ಕಾರು ಅಪಘಾತ : ಜಗಳೂರು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿದೇವೇಂದ್ರಪ್ಪ ಗಾಯ

Share the Article

ಜಗಳೂರು: ಕಾರು ಅಪಘಾತದಲ್ಲಿ ಕಾಂಗ್ರೆಸ್‌ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾದ ಘಟನೆ ಶನಿವಾರ ಸಂಜೆ ತಾಲೂಕಿನ ವ್ಯಾಸಗೊಂಡನಹಳ್ಳಿ ಸಮೀಪ ನಡೆದಿದೆ.

ದಾವಣಗೆರೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗಳೂರಿಗೆ ಬರುವ ವೇಳೆ ತಾಲೂಕಿನ ಮದಗಿನಕೆರೆ ಹಾಗೂ ವ್ಯಾಸಗೊಂಡನಹಳ್ಳಿ ಮದ್ಯೆ ಗೂಡ್ಸ್‌ ವಾಹನ ಹಾಗೂ ಇನೋವೋ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮುಂಭಾಗದಲ್ಲಿ ಕೂತಿದ್ದ ದೇವೇಂದ್ರಪ್ಪ ಅವರಿಗೆ ತಲೆಗೆ ಬಲವಾದ ಹೊಡೆತ ಬಿದ್ದು ತುಂಬ ರಕ್ತಸ್ರಾವವಾಗಿದೆ.

ಕೂಡಲೇ ಬೇರೊಂದು ಕಾರಿನಲ್ಲಿ ಜಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಖಾಸಗಿ ಆಸ್ಪತ್ರೆಗೆ ಕಳಿಸಲಾಗಿದೆ.

ತಮಲೇಹಳ್ಳಿ ತಿಮ್ಮಪ್ಪ ಅವರ ಕೈ ಮುರಿದಿದೆ. ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ಜಖಂ ಗೊಂಡಿದ್ದು, ವಾಹನ ಚಾಲಕ ಸನ್ನ ಪುಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave A Reply