಸ್ಪಾಸ್ ಪ್ರಯಾಣವನ್ನು ಕೇವಲ ನಗರ, ಸಾಮಾನ್ಯ ಹಾಗು ವೇಗದೂತ ಬಸ್ಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪಾಸ್ ಅನ್ನು ಮೂರು ತಿಂಗಳಗೊಮ್ಮೆ ಕಾರ್ಮಿಕರು ನವೀಕರಿಸಿಕೊಳ್ಳುವುದು ಕಡ್ಡಾಯ. ಮರು ಅವಧಿಗೆ ಹೊಸದಾಗಿ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮೂಲಕ ಪಾಸ್ ಪಡೆಯಲು ಅವಕಾಶ ಕಲ್ಪಿಸಿದೆ.
ಪ್ರಯಾಣಕ್ಕೆ 45 ಕಿಮೀ ನಿಗದಿ:
ಬಸ್ ಪ್ರಯಾಣ ಗರಿಷ್ಠ 45 ಕಿ.ಮೀ ಮಿರಿದರೆ ಕಾರ್ಮಿಕರು ಕಡ್ಡಾಯವಾಗಿ ಟಿಕೆಟ್ ಖರೀದಿಸಿ ಪ್ರಯಾಣಿಸಬೇಕಿದೆ.ಕಾರ್ಮಿಕರ ಉಚಿತ ಬಸ್ಪಾಸ್ ವಿತರಣೆ, ನಿರ್ವಹಣೆ ಹಾಗೂ ಪಾಸಿನ ನವೀಕರಣ ಕೆಲಸವನ್ನು ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯೆ ನಿರ್ವಹಿಸಲಿದೆ. ಒಮ್ಮೆ ಕಾರ್ಮಿಕರು ಬಸ್ಪಾಸ್ ಕಳೆದುಕೊಂಡರೆ ಕರ್ನಾಟಕ ಒನ್ಗೆ ತೆರಳಿ ಮನವಿ ಸಲ್ಲಿಸಿದರೆ ಸ್ಮಾರ್ಚ್ಕಾರ್ಡ್ನ ಮುದ್ರಣ ವೆಚ್ಚ ಪಡೆದು ಕಾರ್ಡ್ ವಿತರಿಸಲಿದೆ.