ವೈದ್ಯರ ಮನೆಯಲ್ಲಿ ಬೆಂಕಿ : ಡಾಕ್ಟರ್ ಸಹಿತ ಇಬ್ಬರು ಪುಟ್ಟ ಮಕ್ಕಳ ದಾರುಣ ಸಾವು

ಮನೆಗೆ ಬೆಂಕಿ ಬಿದ್ದ ಪರಿಣಾಮ ಅಪ್ಪ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆಯೊಂದು ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ. ಇಂದು ಮುಂಜಾನೆ ಈ ದುರ್ಘಟನೆ ನಡೆದಿದೆ. ತಿರುಪತಿ ಸಮೀಪದ ರೆನಿಗುಂಟದ ನಿವಾಸದಲ್ಲಿ ಈ ಅನಾಹುತ ನಡೆದಿದೆ. ಪ್ರಾಥಮಿಕ ತನಿಖಾ ಮೂಲಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.

 

ರೆಡಿಯೋಲಾಜಿಸ್ಟ್ (Rediologist) 49 ವರ್ಷ ಹಾಗೂ ಅವರ ಇಬ್ಬರು ಮಕ್ಕಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ರೆಡಿಯೋಲಾಜಿಸ್ಟ್ ಅವರ ಪತ್ನಿ ಹಾಗೂ ಅತ್ತೆ ಈ ದುರಂತದಲ್ಲಿ ಪಾರಾಗಿದ್ದಾರೆ. ಘಟನೆಯ ಬಗ್ಗೆ ತಿಳಿದು ಅಗ್ನಿಶಾಮಕದಳ ಸಿಬ್ಬಂದಿ ಹಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಆದರೆ ಎರಡನೇ ಮಹಡಿಯಲ್ಲಿ ರೆಡಿಯೋಲಾಜಿಸ್ಟ್ ರವಿಶಂಕರ್ ರೆಡ್ಡಿ (Ravishankar reddy) ಅವರ ಸುಟ್ಟು ಕರಕಲಾದ ರೀತಿಯಲ್ಲಿ ಪತ್ತೆಯಾಗಿದೆ.

ಈ ಅವಘಡದಲ್ಲಿ ಸಾವಿಗೀಡಾದ ವೈದ್ಯನ 11 ವರ್ಷದ ಪುತ್ರಿ ಹಾಗೂ 7 ವರ್ಷದ ಪುತ್ರ ಮನೆಯ ಮೊದಲ ಮಹಡಿಯಲ್ಲಿ ಬೆಂಕಿಯಿಂದ ಹೊಗೆ ಬರುತ್ತಿರುವುದನ್ನು ನೋಡಿ, ಮನೆಯ ಬಾತ್‌ರೂಮ್‌ನೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಪರಿಣಾಮ ಮಕ್ಕಳಿಬ್ಬರು ಉಸಿರುಕಟ್ಟಿ(suffocation) ಸಾವಿಗೀಡಾಗಿದ್ದಾರೆ. ಬೆಂಕಿ ಅವಘಡದ ಈ ವೇಳೆಯಲ್ಲಿ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ (Gas cylinder) ಕೂಡ ಸೋರಿಕೆ ಉಂಟಾಗಿದ್ದು, ಬೆಂಕಿಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿತು ಎನ್ನಲಾಗಿದೆ.

Leave A Reply

Your email address will not be published.