ಟಿಕ್ ಟಾಕ್ ನಲ್ಲಿ ಪ್ರೀತಿ, ಒಂದೇ ವರ್ಷದಲ್ಲಿ ಢಮಾರ್!
ಅದೊಂದು ಕಾಲವಿತ್ತು. ಮನೇಲಿ ತೋರಿಸಿದ ಹುಡುಗನನ್ನೇ ಮದುವೆ ಆಗುವುದು, ಮದುವೆ ಮನೆಯ ಮಂಟಪದ ದಿನವೇ ಹುಡುಗನ ಮುಖ ನೋಡುವುದು, ಅದರ ಮೊದಲು ಮಾತನಾಡುವಂತಿಲ್ಲ ಎಂಬುದಾಗಿ. ಆದರೆ ಕಾಲ ಬದಲಾದಂತೆ ಜನರು ಕೂಡ ಬದಲಾಗುತ್ತಾರೆ. ಇದಕ್ಕೆ ತಕ್ಕ ಅನುಗುಣವಾಗಿ ಮಾಧ್ಯಮಗಳು ಕೂಡ ಬದಲಾಗುತ್ತವೆ. ಇದರಲ್ಲಿ ಸಾಂಸ್ಕೃತಿಕ ಮಾಧ್ಯಮಗಳು ಕೂಡ ಒಂದು. ತಮ್ಮ ಪ್ರತಿಭೆಯನ್ನು ತೋರಿಸಿಕೊಳ್ಳಲು ಹಲವಾರು ಸಾಮಾಜಿಕ ಜಾಲತಾಣಗಳ ವೇದಿಕೆಗಳಿವೆ. ಇದರಲ್ಲಿ ಟಿಕ್ ಟಾಕ್ ಕೂಡ ಒಂದು.
ಇದು ಬ್ಯಾನ್ ಆಗಿದ್ದರೂ ಕೂಡ ಇದರಿಂದ ಅದೆಷ್ಟು ಜೋಡಿಗಳು ಒಂದಾಗಿದ್ದಾರೆ. ಇಂದು ಹೇಳಲು ಹೊರಟಿರುವಂತಹ ಕಥೆಯು ಕೂಡ ಇಂತಹ ಜೋಡಿಗಳ ಕಥೆಯೇ. ಈ ಒಂದು ವರ್ಷದ ಹಿಂದೆ ಒಂದು ಜೋಡಿ ಟಿಕ್ ಟಾಕ್ ನಲ್ಲಿ ಪ್ರೀತಿಸಿ ಮದುವೆಯಾದರು. ಟಿಕ್ ಟಾಕ್ನಲ್ಲಿ ಆರಂಭವಾದ ಇಬ್ಬರ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿ ಅಶ್ವಿನಿ ಹುಣಸೂರು ತಾಲೂಕಿನ ಮರೂರು ಗ್ರಾಮದ ಅಭಿಷೇಕ್ನನ್ನು 2021 ರ ಕೊರೊನಾ ವೇಳೆಯಲ್ಲಿ ದೇವಾಲಯವೊಂದರಲ್ಲಿ ಮದುವೆ ಮಾಡಿಕೊಂಡಿದ್ದಾರೆ.
ಮದುವೆಯಾಗಿ ಕೆಲವೇ ದಿನಗಳಲ್ಲಿ ಆಕೆ ಮನೆಯವರು ಗಂಡ ಹೆಂಡತಿಯನ್ನು ಬೇರೆ ಮಾಡಲು ಪ್ರಯತ್ನಿಸಿದರು. ಇದ್ದ ಗಂಡನ ಮನೆಯಲ್ಲಿ ಕೂಡ ಇವರಿಬ್ಬರನ್ನು ಬೇರೆ ಹಾಕಿದ್ದಾರೆ. ಇವರೆಲ್ಲರ ಸಂಕಷ್ಟದಿಂದ ಪಾರಾಗಲು ದನದ ಕೊಟ್ಟಿಗೆಯಲ್ಲಿ ಮಲಗಿದ್ದಾಳೆ ಈ ಹೆಣ್ಣು. ಗಂಡ ಮನೇಲಿ ಇಲ್ಲದಿದ್ದಾಗ ಅತ್ತೆ ಮತ್ತು ಮಾವ ಈಕೆಯ ಮೇಲೆ ದೈಹಿಕ ಹಲ್ಲೆಯನ್ನು ನಡೆಸಲು ಹಲವಾರು ಬಾರಿ ಎಸಗಿದ್ದಾರೆ. ಹೆತ್ತವರ ಮಾತನ್ನು ಕೇಳಿ ಬರುಬರುತ್ತಾ ಗಂಡನು ಕೂಡ ಹಲ್ಲೆಯನ್ನೂ ಮಾಡಲು ಆರಂಭಿಸಿದ ಎಂದು ಈಕೆ ತನ್ನ ಅಳಲನ್ನು ಹೇಳುತ್ತಿದ್ದಾಳೆ.
ಕೊನೆಗೆ ನನ್ನ ಮೇಲೆ ಅನುಮಾನಗಳನ್ನು ಪಡಲು ಆರಂಭಿಸಿದ
ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ವಾಟ್ಸಾಪ್ ನಲ್ಲಿ ಬೆತ್ತಲೆ ಫೋಟೋ ಹಾಕುತ್ತಿದ್ದಾಳೆಂದು ಪ್ರಚಾರ ಮಾಡಿದ್ದಾರೆ. ಇದೇ ನೆಪ ಇಟ್ಟುಕೊಂಡು ಪತಿ ಅಭಿಷೇಕ್ಗೆ ಮತ್ತೊಂದು ಮದುವೆಗೆ ಸಂಬಂಧ ಹುಡುಕುತ್ತಿರುವುದಾಗಿ ಅಶ್ವಿನಿ ದೂರಿನಲ್ಲಿ ಆರೋಪಿಸಿದ್ದಾರೆ.
ಅಷ್ಟೊಂದು ಪ್ರೀತಿ ಮಾಡಿ ಅಶ್ವಿನಿ ಇದೀಗ ಯಾರು ಇಲ್ಲದೆ ಅಲೆದಾಡುತ್ತಿದ್ದಾಳೆ. ಪೊಲೀಸರಲ್ಲಿ ದೂರನ್ನು ಕೂಡ ದಾಖಲಿಸಿದ್ದಾಳೆ.