ತೊಟ್ಟಿಲಲ್ಲಿ ಮಲಗಿದ್ದ ಮಗು ಚಹಾದ ಪಾತ್ರೆಗೆ ಬಿದ್ದು ದಾರುಣ ಸಾವು

ತೊಟ್ಟಿಲಲ್ಲಿ ಮಲಗಿದ್ದ ಪುಟ್ಟ ಮಗುವೊಂದು, ಉರುಳಿ ಕೆಳಗಿದ್ದ ಬಿಸಿ ಚಹಾದ ಪಾತ್ರೆಗೆ ಬಿದ್ದು, ತೀವ್ರವಾಗಿ ಸುಟ್ಟ ಗಾಯಗಳಿಂದ ಮೃತಪಟ್ಟಿದೆ. ಈ ಘೋರ ಘಟನೆ ಮಹಾರಾಷ್ಟ್ರದ ಧುಲೆಯಲ್ಲಿ ಇಂದು ನಡೆದಿದೆ.

 

1 ವರ್ಷದ ಹೆಣ್ಣು ಮಗು ಮೃತಪಟ್ಟ ದುರ್ದೈವಿ. ತೊಟ್ಟಿಲಲ್ಲಿ ಆರಾಮವಾಗಿ ಮಲಗಿದ್ದ ಮಗು, ತೊಟ್ಟಿಲಿನ ಅಡಿಯಲ್ಲಿಟ್ಟಿದ್ದ ಬಿಸಿ ಚಹಾದ ಪಾತ್ರೆಗೆ ಉರುಳಿ ಬಿದ್ದಿದೆ. ಇದರಿಂದ ಹಸುಳೆಯ ಮೃದು ದೇಹ ಚಹಾದ ಬಿಸಿಗೆ ಸುಟ್ಟು ಹೋಗಿದೆ. ಇದನ್ನು ಕಂಡವರು ತಕ್ಷಣವೇ ಮಗುವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ಸುಟ್ಟು ಗಾಯಗೊಂಡಿದ್ದ ಹಸುಳೆ ಚಿಕಿತ್ಸೆ ವೇಳೆ ಮೃತಪಟ್ಟಿದೆ.

ಒಂದು ವರ್ಷದ ಕಂದಮ್ಮನ ಸಾವು ಆಕಸ್ಮಿಕ ಎಂದು ಶಿಂಡಖೇಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ, ಇದನ್ನು ಆ ಊರಿನ ಜನರು ಒಪ್ಪೋಕೆ ರೆಡಿ ಇಲ್ಲ. ಮಗು ತಾನಾಗಿಯೇ ಚಹಾದ ಪಾತ್ರೆಗೆ ಬಿದ್ದಿದ್ದೆಯೇ ಅಥವಾ ಏನು ಕಾರಣ ? ಈ ಸತ್ಯಾಸತ್ಯತೆಯ ವರದಿ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ತಿಳಿಯಲಿದೆ.

Leave A Reply

Your email address will not be published.